Headlines

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

ಹೊಟೇಲ್ ಗೆ ರಿವ್ಯೂ ಟಾಸ್ಕ್ ನೆಪ –  ವ್ಯಕ್ತಿ 11.35 ಲಕ್ಷ ವಂಚನೆ , ಪ್ರಕರಣ ದಾಖಲು

ಹೊಟೇಲ್ ಗೆ ರಿವ್ಯೂ ಟಾಸ್ಕ್ ನೆಪ –  ವ್ಯಕ್ತಿ 11.35 ಲಕ್ಷ ವಂಚನೆ , ಪ್ರಕರಣ ದಾಖಲು ಶಿವಮೊಗ್ಗ : ಸೈಬರ್ ಅಪರಾಧಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಹೊಸ ಹೊಸ ತಂತ್ರಗಳನ್ನು ಬಳಸಿ ವಂಚಕರು ಜನರನ್ನು ಬಲೆಗೆ ಬೀಳಿಸುತ್ತಿದ್ದಾರೆ. ಶಿವಮೊಗ್ಗದ ಒಬ್ಬ ವ್ಯಕ್ತಿ ಬರೋಬ್ಬರಿ ₹11,35,900 ಹಣವನ್ನು ಸೈಬರ್ ಕಳ್ಳರಿಗೆ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಪೊಲೀಸರ ಮಾಹಿತಿ ಪ್ರಕಾರ, ದೂರುದಾರರ ವಾಟ್ಸಾಪ್‌ಗೆ ಪರಿಚಿತ ಮೊಬೈಲ್ ಸಂಖ್ಯೆಯಿಂದ ಒಂದು ಲಿಂಕ್ ಕಳುಹಿಸಲಾಗಿತ್ತು. ಆ ಲಿಂಕ್‌ನ್ನು ಕ್ಲಿಕ್ ಮಾಡಿದ…

Read More

RIPPONPETE | ಚರ್ಚ್ ಮುಂಭಾಗದಲ್ಲಿ ಕರು ಅಡ್ಡ ಬಂದು ಮಾರುತಿ ಒಮಿನಿ ಕಾರು ಪಲ್ಟಿ

RIPPONPETE | ಚರ್ಚ್ ಮುಂಭಾಗದಲ್ಲಿ ಕರು ಅಡ್ಡ ಬಂದು ಮಾರುತಿ ಒಮಿನಿ ಕಾರು ಪಲ್ಟಿ ರಿಪ್ಪನ್‌ಪೇಟೆ ; ಕರುವೊಂದು ಅಡ್ಡ ಬಂದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಮಾರುತಿ ಓಮಿನಿ‌ ಕಾರು ಪಲ್ಟಿಯಾಗಿ ಬಿದ್ದಿರುವ ಘಟನೆ ಇಂದು ಮುಂಜಾನೆ ನಡೆದಿದೆ. ಪಟ್ಟಣದ ತೀರ್ಥಹಳ್ಳಿ ರಸ್ತೆಯ ಗುಡ್ ಶೆಫರ್ಡ್ ಚರ್ಚ್ ಮುಂಭಾಗದಲ್ಲಿ ಇಂದು ಮುಂಜಾನೆ 5.40 ರ ಸಮಯದಲ್ಲಿ ಜಾನುವಾರು ಅಡ್ಡ ಬಂದ ಹಿನ್ನಲೆಯಲ್ಲಿ ದಿನಪತ್ರಿಕೆಯನ್ನು ಸಾಗಿಸುತಿದ್ದ ಮಾರುತಿ ಓಮಿನಿ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಉರುಳಿಬಿದ್ದಿದೆ….

Read More

ಶಿವಮೊಗ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರ ಅದ್ದೂರಿ ಪದಗ್ರಹಣ ಸಮಾರಂಭ – ನೂತನ ಅಧ್ಯಕ್ಷೆ ಶ್ವೇತಾ ಬಂಡಿ ಹೇಳಿದ್ದೇನು.!?

ಶಿವಮೊಗ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರ ಅದ್ದೂರಿ ಪದಗ್ರಹಣ ಸಮಾರಂಭ – ನೂತನ ಅಧ್ಯಕ್ಷೆ ಶ್ವೇತಾ ಬಂಡಿ ಹೇಳಿದ್ದೇನು.!? ಶಿವಮೊಗ್ಗ : ನೂತನ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡಿರುವ ಶ್ವೇತಾ ಬಂಡಿ ಅದ್ದೂರಿ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ತುಂಗಭದ್ರಾ ನದಿಯಷ್ಟು ಬೃಹತ್ ಶಕ್ತಿ  ತುಂಬಿದೆ ಎಂದು ಬಣ್ಣಿಸಿದರು. ಬಂಜಾರ ಕನ್ವೆಕ್ಷನ್ ಹಾಲ್‌ನಲ್ಲಿ ನಡೆದ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಸಮಾಜದಲ್ಲಿ ಧ್ವನಿ ಇಲ್ಲದ ಮಹಿಳೆಯರನ್ನು ನಾಲ್ಕು ಗೋಡೆಗಳ…

Read More

ಚೌಡೇಶ್ವರಿ ದರ್ಶನಕ್ಕೆ ಬಂದ ಭಕ್ತರಿದ್ದ ಟಿಟಿ ವಾಹನ ಪಲ್ಟಿ – 12 ಜನರಿಗೆ ಗಾಯ , ಆಸ್ಪತ್ರೆಗೆ ದೌಡಾಯಿಸಿದ ಶಾಸಕ ಬೇಳೂರು

ಚೌಡೇಶ್ವರಿ ದರ್ಶನಕ್ಕೆ ಬಂದ ಭಕ್ತರಿದ್ದ ಟಿಟಿ ವಾಹನ ಪಲ್ಟಿ – 12 ಜನರಿಗೆ ಗಾಯ , ಆಸ್ಪತ್ರೆಗೆ ದೌಡಾಯಿಸಿದ ಶಾಸಕ ಬೇಳೂರು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಿಗಂದೂರು ರಸ್ತೆಯಲ್ಲಿ ಟಿಟಿ ವಾಹನವೊಂದು ಪಲ್ಟಿಯಾಗಿದೆ. ಪರಿಣಾಮ ಈ ಘಟನೆಯಲ್ಲಿ 13 ಮಂದಿಗೆ ಗಾಯವಾಗಿದೆ. ಗಾಯಾಳುಗಳನ್ನು ಸಾಗರ ಆಸ್ಪತ್ರೆಗೆ ದಾಖಲಿಸಲಾಗಿದೆ, ಸ್ಥಳಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗಾಯಾಳುಗಳ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಿದ್ದಾರೆ. ಬೆಂಗಳೂರು ಮೂಲದ ಸಿಗಂದೂರು ಚೌಡೇಶ್ವರಿಯ ದರ್ಶನಕ್ಕಾಗಿ ಸಾಗರದವರೆಗೂ ಟ್ರೈನ್‌ನಲ್ಲಿ ಬಂದಿದ್ದರು….

Read More

RIPPONPETE | ಪಡಿತರ ಅಕ್ಕಿ ಅಕ್ರಮ ದಾಸ್ತಾನು – ಪಿಎಸ್ಐ ರಾಜುರೆಡ್ಡಿ ನೇತೃತ್ವದ ಸಿಬ್ಬಂದಿಗಳಿಂದ ದಾಳಿ, ಮಾಲು ಸಮೇತ ಓರ್ವ ವಶಕ್ಕೆ.!

RIPPONPETE | ಪಡಿತರ ಅಕ್ಕಿ ಅಕ್ರಮ ದಾಸ್ತಾನು – ಪಿಎಸ್ಐ ರಾಜುರೆಡ್ಡಿ ನೇತೃತ್ವದ ಸಿಬ್ಬಂದಿಗಳಿಂದ ದಾಳಿ, ಮಾಲು ಸಮೇತ ಓರ್ವ ವಶಕ್ಕೆ.! ರಿಪ್ಪನ್‌ಪೇಟೆ, ಸೆಪ್ಟೆಂಬರ್ 27:ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಡಿತರ ಅಕ್ಕಿಯ ಅಕ್ರಮ ದಾಸ್ತಾನು ಪತ್ತೆಯಾಗಿದ್ದು ಪಟ್ಟಣದ ಪಿಎಸ್ ಐ ರಾಜುರೆಡ್ಡಿ ನೇತ್ರತ್ವದ ಸಿಬ್ಬಂದಿಗಳು ದಾಳಿ ನಡೆಸಿ ಮಾಲು ಸಮೇತ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಸರ್ಕಾರ ಬಡ ಕುಟುಂಬಗಳಿಗೆ ಉಚಿತವಾಗಿ ವಿತರಿಸುವ ಪಡಿತರ ಅಕ್ಕಿಯನ್ನು ಕೆಲವು ಜನರು ಅಕ್ರಮವಾಗಿ ಸಂಗ್ರಹಿಸಿ ಮಾರುಕಟ್ಟೆಗೆ…

Read More

ಶಿವಮೊಗ್ಗದ ಮೆಡಿಕಲ್ ಕಾಲೇಜಿನ ವೈದ್ಯೆ ಗೆ 1 ಕೋಟಿ 81 ಲಕ್ಷ  ರೂ ವಂಚನೆ

ಶಿವಮೊಗ್ಗದ ಮೆಡಿಕಲ್ ಕಾಲೇಜಿನ ವೈದ್ಯೆ ಗೆ 1 ಕೋಟಿ 81 ಲಕ್ಷ  ರೂ ವಂಚನೆ ಶಿವಮೊಗ್ಗ : ನಗರದ ಪ್ರತಿಷ್ಠಿತ ಮೆಡಿಕಲ್ ಕಾಲೇಜಿನ ಕಾರ್ಯನಿರ್ವಹಿಸುವ  ವೈದ್ಯೆ ಗೆ  1 ಕೋಟಿ 81 ಲಕ್ಷದ 33 ಸಾವಿರದ 770 ರೂಗಳ ಮೋಸ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ನಗರದ ಪ್ರತಿಷ್ಠಿತ ಮೆಡಿಕಲ್ ಕಾಲೇಜಿನ ಕಾರ್ಯನಿರ್ವಹಿಸುವ ವೈದ್ಯೆ ಒಬ್ಬರಿಗೆ ಒಬ್ಬ ಅಪರಿಚಿತ ವ್ಯಕ್ತಿ ದಿನಾಂಕ 26/4 /2025 ರಂದು ಕರೆ ಮಾಡಿ ನಾವು ಬುಲ್ ಮಾರ್ಕೆಟ್  ಎಂಬ‌ ಕಂಪನಿ…

Read More

ವಿದ್ಯುತ್ ಸ್ಪರ್ಶ – ವಿದ್ಯಾರ್ಥಿ ಸಾವು

ವಿದ್ಯುತ್ ಸ್ಪರ್ಶ – ವಿದ್ಯಾರ್ಥಿ ಸಾವು ಶಿವಮೊಗ್ಗ: ಹಾಡೋನಹಳ್ಳಿಯಲ್ಲಿ ವಿದ್ಯುತ್ ಸ್ಪರ್ಶವಾಗಿ ಬಾಲಕನೊಬ್ಬ ಜೀವ ಕಳೆದುಕೊಂಡಿರುವ ಘಟನೆ ವರದಿಯಾಗಿದೆ. ಹಾಡೋನಹಳ್ಳಿಯ ಅಂಬಾಭವಾನಿ ದೇವಸ್ಥಾನಕ್ಕೆ ನವರಾತ್ರಿಯ ಹಿನ್ನೆಲೆಯಲ್ಲಿ ವಿದ್ಯುತ್ ದೀಪದ ಅಲಂಕಾರ ಮಾಡಲಾಗಿದೆ. ದೇವಸ್ಥಾನಕ್ಕೆ ಹಾಕಿದ ಸೀರಿಯಲ್ ಸೆಟ್ ಅಲಂಕಾರವನ್ನ ದೇವಸ್ಥಾನದ ಗೇಟಿಗೆ ಸಹ ಹಾಕಲಾಗಿದೆ. ಈ ವೇಳೆ ಸೀರಿಯಲ್ ಸೆಟ್ ಸ್ಕಿನ್ ಆಗಿದ್ದರಿಂದ ಗೇಟ್ ಗೂ ವಿದ್ಯುತ್ ಚ್ಛಕ್ತಿ ಹರಿದಿದೆ. ಗ್ರಾಮದ ಬಾಲಕ ಸಮರ್ಥ (೧೪) ಗೇಟನ್ನು ಮುಟ್ಟುತ್ತಿದ್ದಂತೆ ಶಾಕ್ ಹೊಡೆದು ಅಸ್ವಸ್ಥನಾಗಿದ್ದಾನೆ. ಆಸ್ಪತ್ರೆಗೆ ತರುವಾಗ ಬಾಲಕ…

Read More

ಲೈಂಗಿಕ ದೌರ್ಜನ್ಯ ಪ್ರಕರಣ ; 19 ವರ್ಷದ ಯುವಕನಿಗೆ 20 ವರ್ಷ ಜೈಲು , 80 ಸಾವಿರ ದಂಡ ವಿಧಿಸಿ ಕೋರ್ಟ್ ಆದೇಶ

ಲೈಂಗಿಕ ದೌರ್ಜನ್ಯ ಪ್ರಕರಣ ; 19 ವರ್ಷದ ಯುವಕನಿಗೆ 20 ವರ್ಷ ಜೈಲು , 80 ಸಾವಿರ ದಂಡ ವಿಧಿಸಿ ಕೋರ್ಟ್ ಆದೇಶ ಶಿವಮೊಗ್ಗ: 15 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಭದ್ರಾವತಿ ತಾಲ್ಲೂಕಿನ 19 ವರ್ಷದ ಯುವಕನಿಗೆ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ₹80 ಸಾವಿರ ದಂಡ ವಿಧಿಸಿ ಮಂಗಳವಾರ ಆದೇಶಿಸಿದೆ. 2022ರಲ್ಲಿ ಬಾಲಕಿಯ ಲೈಂಗಿಕ ದೌರ್ಜನ್ಯ ನಡೆಸಿದ್ದ ಆರೋಪಿ ನಂತರ ಆಕೆಯನ್ನು ಮದುವೆಯಾಗಿದ್ದ. ಈ…

Read More

ನೇಣಿಗೆ ಕೊರಳೊಡ್ಡಲು ಮುಂದಾದ ವ್ಯಕ್ತಿ | ವೀಡಿಯೋ ಕಾಲ್ ನಲ್ಲಿ ಆತ್ಮ*ಹತ್ಯೆ ಬಗ್ಗೆ ಮಾಹಿತಿ | ಅಷ್ಟರಲ್ಲಿ ಮನೆಗೆ ಬಂದ ಪೊಲೀಸ್‌, ಆಗಿದ್ದೇನು?

ಫ್ಯಾನಿಗೆ ಕೊರಳೊಡ್ಡಲು ಮುಂದಾದ ವ್ಯಕ್ತಿ | ವೀಡಿಯೋ ಕಾಲ್ ನಲ್ಲಿ ಆತ್ಮ*ಹತ್ಯೆ ಬಗ್ಗೆ ಮಾಹಿತಿ | ಅಷ್ಟರಲ್ಲಿ ಮನೆಗೆ ಬಂದ ಪೊಲೀಸ್‌, ಆಗಿದ್ದೇನು? ಶಿವಮೊಗ್ಗ: ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಳ್ಳಲು ಯತ್ನಿಸಿದ್ದ ವ್ಯಕ್ತಿಯನ್ನು ಪೊಲೀಸರು ರಕ್ಷಿಸಿದ್ದಾರೆ. ಶಿವಮೊಗ್ಗ ನಗರದ ಆಲ್ಕೊಳ ಬಡಾವಣೆಯ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಳ್ಳುವುದಾಗಿ ವ್ಯಕ್ತಿಯೊಬ್ಬರು ತಮ್ಮ ಸಂಬಂಧಿಕರಿಗೆ ವಿಡಿಯೋ ಕಾಲ್‌ನಲ್ಲಿ ತಿಳಿಸಿದ್ದರು. ಈ ಕುರಿತು ಮಾಹಿತಿ ಪಡೆದ 112 ಇಆರ್‌ಎಸ್‌ಎಸ್‌ ಸಿಬ್ಬಂದಿ ಜಗದೀಶ್ ಮತ್ತು ಚಾಲಕ ಮಂಜುನಾಥ್…

Read More

ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕಕ್ಕೆ ಹೊಸ ನೇತೃತ್ವ – ಶ್ವೇತಾ ಬಂಡಿ ಅಧಿಕಾರ ಸಮಾರಂಭ ನಾಳೆ

ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕಕ್ಕೆ ಹೊಸ ನೇತೃತ್ವ – ಶ್ವೇತಾ ಬಂಡಿ ಅಧಿಕಾರ ಸಮಾರಂಭ ನಾಳೆ | ಸಮಾರಂಭದಲ್ಲಿ ಗೀತಾ ಶಿವರಾಜ್‌ಕುಮಾರ್ ಸೇರಿದಂತೆ ಅನೇಕ ಗಣ್ಯರು ಭಾಗಿ ಶಿವಮೊಗ್ಗ: ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ವತಿಯಿಂದ ಸೆಪ್ಟೆಂಬರ್ 27ರಂದು ಬೆಳಿಗ್ಗೆ 11 ಗಂಟೆಗೆ ನಗರದ ಬಂಜಾರ ಕನ್ವೆನ್ಸನ್ ಹಾಲ್‌ನಲ್ಲಿ ನೂತನ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡಿರುವ ಶ್ವೇತಾ ಬಂಡಿ ಅವರ ಅಧಿಕಾರ ಪದಗ್ರಹಣ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಮಾಹಿತಿ ನೀಡಿದರು. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ…

Read More
Exit mobile version