Headlines

8 ತಿಂಗಳ ಗರ್ಭಿಣಿ ಪತ್ನಿಯನ್ನು ಮಗನ ಕಣ್ಣೆದುರೇ ಹತ್ಯೆಗೈದು ಠಾಣೆಗೆ ಶರಣಾದ ಪಾಪಿ ಪತಿ!

8 ತಿಂಗಳ ಗರ್ಭಿಣಿ ಪತ್ನಿಯನ್ನು ಮಗನ ಕಣ್ಣೆದುರೇ ಹತ್ಯೆಗೈದು ಠಾಣೆಗೆ ಶರಣಾದ ಪಾಪಿ ಪತಿ! ತುಮಕೂರು : ಎಂಟು ತಿಂಗಳ ಗರ್ಭಿಣಿ ಹೆಣ್ಣು 8 ವರ್ಷದ ಮಗನ ಕಣ್ಣೆದುರುಗಡೆನೇ ನೇಣು ಬಿಗಿದು ಕೊಲೆ ಮಾಡಿ ಬಳಿಕ ಪತಿ ಠಾಣೆಗೆ ಹೋಗಿ ಶರಣಾಗಿರುವ ಘಟನೆ ತುಮಕೂರು ನಗರದ ಹೌಸಿಂಗ್ ಬೋರ್ಡ್ ನಲ್ಲಿ ನಿನ್ನೆ ನಡೆದಿದೆ. ಕೊಲೆಯಾದ ಗರ್ಭಿಣಿಯ ಹೆಸರು ನಗ್ಮಾ ಎಂದು ತಿಳಿದು ಬಂದಿದ್ದು ಇನ್ನೂ ಪಾಪಿ ಪತಿಯ ಹೆಸರು ಸೈಯದ್ ಎಂದು ತಿಳಿದುಬಂದಿದೆ. ಹೌದು ತುಮಕೂರು ನಗರದ…

Read More

ಮುಖ್ಯಮಂತ್ರಿ ಬದಲಾವಣೆ: ಸಿದ್ದರಾಮಯ್ಯ- ಡಿಕೆಶಿ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಕೋಡಿಹಳ್ಳಿ ಶ್ರೀ!

ಮುಖ್ಯಮಂತ್ರಿ ಬದಲಾವಣೆ: ಸಿದ್ದರಾಮಯ್ಯ- ಡಿಕೆಶಿ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಕೋಡಿಹಳ್ಳಿ ಶ್ರೀ! ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಕೂಗ ಹಲವು ದಿನಗಳಿಂದ ಜೋರಾಗುತ್ತಿದೆ. ಹೇಗಾದರೂ ಮಾಡಿ ಮುಖ್ಯಮಂತ್ರಿಯಾಗಲೇಬೆಕೆಂದು ಡಿಕೆ ಶಿವಕುಮಾರ್, ಇನ್ನಿಲ್ಲದ ಕಸರತ್ತು ನಡೆಸಿದ್ದು, ಇದಕ್ಕೆ ನಾನಾ ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಅದರಲ್ಲೂ ಇತ್ತೀಚೆಗೆ ಡಿಕೆ ಶಿವಕುಮಾರ್ ಅವರ ನಡೆ, ನುಡಿಗಳು ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಅದರಲ್ಲೂ ಕಾಂಗ್ರೆಸ್​ನಲ್ಲಿ ಹಲವು ರೀತಿಯ ಚರ್ಚೆಗೆ ಗ್ರಾಸವಾಗಿದೆ. ಇದರ ಮಧ್ಯೆ ಇದೀಗ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಕೋಡಿಹಳ್ಳಿ ಶ್ರೀ…

Read More

ವಿದ್ಯಾರ್ಥಿಗಳ ಸೇವಾ ಮನೋಭಾವನೆಗೆ ಎನ್‌ಎಸ್‌ಎಸ್‌ ಶಿಬಿರ ಸಹಕಾರಿ – ಶಾಸಕ ಬೇಳೂರು ಗೋಪಾಲಕೃಷ್ಣ

ವಿದ್ಯಾರ್ಥಿಗಳ ಸೇವಾ ಮನೋಭಾವನೆಗೆ ಎನ್‌ಎಸ್‌ಎಸ್‌ ಶಿಬಿರ ಸಹಕಾರಿ – ಶಾಸಕ ಬೇಳೂರು ಗೋಪಾಲಕೃಷ್ಣ ರಿಪ್ಪನ್‌ಪೇಟೆ : ವಿದ್ಯಾರ್ಥಿಗಳ ದಿಸೆಯಲ್ಲಿ ನಾಯಕತ್ವ ಗುಣ ಮತ್ತು ಸೇವಾ ಮನೋಭಾವನೆಯನ್ನು ಕಲಿಯಲು ಎನ್.ಎಸ್. ಎಸ್ ಯೋಜನಾ ಶಿಬಿರಗಳು ಸಹಕಾರಿಯಾಗಲಿವೆ,ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವುದರಿಂದ ಶಿಸ್ತಿನ ಜತೆಗೆ ಜೀವನದ ಅನುಭವವನ್ನು ಪಡೆಯಬಹುದು ಎಂದು ಕರ್ನಾಟಕ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರು ಹಾಗೂ ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಬೇಳೂರು ಗೋಪಾಲಕೃಷ್ಣ ಹೇಳಿದರು. ಪಟ್ಟಣದ ಸಮೀಪದ ಚಂದವಳ್ಳಿ ಗ್ರಾಮದಲ್ಲಿ ಸರ್ಕಾರಿ…

Read More

ಪೆಟ್ರೋಲ್‌ ಬಂಕ್‌ ಪಾಲುದಾರಿಕೆ ಕೊಡುವುದಾಗಿ 17 ಜನರಿಗೆ ಮೋಸ!? – ತೀರ್ಥಹಳ್ಳಿಯ ಮಹಿಳೆ ವಿರುದ್ಧ ಕೇಸ್ ದಾಖಲು !

ಪೆಟ್ರೋಲ್‌ ಬಂಕ್‌ ಪಾಲುದಾರಿಕೆ ಕೊಡುವುದಾಗಿ 17 ಜನರಿಗೆ ಮೋಸ!? – ತೀರ್ಥಹಳ್ಳಿಯ ಮಹಿಳೆ ವಿರುದ್ಧ ಕೇಸ್ ದಾಖಲು ! ತೀರ್ಥಹಳ್ಳಿ : ಪೆಟ್ರೋಲ್‌ ಬಂಕ್‌ ಪಾರ್ಟ್ನರ್‌ಶಿಪ್‌ ಕೊಡುವುದಾಗಿ ಹೇಳಿ ಕೋಟಿ, ಕೋಟಿ ಲೂಟಿ ಮಾಡಿದ ಆರೋಪ ತೀರ್ಥಹಳ್ಳಿಯ ಆರತಿ ಮತ್ತು ಆಕೆಯ ಪತಿಯ ವಿರುದ್ಧ ಕೇಳಿ ಬಂದಿದೆ.ತೀರ್ಥಹಳ್ಳಿಯ ಗೋಮತಿ ಪೆಟ್ರೋಲ್ ಬಂಕ್ ಓನರ್ ಆರತಿ ಮೇಲೆ ದೂರು ದಾಖಲಾಗಿದೆ. ಗೋಮತಿ ಪೆಟ್ರೋಲ್ ಬಂಕ್ ಓನರ್ ಆಗಿರುವ ಆರತಿ ಅವರು ಬಂಕ್ ತೋರಿಸಿ ಜನರಿಗೆ ಮಕ್ಮಲ್ ಟೋಪಿ ಹಾಕಿದ್ದಾರೆ….

Read More

ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಗೆ ಶಿವಮೊಗ್ಗ ಪ್ರವೇಶಕ್ಕೆ ನಿರ್ಬಂಧ

ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಗೆ ಶಿವಮೊಗ್ಗ ಪ್ರವೇಶಕ್ಕೆ ನಿರ್ಬಂಧ ಶಿವಮೊಗ್ಗ : ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರಿಗೆ ಶಿವಮೊಗ್ಗ ಪ್ರವೇಶಕ್ಕೆ ಅನುಮತಿ ನಿರಾಕಾರಿಸಲಾಗಿದೆ.ಅವರನ್ನು ಶಿವಮೊಗ್ಗ ಪ್ರವೇಶಿಸಿದಂತೆ ತಡೆದು ವಾಪಸ್ ಕಳುಹಿಸಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಶಿವಮೊಗ್ಗದಲ್ಲಿ ಇವತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದಕ್ಕಾಗಿ ಪ್ರಮೋದ್ ಮುತಾಲಿಕ್ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದರು. ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಅವರನ್ನು ಶಿವಮೊಗ್ಗ ಹೊರವಲಯದ ರಾಗಿಗುಡ್ಡದ ಬಳಿ ತಡೆದು ವಾಪಸ್ ಕಳುಹಿಸಲಾಗಿದೆ. ಫೆಬ್ರವರಿ 28 ರಿಂದ 7…

Read More

ಬಿ ವೈ ವಿಜಯೇಂದ್ರ ಕಾರಿಗೆ ಲಾರಿಗೆ ಡಿಕ್ಕಿ – ನಡೆದಿದ್ದೇನು.!!?

ಬಿ ವೈ ವಿಜಯೇಂದ್ರ ಕಾರಿಗೆ ಲಾರಿಗೆ ಡಿಕ್ಕಿ – ನಡೆದಿದ್ದೇನು.!!? ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ ಹೊಡೆದಿರುವ ಘಟನೆ ನಿನ್ನೆ ರಾತ್ರಿ ಚಿಕ್ಕಮಗಳೂರು ತಾಲೂಕಿನ ಲಕ್ಯಾ ಕ್ರಾಸ್ ಬಳಿ ನಡೆದಿದೆ. ಈ ಭೀಕರ ಅಪಘಾತದಲ್ಲಿ ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಿನ್ನೆ (ಶುಕ್ರವಾರ) ಬಸವ ತತ್ವ ಕಾರ್ಯಕ್ರಮ ಮುಗಿಸಿ ವಾಪಸ್ ಚಿಕ್ಕಮಗಳೂರು ನಗರದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಲಾರಿ ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಕಾರು…

Read More

RIPPONPETE | ಸಿದ್ದಪ್ಪನಗುಡಿಯ ಕಂತೆ ಸಿದ್ದೇಶ್ವರ ದೇವಸ್ಥಾನದಲ್ಲಿ ಅದ್ದೂರಿ ಮಹಾ ಶಿವರಾತ್ರಿ ವೈಭವ

RIPPONPETE | ಸಿದ್ದಪ್ಪನಗುಡಿಯ ಕಂತೆ ಸಿದ್ದೇಶ್ವರ ದೇವಸ್ಥಾನದಲ್ಲಿ ಅದ್ದೂರಿ ಮಹಾ ಶಿವರಾತ್ರಿ ವೈಭವ ರಿಪ್ಪನ್‌ಪೇಟೆ :ಇಲ್ಲಿನ ಸಮೀಪದ ಸಿದ್ದಪ್ಪನಗುಡಿಯ ಇತಿಹಾಸ ಪ್ರಸಿದ್ದ  ಶ್ರೀ ಕಂತೆ ಸಿದ್ದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶಿವರಾತ್ರಿಯ ಅಂಗವಾಗಿ ಗುರುವಾರ ದೇವರಿಗೆ ರುದ್ರಾಭಿಷೇಕ, ಅಭಿಷೇಕ, ಪೂಜಾ ಕೈಂಕರ್ಯಗಳು ಸಂಭ್ರಮದೊಂದಿಗೆ ಜರುಗಿತು. ಪಟ್ಟಣದ ಹೊರವಲಯದಲ್ಲಿರುವ ಸಿದ್ದಪನಗುಡಿ ಕಂತೆ ಸಿದ್ದೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ರುದ್ರಾಭಿಷೇಕ ಮತ್ತು ಅಭಿಷೇಕ ಅಲಂಕಾರ ಪೂಜೆ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.ನಂತರ ಮಹಾಮಂಗಳಾರತಿಯೊಂದಿಗೆ ಸಾರ್ವಜನಿಕರಿಗೆ ಸಾಮೂಹಿಕ ಅನ್ನಸಂತರ್ಪಣೆ ನೆರವೇರಿತು. ಈ ಸಂಧರ್ಭದಲ್ಲಿ ಶಾಸಕ…

Read More

ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ : ಈ ಸೂಚನೆ ಪಾಲನೆ ಕಡ್ಡಾಯ

ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ : ಈ ಸೂಚನೆ ಪಾಲನೆ ಕಡ್ಡಾಯ ಬೆಂಗಳೂರು: ರಾಜ್ಯದಲ್ಲಿ ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಲಿದ್ದು ಈಗಾಗಲೇ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಾರ್ಚ್ 1 ರಿಂದ 20 ರವರೆಗೆ  ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯಲಿವೆ. ವಿದ್ಯಾರ್ಥಿಗಳು ಪರೀಕ್ಷೆಯ ಸಮಯದಲ್ಲಿ ಕೆಲವು ಮುಖ್ಯ ಸೂಚನೆಗಳನ್ನು ಅನುಸರಿಸಬೇಕು. ಎಲ್ಲಾ ಪರೀಕ್ಷಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಮೊಬೈಲ್ ಫೋನ್, ಸ್ಮಾರ್ಟ್ ವಾಚ್ ಬಳಕೆ ನಿಷೇಧಿಸಲಾಗಿದೆ. ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ಪರೀಕ್ಷಾ ಕೇಂದ್ರಕ್ಕೆ ತರುವುದು ಮತ್ತು ಬಳಸುವುದನ್ನು…

Read More

ತೋಟದಲ್ಲಿ ಮೇಕೆ ಮೇಯಿಸುತಿದ್ದ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ – ಕ್ಷುಲ್ಲಕ ಕಾರಣಕ್ಕೆ ವಿಕೃತಿ ಮೆರೆದ ಪಾಪಿಗಳು

ತೋಟದಲ್ಲಿ ಮೇಕೆ ಮೇಯಿಸುತಿದ್ದ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ – ಕ್ಷುಲ್ಲಕ ಕಾರಣಕ್ಕೆ ವಿಕೃತಿ ಮೆರೆದ ಪಾಪಿಗಳು ರಾಜ್ಯದಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದ್ದು, ತೋಟದಲ್ಲಿ ಮೇಕೆ ಮೇಯಿಸುತ್ತಿದ್ದ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದಲ್ಲಿ ನಡೆದಿದೆ. ಶಿಕಾರಿಪುರ ತಾಲೂಕಿನ ಚಿಕ್ಕಜೋಗಿಹಳ್ಳಿ ಗ್ರಾಮದ 50 ವರ್ಷದ ದಲಿತ ಮಹಿಳೆ ಮೇಲೆ ತೋಟದ ಮಾಲೀಕ ಹಲ್ಲೆ ನಡೆಸಿದ್ದಾನೆ.ಅವರನ್ನು ಸ್ಥಳೀಯರು ಶಿಕಾರಿಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ತೋಟದಲ್ಲಿ ಮಹಿಳೆ ಮೇಕೆಗಳನ್ನ ಮೇಯಿಸುತ್ತಿದ್ದಾಳೆಂದು ಆಕ್ರೋಶಗೊಂಡ…

Read More

ಅಪಘಾತ ತಡೆಗೆ ರಿಪ್ಪನ್‌ಪೇಟೆ ಪೊಲೀಸರಿಂದ ವಿಶೇಷ ಕಾರ್ಯಾಚರಣೆ

ಅಪಘಾತ ತಡೆಗೆ ರಿಪ್ಪನ್‌ಪೇಟೆ ಪೊಲೀಸರಿಂದ ವಿಶೇಷ ಕಾರ್ಯಾಚರಣೆ ರಿಪ್ಪನ್‌ಪೇಟೆ : ಅಪಘಾತಗಳ ನಿಯಂತ್ರಣಕ್ಕಾಗಿ, ವಾಹನಗಳಿಗೆ ರಿಫ್ಲೆಕ್ಟರ್ ಸ್ಟಿಕ್ಕರ್ ಅಂಟಿಸುವ ವಿಶೇಷ ಕಾರ್ಯಾಚರಣೆಯನ್ನು ಪಿಎಸ್‌ಐ ಪ್ರವೀಣ್ ಎಸ್ ಪಿ ನೇತ್ರತ್ವದ ಸಿಬ್ಬಂದಿಗಳು ನಡೆಸಿದ್ದಾರೆ. ಅಪಘಾತಗಳ ನಿಯಂತ್ರಣ ಹಾಗೂ ಸಾರ್ವಜನಿಕರ ಸುರಕ್ಷತೆ ಹಿತದೃಷ್ಟಿಯಿಂದ, ವಾಹನಗಳಿಗೆ ರಿಫ್ಲೆಕ್ಟರ್ ಸ್ಟಿಕ್ಕರ್ ಅಂಟಿಸುವ ಕಾರ್ಯಾಚರಣೆಯನ್ನು ಜಿಲ್ಲೆಯಾದ್ಯಂತ ನಡೆಸಲಾಗುತ್ತಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ರಾತ್ರಿ ವೇಳೆ ಸರಕು ಸಾಗಾಣೆ ವಾಹನಗಳು, ಲಾರಿ, ಟ್ರ್ಯಾಕ್ಟರ್ ಸೇರಿದಂತೆ ಭಾರೀ ವಾಹನಗಳ ಗೋಚರತೆ ಹೆಚ್ಚಿಸಲು ಸದರಿ ವಿಶೇಷ ಕಾರ್ಯಾಚರಣೆಯನ್ನು…

Read More
Exit mobile version