Headlines

ಟಯರ್ ಸ್ಪೋಟಗೊಂಡು ಖಾಸಗಿ ಬಸ್ ಸಂಪೂರ್ಣ ಬೆಂಕಿಗಾಹುತಿ

ಶಿವಮೊಗ್ಗದ ಸಕ್ರೆಬೈಲ್ ಆನೆ ಬಿಡಾರದ ಬಳಿ ಖಾಸಗಿ ಬಸ್ಸೊಂದು ಅಗ್ನಿ ಅಕಸ್ಮಿಕಕ್ಕೆ ತುತ್ತಾಗಿರುವ ಘಟನೆ ಇಂದು ಬೆಳಗ್ಗಿನ ಜಾವ ನಡೆದಿದೆ. ಅದೃಷ್ಟಕ್ಕೆ ಯಾವ ಪ್ರಯಾಣಿಕರಿಗೂ ಅಪಾಯ ಉಂಟಾಗಿಲ್ಲ . ಖಾಸಗಿ ಬಸ್ ಮಂಗಳೂರಿನಿಂದ ದಾವಣಗೆರೆಗ ತೆರಳುತ್ತಿತ್ತು . ಜಾವ ನಾಲ್ಕು ಗಂಟೆಯ ಸುಮಾರಿಗೆ ಈ ಘಟನೆ ಸಂಭವಿಸಿದೆ. ಸಕ್ರೆಬೈಲ್ ಆನೆ ಬಿಡಾರದ ಬಳಿ ಬಸ್ ಬರುತ್ತಿದ್ದಾಗ ಬಸ್ ನ ಟಯರ್ ಬ್ಲಾಸ್ಟ್ ಆಗಿ ಇಡಿಬಸ್ ಬೆಂಕಿಗೆ ಕಾಣಿಸಿಕೊಂಡಿದೆ. ತಕ್ಷಣವೇ ಬಸನ್ನು ಚಾಲಕ ರಸ್ತೆ ಬದಿಗೆ ತಂದು. ನಿಲ್ಲಿಸಿದ್ದಾರೆ…

Read More

ದನದ ಕುತ್ತಿಗೆ ಕಡಿದು ತುಂಗಾ ನದಿಗೆ ಎಸೆದು ವಿಕೃತಿ ಮೆರೆದ ದುಷ್ಕರ್ಮಿಗಳು|thirthahalli news

ತೀರ್ಥಹಳ್ಳಿ : ಇಲ್ಲಿನ ಚಕ್ರತೀರ್ಥದಲ್ಲಿ ಕಿಡಿಗೇಡಿಗಳು ಹಸುವಿನ ಕತ್ತನ್ನು ಕಡಿದು ಬಳಿಕ ರುಂಡವನ್ನು ತುಂಗಾ ನದಿಗೆ ಎಸೆದು ಪರಾರಿ ಆಗಿರುವ ಘಟನೆ ನಡೆದಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಸ್ವಕ್ಷೇತ್ರದಲ್ಲಿ ವಿಕೃತಿ ಮೆರೆದಿದ್ದು, ಸ್ಥಳೀಯರು ದುಷ್ಕೃತ್ಯಕ್ಕೆ ಕಿಡಿಕಾರಿದ್ದಾರೆ. ಸ್ಥಳೀಯರು ಸ್ನಾನ ಮಾಡಲು ಹೊಳೆಗೆ ಇಳಿದಾಗ ವಿಷಯ ಬೆಳಕಿಗೆ ಬಂದಿದ್ದು ತುಂಗಾನದಿಯಲ್ಲಿ ನಾಲ್ಕು ಪವಿತ್ರ ಸ್ಥಳಗಳಲ್ಲಿ ಒಂದಾದ ಚಕ್ರತೀರ್ಥದಲ್ಲಿ ಈ ಅಮಾನವೀಯ ಘಟನೆ ಜರುಗಿದೆ. ದನದ ರುಂಡವನ್ನು ಬಿಟ್ಟು ಮಾಂಸ ತೆಗೆದುಕೊಂಡು ಹೋಗಲಾಗಿದೆ.  ಇದು ತೀರ್ಥಹಳ್ಳಿ ಪೊಲೀಸರ ವೈಫಲ್ಯ…

Read More

ಕೆಎಸ್‌ಆರ್‌ಟಿಸಿ ಬಸ್ ಹಾಗೂ ಬೈಕ್ ನಡುವೆ ಭೀಕರ ಡಿಕ್ಕಿ; ಸವಾರ ಸ್ಥಳದಲ್ಲೇ ಸಾವು

ಕೆಎಸ್‌ಆರ್‌ಟಿಸಿ ಬಸ್ ಹಾಗೂ ಬೈಕ್ ನಡುವೆ ಭೀಕರ ಡಿಕ್ಕಿ; ಸವಾರ ಸ್ಥಳದಲ್ಲೇ ಸಾವು A 25-year-old youth from Hunsur died on the spot in a horrific head-on collision between a KSRTC bus and a bike near Sagara, Shivamogga. The bus driver reportedly fled the scene; police investigation is underway. ಸಾಗರ : ಇಲ್ಲಿನ ಸಿರಿವಂತೆ–ಗಾಳಿಪುರ ಮಾರ್ಗ ಮಧ್ಯೆ ಇಂದು ಮಧ್ಯಾಹ್ನ ಸಂಭವಿಸಿದ ಭೀಕರ…

Read More

THIRTHAHALLI| ರಾಮಕೊಂಡಕ್ಕೆ ಭೇಟಿ ನೀಡಿದ ಆರ್ಟ್ ಆಫ಼್ ಲಿವಿಂಗ್ ನ ರವಿಶಂಕರ್ ಗುರೂಜಿ

ರಾಮಕೊಂಡಕ್ಕೆ ಭೇಟಿ ನೀಡಿದ ರವಿಶಂಕರ್ ಗುರೂಜಿ  ತೀರ್ಥಹಳ್ಳಿ ತಾಲೂಕಿನ ಪುರಾಣ ಪ್ರಸಿದ್ಧ ಶ್ರೀ ರಾಮ ಕೊಂಡಕ್ಕೆ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕರಾದ ರವಿಶಂಕರ್ ಗುರೂಜಿ ಭೇಟಿ ನೀಡಿದರು.  ಕೊಲ್ಲೂರು ಮುಕಾಂಬಿಕೆ ದರ್ಶನ ಮಾಡಿ ವಾಪಾಸ್ ಆಗುವ ವೇಳೆ ತೀರ್ಥಹಳ್ಳಿಗೆ ಭೇಟಿ ನೀಡಿದ ಅವರು ಪಾಪ ಪರಿಹಾರದ ಸಂಕೇತವಾದ ಪ್ರಸಿದ್ಧ ರಾಮ ಕೊಂಡದ ನೀರನ್ನು ಪ್ರೊಕ್ಷಣೆ ಮಾಡಿಕೊಂಡು ಪುನೀತರಾದರು.

Read More

ರಾಜ್ಯ ವಿಧಾನಸಭೆಯಿಂದ 18 ಬಿಜೆಪಿ ಶಾಸಕರು ಅಮಾನತು: ಹೊತ್ತೊಯ್ದು ಹೊರ ಹಾಕಿದ ಮಾರ್ಷಲ್ಸ್

ರಾಜ್ಯ ವಿಧಾನಸಭೆಯಿಂದ 18 ಬಿಜೆಪಿ ಶಾಸಕರು ಅಮಾನತು: ಹೊತ್ತೊಯ್ದು ಹೊರ ಹಾಕಿದ ಮಾರ್ಷಲ್ಸ್ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಪೀಠಕ್ಕೆ ಅಗೌರವ ತಂದಂತ ಆರೋಪದ ಹಿನ್ನಲೆಯಲ್ಲಿ ವಿಧಾನಸಭೆಯಲ್ಲಿ ಆರು ತಿಂಗಳುಗಳ ಕಾಲ ಬಿಜೆಪಿಯ 18 ಶಾಸಕರನ್ನು ಅಮಾನತುಗೊಳಿಸಿ ಸ್ಪೀಕರ್ ಯು.ಟಿ ಖಾದರ್ ಆದೇಶಿಸಿದ್ದರು. ಅಲ್ಲದೇ ತಕ್ಷಣವೇ ಹೊರ ನಡೆಯುವಂತೆ ಸ್ಪೀಕರ್ ಸೂಚಿಸಿದರು. ಆದರೇ ಸ್ಪೀಕರ್ ಸೂಚನೆಗೆ ಧಿಕ್ಕರಿಸಿ ಸದನದಲ್ಲೇ ಇದ್ದಂತ 18 ಬಿಜೆಪಿಯ ಅಮಾನತು ಶಾಸಕರನ್ನು ಮಾರ್ಷಲ್ ಗಳು ಹೊತ್ತೊಯ್ದು ಹೊರ ಹಾಕಿದರು. ಇಂದು ವಿಧಾನಸಭೆಯ ಕಲಾಪ ಮಧ್ಯಾಹ್ನ…

Read More

ಅಪ್ರಾಪ್ತ ಬಾಲಕಿಗೆ ಆಮಿಷವೊಡ್ಡಿ ಲೈಂಗಿಕ ದೌರ್ಜನ್ಯ ಆರೋಪ : ರಿಪ್ಪನ್ ಪೇಟೆಯಲ್ಲಿ ಗಂಡ-ಹೆಂಡತಿ ವಿರುದ್ಧ ಎಫ್‌ಐಆರ್

ಅಪ್ರಾಪ್ತ ಬಾಲಕಿಗೆ ಆಮಿಷವೊಡ್ಡಿ ಲೈಂಗಿಕ ದೌರ್ಜನ್ಯ ಆರೋಪ : ರಿಪ್ಪನ್ ಪೇಟೆಯಲ್ಲಿ ಗಂಡ-ಹೆಂಡತಿ ವಿರುದ್ಧ ಎಫ್‌ಐಆರ್ Rare POCSO case registered in Ripponpete. Police have booked a husband and wife over alleged sexual assault of a minor girl and are investigating the alleged involvement of seven other youths. ರಿಪ್ಪನ್‌ಪೇಟೆ: ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ಅಪರೂಪದ ರೀತಿಯ ಪೋಕ್ಸೋ (POCSO) ಪ್ರಕರಣ ದಾಖಲಾಗಿದ್ದು,…

Read More

ರಿಪ್ಪನ್ ಪೇಟೆ ಯಲ್ಲಿ ಸಡಗರ-ಸಂಭ್ರಮದಿಂದ ರಂಜಾನ್ ಆಚರಣೆ – ಪರಸ್ಪರ ಸಾಮರಸ್ಯದಿಂದ ಸಮಾಜದಲ್ಲಿ‌ ನೆಮ್ಮದಿ ಸಾಧ್ಯ : ಮುನೀರ್ ಸಖಾಫ಼ಿ|Ramadan

ರಿಪ್ಪನ್ ಪೇಟೆ : ಪಟ್ಟಣದ ಮೊಹಿಯುದ್ದೀನ್ ಜುಮ್ಮಾ ಮಸೀದಿ ಹಾಗೂ ಮೆಕ್ಕಾ ಮಸ್ಜಿದ್ ನ ಮುಸ್ಲಿಂ ಬಾಂಧವರುಗಳು ಧರ್ಮಗುರುಗಳಾದ  ಮುನೀರ್ ಸಖಾಫಿ ಮತ್ತು ಮುಪ್ತಿ ಇಜ್ ಹಾರ್ ಅಹಮದ್ ರವರ ನೇತೃತ್ವದಲ್ಲಿ ರಂಜಾನ್ ಹಬ್ಬವನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಿದರು. ಹೊಸನಗರ ರಸ್ತೆಯಿಂದ ಮೆರವಣಿಗೆ ಹೊರಟು ಸಾಗರ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಕಳೆದ ಒಂದು ತಿಂಗಳಿನಿಂದ ಉಪವಾಸ ಹಾಗೂ ಧಾರ್ಮಿಕ ಆಚರಣೆಗಳ ವಿಧಿವಿಧಾನಗಳನ್ನು ಪಾಲಿಸಿದ ಅವರುಗಳು ಶುಕ್ರವಾರ ಚಂದ್ರದರ್ಶನವಾದ ಹಿನ್ನೆಲೆಯಲ್ಲಿ  ಇಂದು…

Read More

ರಿಪ್ಪನ್ ಪೇಟೆ | ಕಾಡಾನೆ ದಾಳಿ ಪ್ರದೇಶಕ್ಕೆ ತಹಶೀಲ್ದಾರ್ ಭರತ್ ರಾಜ್ ಭೇಟಿ – ಸೂಕ್ತ ಪರಿಹಾರದ ಭರವಸೆ

ರಿಪ್ಪನ್ ಪೇಟೆ | ಕಾಡಾನೆ ದಾಳಿ ಪ್ರದೇಶಕ್ಕೆ ತಹಶೀಲ್ದಾರ್ ಭರತ್ ರಾಜ್ ಭೇಟಿ – ಸೂಕ್ತ ಪರಿಹಾರದ ಭರವಸೆ ರಿಪ್ಪನ್ ಪೇಟೆ: ಕೆರೆಹಳ್ಳಿ ವ್ಯಾಪ್ತಿಯಲ್ಲಿ ಕಾಡಾನೆಯೊಂದು ದಾಳಿ ನಡೆಸಿ ತೋಟ ಮತ್ತು ಗದ್ದೆಗಳನ್ನು ನಾಶಮಾಡಿರುವ ವಿಷಯ ತಿಳಿಯುತಿದ್ದಂತೆ ಹೊಸನಗರ ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ,ಸೂಕ್ತ ಪರಿಹಾರಕ್ಕೆ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದರು. ಶಿವಮೊಗ್ಗ ರಸ್ತೆಯ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿರುವ ಕೆಳಗಿನ ಕೆರೆಹಳ್ಳಿಯ ಟೀಕಪ್ಪ ಗೌಡರ ತೋಟಕ್ಕೆ ನುಗ್ಗಿದ ಕಾಡಾನೆ ಬಾಳೆಗಿಡಗಳನ್ನು ಮುರಿದು ನಾಶಮಾಡಿದ್ದು, ಅಕ್ಕಪಕ್ಕದ…

Read More

ಬುಲೆರೋ-ಬೈಕ್ ಮುಖಾಮುಖಿ ಡಿಕ್ಕಿ : ಗರ್ತಿಕೆರೆ ಮೂಲದ ಯುವಕ ಸ್ಥಳದಲ್ಲೇ ಸಾವು

ಬುಲೆರೋ-ಬೈಕ್ ಮುಖಾಮುಖಿ ಡಿಕ್ಕಿ : ಗರ್ತಿಕೆರೆ ಮೂಲದ ಯುವಕ ಸ್ಥಳದಲ್ಲೇ ಸಾವು ತೀರ್ಥಹಳ್ಳಿ ಪಟ್ಟಣದ ಬಾಳೆಬೈಲು ಸಮೀಪದಲ್ಲಿ ಇಂದು ಸಂಜೆ ನಡೆದ ದುರಂತ ಅಪಘಾತದಲ್ಲಿ ಬೈಕ್ ಹಾಗೂ ಬುಲೆರೋ ವಾಹನ ಮುಖಾಮುಖಿಯಾಗಿದ್ದು, ಬೈಕ್ ಸವಾರ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ. ಗರ್ತಿಕೆರೆ ಸಮೀಪದ ನಿಟ್ಟೂರು ಗ್ರಾಮದ ನಿವಾಸಿ ಚರಣ್ (23) ಎಂಬ ಯುವಕನೇ ದುರ್ದೈವಿ. ಈತ ತೀರ್ಥಹಳ್ಳಿಯಿಂದ ಮನೆಗೆ ವಾಪಸ್ಸಾಗುವ ವೇಳೆ ಅಪಘಾತ ಸಂಭವಿಸಿದೆ. ಚರಣ್ ರಿಪ್ಪನ್‌ಪೇಟೆ ಸರ್ಕಾರಿ ಪದವಿ ಕಾಲೇಜಿನಲ್ಲಿ ಪದವಿ ವ್ಯಾಸಾಂಗ ಮುಗಿಸಿದ್ದನು. ಇನ್ನೂ ಚರಣ್…

Read More

ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬೈಕ್ : ಯುವಕ ಸಾವು….

ಯುವಕನೊಬ್ಬ ಬೈಕಿನಲ್ಲಿ ತೆರಳುತಿದ್ದಾಗ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಮಣಿಪಾಲಕ್ಕೆ ಕರೆದುಕೊಂಡು ಹೋಗುವಾಗ ಮೃತಪಟ್ಟ ಘಟನೆ ತೀರ್ಥಹಳ್ಳಿ ತಾಲೂಕಿನ ರಾಮಕೃಷ್ಣಪುರದ ಬಳಿಯ ಕಾಸರವಳ್ಳಿ ಗ್ರಾಮದ ಕೋಟೆ ತೋಟ ಬಳಿ ನಡೆದಿದೆ. ಬುಧವಾರ ಸಂಜೆ  ಬಂಡಿಗಡಿಯ ಚಾವಲ್ಮನೆ ರಂಜನ್ ಕೆ(32)ಎಂಬ ಯುವಕ ತೀರ್ಥಹಳ್ಳಿಯಿಂದ ಮದುವೆ ಕಾರ್ಯಕ್ರಮ ಮುಗಿಸಿ ಊರಿಗೆ ಹೋಗುತ್ತಿದ್ದ ವೇಳೆ ರಾಮಕೃಷ್ಣಪುರದ ಬಳಿ ಬೈಕ್ ನಿಯಂತ್ರಣ ತಪ್ಪಿದ ಕಾರಣ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ತೀವ್ರ ಗಾಯವಾಗಿತ್ತು.  ಸ್ಥಳೀಯ ಸಾರ್ವಜನಿಕ ಆಂಬುಲೆನ್ಸ್ ಮೂಲಕ…

Read More
Exit mobile version