Headlines

ವಿನೋಬನಗರ ಇನ್ಸ್ ಪೆಕ್ಟರ್ ಚಂದ್ರಕಲಾ ಅಮಾನತು

ವಿನೋಬನಗರ ಇನ್ಸ್ ಪೆಕ್ಟರ್ ಚಂದ್ರಕಲಾ ಅಮಾನತು ಶಿವಮೊಗ್ಗ: ವಿನೋಬ ನಗರ ಪೊಲೀಸ್ ಠಾಣೆಯ ಪಿಐ ಚಂದ್ರಕಲಾ  ಹೊಸಮನಿ ಅವರನ್ನು ಅಮಾನತ್ತುಗೊಳಿಸಿ ದಾವಣಗೆರೆ ಐಜಿಪಿ ರವಿಕಾಂತೇ ಗೌಡ ಆದೇಶಿಸಿದ್ದಾರೆ.ಕರ್ತವ್ಯದಲ್ಲಿ‌ ದುರ್ವರ್ತನೆ ಹಾಗೂ ಅಶಿಸ್ತು ಹಿನ್ನೆಲೆಯಲ್ಲಿ ‌ಸಸ್ಪೆಂಡ್ ಆಗಿರುವುದಾಗಿ ತಿಳಿದು ಬಂದಿದೆ. ನಾಲ್ಕು ದಿನದ ಹಿಂದೆ ನಗರದ ಎಲ್ಲಾ ಪಿಐ ಹಾಗೂ ಪಿಎಸೈಗಳ ಸಭೆಯನ್ನು ಎಸ್ಪಿ ಕರೆದಿದ್ದರು. ಚಂದ್ರಕಲಾ ಹೊರತು ಪಡಿಸಿ ಸಭೆಗೆ ಉಳಿದೆಲ್ಲಾ ಪಿಐ ಹಾಗೂ ಪಿಎಸ್ಐ ಗಳು ಹಾಜರಾಗಿದ್ದರು‌. ಚಂದ್ರಕಲಾರ ಗೈರನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ ಅವರು…

Read More

Ripponpete | ರಸ್ತೆ ಸುರಕ್ಷತಾ ನಿಯಮ ಪಾಲಿಸಿ : ವೀರೇಶ್

ರಸ್ತೆ ಸುರಕ್ಷತಾ ನಿಯಮ ಪಾಲಿಸಿ :  ವೀರೇಶ್  ರಿಪ್ಪನ್‌ಪೇಟೆ : ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲನೆಯಿಂದ ಅಪಘಾತಗಳು ಕಡಿಮೆಯಾಗಿ ಅಮೂಲ್ಯ ಜೀವಗಳು ಉಳಿಯಲಿವೆ ಎಂದು ಸಾಗರ ARTO ವೀರೇಶ್ ಹೇಳಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಪತ್ರಿಕಾ ದಿನಾಚರಣೆ ಅಂಗವಾಗಿ ಪತ್ರಕರ್ತ ಬಳಗ, ಎನ್‌ಎಸ್‌ಎಸ್ ಘಟಕ, ಪೊಲೀಸ್ ಠಾಣೆ ರಿಪ್ಪನ್‌ಪೇಟೆ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ ಸಾಗರ ಇವರ ಸಂಯುಕ್ತಾಶ್ರಯದಲ್ಲಿ ‘ವಾಹನ ಚಾಲನಾ ಪರವಾನಗಿ ಅರಿವು’ ಮತ್ತು ಎಲ್‌ಎಲ್‌ಆರ್ ನೋಂದಣಿ ಕಾರ್ಯಕ್ರಮದಲ್ಲಿ ಮಾತನಾಡಿ ಸುರಕ್ಷತಾ…

Read More

Ripponpete | ಪರಿಷತ್ ಚುನಾವಣೆ ಮತದಾನ ಮಾಡಿದ ಮಾಜಿ ಸಚಿವ ಹರತಾಳ ಹಾಲಪ್ಪ

Ripponpete | ಪರಿಷತ್ ಚುನಾವಣೆ ಮತದಾನ ಮಾಡಿದ ಮಾಜಿ ಸಚಿವ ಹರತಾಳ ಹಾಲಪ್ಪ ಪರಿಷತ್ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳು ಮೊದಲ ಪ್ರಾಶಸ್ತ್ಯದ ಮತಗಳಲ್ಲಿ ಗೆಲ್ಲಲಿದ್ದಾರೆ – ಆರಗ ಜ್ಞಾನೇಂದ್ರ  ರಿಪ್ಪನ್‌ಪೇಟೆ : ಇಂದು ನಡೆದ ನೈರುತ್ಯ ಪದವೀಧರ ಹಾಗೂ ಶಿಕ್ಷಕರ  ಕ್ಷೇತ್ರ ಚುನಾವಣೆಯಲ್ಲಿ ರಿಪ್ಪನ್‌ಪೇಟೆ ಬೂತ್ ಸಂಖ್ಯೆ ೪೪ ರಲ್ಲಿ  ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಹರತಾಳು ಹಾಲಪ್ಪನವರು ಮೊದಲ ಮತ ಚಲಾಯಿಸಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿ  ಪದವೀಧರ ಮತ್ತು ಶಿಕ್ಷಕರ  ಪ್ರಾಶಸ್ತö್ಯದ ಮತದಾನ…

Read More

ರಿಪ್ಪನ್‌ಪೇಟೆ : ಸರ್ಕಾರಿ ಶಾಲೆಯ ಇಬ್ಬರು ವಿದ್ಯಾರ್ಥಿಗಳು ವಾಲಿಬಾಲ್ ಪಂದ್ಯಾವಳಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ|volleyball

ರಿಪ್ಪನ್‌ಪೇಟೆ : ಬೆಂಗಳೂರಿನಲ್ಲಿ ನಡೆದ 14 ವರ್ಷದ ಒಳಗಿನ ಪ್ರಾಥಮಿಕ ಶಾಲಾ ಕ್ರೀಡಾಕೂಟದ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ವಿಜೇತರಾಗಿ ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಪಟ್ಟಣದ ಶಿವಮೊಗ್ಗ ರಸ್ತೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಪ್ರೀತಮ್ ಮತ್ತು ಗಣೇಶ್ ಕೆ ಎನ್ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ನಾಗಸಂದ್ರದಲ್ಲಿ ನಡೆದ ರಾಜ್ಯಮಟ್ಟದ 14 ವರ್ಷದೊಳಗಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ಅತ್ಯದ್ಭುತ ಪ್ರದರ್ಶನ ತೋರಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ಪಟ್ಟಣದ ದೊಡ್ಡಿನಕೊಪ್ಪ ನಿವಾಸಿ ಭೀಮರಾಜ್ ಮತ್ತು ರೇಣುಕಾ ದಂಪತಿಗಳ…

Read More

ಕಾಂಗ್ರೆಸ್​ ಕಾರ್ಯಕರ್ತೆ ವಿರುದ್ಧ ಅವಹೇಳನಕಾರಿ ಪೋಸ್ಟ್ ​​; ಚಕ್ರವರ್ತಿ ಸೂಲಿಬೆಲೆ ವಿರುದ್ಧ ಎಫ್​ಐಆರ್​ ದಾಖಲು|FIR

ಕಾಂಗ್ರೆಸ್​ ಕಾರ್ಯಕರ್ತೆ ವಿರುದ್ಧ ಅವಹೇಳನಕಾರಿ ಪೋಸ್ಟ್​​; ಚಕ್ರವರ್ತಿ ಸೂಲಿಬೆಲೆ ವಿರುದ್ಧ ಎಫ್​ಐಆರ್​ ದಾಖಲು ಸಾಮಾಜಿಕ ಜಾಲತಾಣದಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರು ಅವಹೇಳನಕಾರಿ ಕಾಮೆಂಟ್ ಮಾಡಿದ್ದಾರೆ ಎಂದು ಕೆಪಿಸಿಸಿ ಸಾಮಾಜಿಕ ಜಾಲತಾಣದ ಉಪಾಧ್ಯಕ್ಷೆ ಸೌಗಂಧಿಕ ರಘುನಾಥ್ ಅವರು ಆರೋಪಿಸಿ ದೂರು ನೀಡಿದ್ದರು. ಈ ದೂರಿನ ಮೇರೆಗೆ ಸೂಲಿಬೆಲೆ ವಿರುದ್ಧ ವಿನೋಬಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಇದೆ ತಿಂಗಳ 23 ರಂದು ಚಂದ್ರಯಾನ -3 ಯಶಸ್ವಿಗೆ ಪೂಜೆ ಮಾಡಿಸಿ ಫೋಟೋ ಹಾಕಿ ಎಂದು ಪೋಸ್ಟ್ ಹಾಕಿದ್ದ…

Read More

ಸಿದ್ದಿವಿನಾಯಕ ದೇವಸ್ಥಾನದ 5ನೇ ವರ್ಷದ ಪ್ರತಿಪ್ಠಾವರ್ಧಂತ್ಯುತ್ಸವ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ :

ರಿಪ್ಪನ್‌ಪೇಟೆ: ಇತಿಹಾಸ ಪ್ರಸಿದ್ದ ಶ್ರೀವರಸಿದ್ದಿವಿನಾಯಕ ಸ್ವಾಮಿ ಮತ್ತು ಮಾತೆ ಅನ್ನಪೂರ್ಣೇಶ್ವರಿ ಅಮ್ಮನವರ ದೇವಸ್ಥಾನದ ಐದನೇ ವರ್ಷದ ಪ್ರತಿಪ್ಠಾವರ್ಧಂತ್ಯುತ್ಸವದ ಎರಡು ದಿನದ ವಿಶೇಷ ಧಾರ್ಮಿಕ ಸಮಾರಂಭ ಪೂಜಾ ಕಾರ್ಯಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಇಂದು ಬೆಳಗ್ಗೆ ಆಗಮಿಕ ಪರಿವಾರದವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಸ್ವಾಗತಿಸಲಾಯಿತು. ನಂತರ ಶಿವಮೊಗ್ಗದ ವೇದ ಬ್ರಹ್ಮಶ್ರೀ ವಸಂತಭಟ್ ನೇತೃತ್ವದಲ್ಲಿ ಅಗಮಿಕ ಪರಿವಾರದವರು ದೇವತಾ ಪ್ರಾರ್ಥನೆ, ಗಣಪತಿ ಪೂಜೆ, ಸ್ವಸ್ತಿಪುಣ್ಯಾಹ ವಾಚನನಾಂದಿ ಸಮಾರಾಧನೆ ಮಹಾಸಂಕಲ್ಪ, ಋತ್ವಿಗ್ವರಣ, ಸಾಮೂಹಿಕ ಷಣ್ ನಾರೀಕೇಳ ಗಣಹೋಮ, ನವಗ್ರಹ ಹೋಮ, ತೀರ್ಥಪ್ರಸಾದ ವಿನಿಯೋಗ…

Read More

ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಲಘು ಹೃದಯಾಘಾತ: ಆಸ್ಪತ್ರೆಗೆ ದಾಖಲು

ಬೆಂಗಳೂರು:  ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಲಘು ಹೃದಯಾಘಾತವಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಲಘು ಹೃದಯಾಘಾತದಿಂದ ಅಸ್ವಸ್ಥರಾದ ನಟ ಪುನೀತ್ ರಾಜ್ ಕುಮಾರ್ ಅವರನ್ನ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಇಸಿಜಿ ಸೇರಿ ಹಲವು ಪರೀಕ್ಷೆಗಳನ್ನ ಮಾಡುತ್ತಿದ್ದು ಪುನೀತ್ ರಾಜ್ ಕುಮಾರ್ ಅವರ ಆರೋಗ್ಯ ಗಂಭೀರವಾಗಿದೆ ಎನ್ನಲಾಗಿದೆ. ಹಾಗೆಯೇ ಐಸಿಯುನಲ್ಲಿ ನಟ ಪುನೀತ್ ರಾಜ್ ಕುಮಾರ್ ಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ನಟ ಪುನೀತ್ ರಾಜ್ ಕುಮಾರ್…

Read More

ಡಿ ಬಾಸ್ ಅಂಡ್ ಗ್ಯಾಂಗ್ ಮಾಡಿದ ದೌರ್ಜನ್ಯಕ್ಕೆ ವೇಟರ್ ಹೆಂಡತಿ ಪೊರಕೆ ಹಿಡಿದು ನಿಂತಿದ್ದಳು : ಇಂದ್ರಜಿತ್ ಲಂಕೇಶ್ ಗಂಭೀರ ಆರೋಪ

ಬೆಂಗಳೂರು: ನಟ ದರ್ಶನ್​ರವರ ಲೋನ್ ಗೆ ಜಾಮೀನು ಕೇಸ್​ನಲ್ಲಿ ಸಿನಿಮಾ ನಿರ್ದೇಶಕ ಇಂದ್ರಜಿತ್​ ಲಂಕೇಶ್​ ಎಂಟ್ರಿಯಾಗಿದ್ದು, ಮೈಸೂರು ನಗರದಲ್ಲಿ ಪೊಲೀಸ್​ ಸ್ಟೇಷನ್​ಗಳು ಸೆಟಲ್​ಮೆಂಟ್​ ಸ್ಟೇಷನ್​ ಆಗಿದೆ. ಜನ ಸಾಮಾನ್ಯರಿಗೆ ನ್ಯಾಯವೇ ಸಿಗುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಗುರುವಾರ ಬೆಳಗ್ಗೆ ಗೃಹ ಸಚಿವ ಬೊಮ್ಮಾಯಿ ಅವರನ್ನು ಭೇಟಿಯಾದ ಇಂದ್ರಜಿತ್​ ಲಂಕೇಶ್​, ದರ್ಶನ್ ಹೆಸರಲ್ಲಿ ವಂಚನೆ ಯತ್ನ ಪ್ರಕರಣ, ಮೈಸೂರಿನಲ್ಲಿ ನಡೆದಿರೋ ಗಲಾಟೆ, ಮೈಸೂರಿನ ಸ್ಟಾರ್ ಹೋಟೆಲ್ ಒಂದರಲ್ಲಿ ನಡೆದಿರೋ ದಲಿತನ ಮೇಲಿನ ಹಲ್ಲೆ, ಅಲ್ಲಿನ ಬೆಳವಣಿಗೆ ಕುರಿತು ಮಾಹಿತಿಯನ್ನೊಳಗೊಂಡ…

Read More

ತೀರ್ಥಹಳ್ಳಿ:: ಸಂಘ ಪರಿವಾರದಿಂದ ಯಶಸ್ವಿ ರಕ್ತದಾನ ಶಿಬಿರ

ತೀರ್ಥಹಳ್ಳಿ : ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಸಂಘ ಪರಿವಾರಗಳು ತೀರ್ಥಹಳ್ಳಿ ಇವರು ಆಯೋಜಿಸಿದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ತೀರ್ಥಹಳ್ಳಿಯ ರೋಟರಿ ರಕ್ತನಿಧಿಯಲ್ಲಿ ಇಂದು ನಡೆಯಿತು. ಸಂಘ ಪರಿವಾರದ ಸದಸ್ಯರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ  ರೋಟರಿ ರಕ್ತನಿಧಿ ತೀರ್ಥಹಳ್ಳಿಯ ಟೆಕ್ನೀಶಿಯನ್ ಅರುಣ್ ಕೆರೋಡಿ  ಪೋಸ್ಟ್ ಮ್ಯಾನ್ ನ್ಯೂಸ್ ನೊಂದಿಗೆ ಮಾತನಾಡಿ “ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂದರೆ ಸೇವೆ, ಸಂಘದಿಂದ ಪ್ರತಿ ಮೂರು ತಿಂಗಳಿಗೊಮ್ಮೆ ಒಂದು ದಿನವನ್ನು ಸೇವೆಗೆ ಮುಡಿಪಾಗಿಡುತ್ತಾರೆ ಅದರಲ್ಲಿ ಸ್ವಚ್ಚತಾ…

Read More

ಗರ್ತಿಕೆರೆ ಪ್ರೌಡಶಾಲೆಗೆ SSLC ಪರೀಕ್ಷೆಯಲ್ಲಿ 100% ಫಲಿತಾಂಶ – ನಾಗರೀಕರಿಂದ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಸನ್ಮಾನ

ಗರ್ತಿಕೆರೆ ಪ್ರೌಡಶಾಲೆಗೆ SSLC ಪರೀಕ್ಷೆಯಲ್ಲಿ 100% ಫಲಿತಾಂಶ – ನಾಗರೀಕರಿಂದ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಸನ್ಮಾನ ರಿಪ್ಪನ್‌ಪೇಟೆ : ಗರ್ತಿಕೆರೆ ಗ್ರಾಮದಲ್ಲಿ 1986 ನೇ ಇಸವಿಯಲ್ಲಿ ಪ್ರಾರಂಭವಾದ ಸರ್ಕಾರಿ ಪ್ರೌಢಶಾಲೆಯಲ್ಲಿ ಈ ಬಾರಿ 100% ಫಲಿತಾಂಶ ಬಂದಿರುವ ಹಿನ್ನಲೆಯಲ್ಲಿ ನಾಗರೀಕ ಸಮಿತಿ ವತಿಯಿಂದ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರುಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಗರ್ತಿಕೆರೆ ಪಟ್ಟಣದ ನಾಗರೀಕ ಸಮಿತಿ ವತಿಯಿಂದ ಗ್ರಾಪಂ ಮಾಜಿ ಅಧ್ಯಕ್ಷ ಬಶೀರ್ ಅಹಮದ್ ರವರ ನೇತೃತ್ವದಲ್ಲಿ ಸರ್ಕಾರಿ ಪ್ರೌಢಶಾಲೆಗೆ SSLC ಪರೀಕ್ಷೆಯಲ್ಲಿ 100% ಫಲಿತಾಂಶ…

Read More
Exit mobile version