Headlines

Ripponpete | ಪುನೀತ್ ರಾಜ್‍ಕುಮಾರ್ ನಾಮಫಲಕಕ್ಕೆ ಬಣ್ಣ ಬಳಿದಿದ್ದಾರೆಂದು ಸುಳ್ಳು ಸುದ್ದಿ ವೈರಲ್ – ಹಳೆಯ ಘಟನೆಯನ್ನು ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುವ ಕಿಡಿಗೇಡಿಗಳು

Ripponpete | ಪುನೀತ್ ರಾಜ್‍ಕುಮಾರ್ ನಾಮಫಲಕಕ್ಕೆ ಬಣ್ಣ ಬಳಿದಿದ್ದಾರೆಂದು ಸುಳ್ಳು ಸುದ್ದಿ ಹಂಚುತ್ತಿರುವ ಕಿಡಿಗೇಡಿಗಳು –


ರಿಪ್ಪನ್ ಪೇಟೆ : ಪಟ್ಟಣದಲ್ಲಿ ಪುನೀತ್ ರಾಜ್‍ಕುಮಾರ್ ನಾಮಫಲಕಕ್ಕೆ ಬಣ್ಣ ಬಳೆದಿದ್ದಾರೆ ಹಾಗೂ ಪುನೀತ್ ಪುತ್ಥಳಿ ಕೆಡವಿದ್ದಾರೆ ಎಂದು ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಡುತಿದ್ದು ಇದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯ ಗವಟೂರಿನಲ್ಲಿ ಪುನೀತ್ ರಾಜ್‍ಕುಮಾರ್ ನಾಮಫಲಕಕ್ಕೆ ಬಣ್ಣ ಬಳಿದಿದ್ದಾರೆ ಹಾಗೂ ಪುನೀತ್ ಪುತ್ಥಳಿ ಕೆಡವಿದ್ದಾರೆ ಎಂದು ಸುಳ್ಳು ಸುದ್ದಿಗಳನ್ನು ಕಿಡಿಗೇಡಿಗಳು ಹಂಚಿಕೊಳ್ಳುತಿದ್ದು ಇದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ.

2021 ರ ಡಿಸೆಂಬರ್ ತಿಂಗಳಿನಲ್ಲಿ ರಿಪ್ಪನ್‌ಪೇಟೆಯ ಸಾಗರ ರಸ್ತೆಯ ಕುಕ್ಕಳಲೆ ಸಂಪರ್ಕ ರಸ್ತೆಗೆ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಇಡಲಾಗಿತ್ತು ತಡರಾತ್ರಿ ಕೆಲವು ದುಷ್ಕರ್ಮಿಗಳು ಪುನೀತ್ ರಾಜಕುಮಾರ್ ರವರ ನಾಮಫಲಕಕ್ಕೆ ಬಣ್ಣಹಚ್ಚಿ ವಿಕೃತಿ ಮೆರೆದಿದ್ದರು.

ಈ ಸಂಬಂಧ ಪ್ರತಿಭಟನೆಗಳು ನಡೆದು ಆ ನಂತರದಲ್ಲಿ ಅದೇ ಸ್ಥಳದಲ್ಲಿ ಪುನೀತ್ ರಾಜ್‍ಕುಮಾರ್ ನಾಮಫಲಕಕ್ಕೆ ಸಿದ್ದಗೊಂಡಿದ್ದು ಪ್ರಸ್ತುತ ಯಾವುದೇ ರೀತಿಯಾಗಿ ಗೊಂದಲವಾಗಿರುವುದಿಲ್ಲ ಆದರೆ ಕೆಲವು ಕಿಡಿಗೇಡಿಗಳು ಹಳೆಯ ಘಟನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಬ್ಬಿಸಿ ಗೊಂದಲ ಮೂಡಿಸುತಿದ್ದಾರೆ.

ವೈರಲ್ ಆದ ಮಾಹಿತಿಯಲ್ಲಿ ಪುತ್ಥಳಿ ಗೆ ಹಾನಿ ಎನ್ನಲಾಗುತಿದೆ ಆದರೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪುನೀತ್ ರಾಜ್‍ಕುಮಾರ್ ರವರ ಯಾವುದೇ ಪುತ್ಥಳಿ ಇರುವುದಿಲ್ಲ.

About The Author

Leave a Reply

Your email address will not be published. Required fields are marked *

Exit mobile version