Headlines

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

ಹೆದ್ದಾರಿಪುರ : ಯಡಗುಡ್ಡೆ ಅಂಗನಾವಾಡಿ ಕಟ್ಟಡಕ್ಕಿಲ್ಲ ಉದ್ಘಾಟನೆ ಭಾಗ್ಯ – ಗ್ರಾಮಸ್ಥರ ಆಕ್ರೋಶ|yadagudde

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ಯಡಗುಡ್ಡೆ ಗ್ರಾಮದಲ್ಲಿ 16 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾದ ಅಂಗನವಾಡಿ ಕೇಂದ್ರದ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡು 6 ತಿಂಗಳು ಕಳೆದಿದ್ದರೂ ಉದ್ಘಾಟನೆ ಭಾಗ್ಯ ಕಾಣದೆ ಪಾಳು ಬಿದ್ದಂತಾಗಿದೆ.ಹೀಗೇ ದಿನ ಕಳೆದರೆ ಹೊಸ ಕಟ್ಟಡ ಶೀಥಿಲಾವಸ್ಥೆ ತಲುಪುದರಲ್ಲಿ ಅನುಮಾನ ಇಲ್ಲ ಎಂದು ಯಡಗುಡ್ಡೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಅಂಗನವಾಡಿ ಕೇಂದ್ರದ ಮಕ್ಕಳು ಅಂಗನವಾಡಿ ಶಿಕ್ಷಕಿಯ ಮನೆಯಲ್ಲಿ ಕಲಿಕೆಯಲ್ಲಿ ತೊಡಗಿದ್ದಾರೆ.ಲಕ್ಷಾಂತರ ರೂ ವೆಚ್ಚ ಮಾಡಿ ನಿರ್ಮಿಸಿರುವ ಈ…

Read More

ಕಾರು ಕಳ್ಳತನ ಪ್ರಕರಣ – ತನಿಖೆ ನಡೆಸಿ ಕಾರು ಮಾಲೀಕನನ್ನೆ ಬಂಧಿಸಿದ ಪೊಲೀಸರು : ವಿಶೇಷ ಪ್ರಕರಣ ಇಲ್ಲಿದೆ ನೋಡಿ…..!!!|theft

ಕಾರು ಕಳ್ಳತನದ ಪ್ರಕರಣವೊಂದರಲ್ಲಿ  ದೂರು ನೀಡಿದ ಮಾಲೀಕ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.  ಆರೋಪಿ ಕಾರಿನ ಮಾಲೀಕ ಕಾರಿನ ಲೋನ್ ಹಣ ಕಟ್ಟದೆ ಫೈನಾನ್ಸ್ ಸಂಸ್ಥೆಗೆ ವಂಚಿಸಲು ಮತ್ತು ಇನ್ಸುರೆನ್ಸ್ ಹಣಕ್ಕಾಗಿ ತನ್ನ ಕಾರಿನ ನಂಬರ್ ಬದಲಾಯಿಸಿ, ಸ್ನೇಹಿತನ ಬಳಿ ಕೊಟ್ಟು ಕಳ್ಳತನದ ದೂರು ನೀಡಿದ್ದ ಎಂಬುದು ತನಿಖೆ ವೇಳೆ ಗೊತ್ತಾಗಿದೆ. ಶಿವಮೊಗ್ಗ ವಿದ್ಯಾನಗರದ ಚಂದ್ರು ಕುಮಾರ (28), ದಾವಣೆಗೆರೆ ಸರಸ್ವತಿ ನಗರದ ಪ್ರಶಾಂತ್ (29) ಬಂಧಿತರು. 14 ಮೇ 2022 ರಂದು ಸೂಳೆಬೈಲು ಸಮೀಪದ ಕುಂಚಿಟಿಗರ…

Read More

ಬಿಸಿಯೂಟ ಸೇವಿಸಿದ 15ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ – ಆಸ್ಪತ್ರೆಗೆ ದಾಖಲು|

ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಅಡಿಯಲ್ಲಿ ಮಾಡಿದಂತ ಊಟವನ್ನು ಸೇವಿಸಿದಂತ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ಸಾಗರದಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕೋಟೆಕೊಪ್ಪ ಸರ್ಕಾರಿ ಶಾಲೆಯಲ್ಲಿ ಗುರುವಾರ ಮಧ್ಯಾಹ್ನದ ಬಿಸಿಯೂಟವನ್ನು ಮಕ್ಕಳು ಸೇವಿಸಿದ್ದಾರೆ. ಈ ಬಳಿಕ ಮಕ್ಕಳಲ್ಲಿ ವಾಂತಿ, ಬೇಧಿ, ಜ್ವರ ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಸಾಗರದ ತಾಲೂಕು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದೆ. ನಿನ್ನೆಯ ಬಳಿಕ ಇಂದು ಕೂಡ ಕೆಲ ಮಕ್ಕಳಲ್ಲಿ ವಾಂತಿ, ಬೇಧಿ ಕಾಣಿಸಿಕೊಂಡ ಕಾರಣ, ಮತ್ತಷ್ಟು ಮಕ್ಕಳನ್ನು 25…

Read More

ರಿಪ್ಪನ್‌ಪೇಟೆ ಜಿಪಂ ಮತ್ತು ಹೊಸನಗರ ಜಿಪಂ ಕ್ಷೇತ್ರ ಮರುವಿಂಗಡಣೆ ಫ಼ುಲ್ ಕನ್ಫ್ಯೂಸ್ – ಪಟ್ಟಿ ಇಲ್ಲಿದೆ ನೋಡಿ|ZP

ರಿಪ್ಪನ್‌ಪೇಟೆ : ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಕರಡು ಪ್ರಕಟಿಸಿದೆ. ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಸಂಖ್ಯೆಯನ್ನು 31ಕ್ಕೆ ಸೀಮಿತಗೊಳಿಸಿದೆ. 2021ರಲ್ಲಿ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮರು ವಿಂಗಡಣೆ ಮಾಡಲಾಗಿತ್ತು. ಆಗ 5 ಕ್ಷೇತ್ರಗಳನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿತ್ತು.  ಸದ್ಯ ರಿಪ್ಪನ್‌ಪೇಟೆ ಹಾಗೂ ಹೊಸನಗರ ಜಿಪಂ ಸೀಮಾ ಗಡಿ ಗೊಂದಲಮಯವಾಗಿದ್ದು ಎತ್ತಣ ಮಾಮರ ಎತ್ತಣದ ಕೋಗಿಲೆ ಎಂಬಂತೆ ರಿಪ್ಪನ್ ಪೇಟೆ ಜಿಪಂ ಕ್ಷೇತ್ರವು ಸಾಗರ ಸಮೀಪದ ಹೆಬ್ಬೈಲು ಗ್ರಾಮಕ್ಕೆ ತಗುಲಿಕೊಂಡಿದ್ದು…

Read More

ಲಂಚ ಪಡೆಯುವಾಗ ಸಿಕ್ಕಿ ಬಿದ್ದಿದ್ದ ಪಟ್ಟಣ ಪಂಚಾಯತಿ ಸದಸ್ಯನ ಸದಸ್ಯತ್ವ ವಜಾ|dismiss

ಕೋಳಿ ಅಂಗಡಿ ಮಾಲೀಕರೊಬ್ಬರಿಂದ ಇತ್ತೀಚೆಗೆ ಲಂಚ ಪಡೆಯುವಾಗ ರೆಡ್‍ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಕಾರ್ಗಲ್-ಜೋಗ ಪಟ್ಟಣ ಪಂಚಾಯಿತಿ ಸದಸ್ಯ ಕೆ.ಸಿ. ಹರೀಶ್ ಗೌಡ ಸದಸ್ಯತ್ವವನ್ನು ವಜಾಗೊಳಿಸಲಾಗಿದೆ.  ಜೋಗದ 8ನೇ ವಾರ್ಡ್ ಸದಸ್ಯ ಹರೀಶ್ ಗೌಡ ಬಜಾರ್ ಲೈನ್‍ನ ಕೋಳಿ ಅಂಗಡಿ ಮಾಲೀಕ ಅಹ್ಮದ್ ಅಬ್ದುಲ್ ಬಾಕಿ ಎಂಬುವವರಿಗೆ ಪರವಾನಿಗೆ ಮಾಡಿಸಿಕೊಡುವುದಾಗಿ 50 ಸಾವಿರ ರೂ.ಲಂಚ ಕೇಳಿದ್ದರು. ಮನೆಯಲ್ಲಿ ಲಂಚದ ಹಣ ಸ್ವೀಕರಿಸುವ ಸಂದರ್ಭದಲ್ಲಿ ಲೋಕಾಯುಕ್ತರು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಗಾಬರಿಗೊಳಗಾದ ಹರೀಶ್ ಗೌಡ ಹಣವನ್ನು…

Read More

ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿ ಹೊಸನಗರದ ಲಾಡ್ಜ್ ನಲ್ಲಿ ಸಾವು|real

ಹೊಸನಗರ : ಬೆಂಗಳೂರು ಜಿಲ್ಲೆಯ ಆಡುಗೋಡಿ ಆನೆಪಾಳ್ಯದ ರಿಯಲ್ ಎಸ್ಟೇಟ್ ಉದ್ಯಮಿ ಹೊಸನಗರದ ಖಾಸಗಿ ಲಾಡ್ಜ್ ನಲ್ಲಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ. ಮೃತಪಟ್ಟ ವ್ಯಕ್ತಿ ಮುನಿರಾಜು (48) ಬೆಂಗಳೂರು ಮೂಲದವರಾಗಿದ್ದು ಕುಟುಂಬ ಸಮೇತ ದೇವರ ದರ್ಶನಕ್ಕೆ ಬಂದಿದ್ದರು. ಜನವರಿ 4ರಂದು ಪುಣ್ಯಕ್ಷೇತ್ರಗಳ ಭೇಟಿಗೆ ಎಂದು ಪತ್ನಿ ಹಾಗೂ ಮಕ್ಕಳೊಂದಿಗೆ ಕಾರಿನಲ್ಲಿ ಬೆಂಗಳೂರಿನಿಂದ ಬೆಳಿಗ್ಗೆ ಹೊರಟು ಹೊರನಾಡು ಶೃಂಗೇರಿ ಕ್ಷೇತ್ರದ ದರ್ಶನ ಮಾಡಿ ಹೊಸನಗರ ಬರುವಾಗ ರಾತ್ರಿ ಆಗಿದ್ದ ಕಾರಣ ಪಟ್ಟಣದ ಖಾಸಗಿ ಲಾಡ್ಜ್ ನಲ್ಲಿ ರೂಮ್…

Read More

ವಿದ್ಯುತ್ ಕಂಬದಿಂದ ಬಿದ್ದು ಲೈನ್ ಮೆನ್ ಸಾವು !!! – ಸಕಾಲಕ್ಕೆ ಸಿಗದ ಆಂಬುಲೆನ್ಸ್ – ವ್ಯಾಪಕ ಆಕ್ರೋಶ..!!!

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೆದ್ದೂರಿನಲ್ಲಿ ವಿದ್ಯುತ್ ಕಂಬದ ಮೇಲೆ ಕೆಲಸ ಮಾಡುತ್ತಿದ್ದ ಲೈನ್ ಮೆನ್ ಕಂಬದಿಂದ ಬಿದ್ದು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟ ಘಟನೆ ಗುರುವಾರ ನಡೆದಿದೆ.  ಘಟನೆಯಲ್ಲಿ ಮೃತಪಟ್ಟವರನ್ನು ರವಿ ನಾಯಕ(37) ಎಂದು  ಗುರುತಿಸಲಾಗಿದೆ. ಹೆದ್ದೂರು ಬಳಿ ಕೆಲಸ ಮಾಡುತ್ತಿರುವಾಗ ಕಂಬದಿಂದ ಬಿದ್ದಿದ್ದು ಗಂಭೀರ ಗಾಯಗೊಂಡ ಇವರನ್ನು ಸ್ಥಳೀಯರು ಕಾರಿನಲ್ಲಿ ಕಟ್ಟೆಹಕ್ಕಲು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.  ಅಲ್ಲಿಂದ ತೀರ್ಥಹಳ್ಳಿ ಆಸ್ಪತ್ರೆಗೆ ರವಾನಿಸಲು ಆಂಬುಲೆನ್ಸ್ ಸರಿಯಾದ ಸಮಯಕ್ಕೆ ಸಿಗದ ಕಾರಣ ಕಾರಿನಲ್ಲಿ ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಗೆ ಸಾಗಿಸುವಾಗ…

Read More

ನಿಟ್ಟೂರು ಶ್ರೀ ನಾರಾಯಣ ಗುರು ಮಹಾಸಂಸ್ಥಾನದ ಶ್ರೀಗಳಿಂದ ಮುಖ್ಯಮಂತ್ರಿಗಳ ಭೇಟಿ – ಆರ್ಯ ಈಡಿಗ ನಿಗಮ ಸ್ಥಾಪನೆಗೆ ಒತ್ತಾಯ|CM

ರಿಪ್ಪನ್ ಪೇಟೆ : ಆರ್ಯ ಈಡಿಗ ನಿಗಮ  ಸ್ಥಾಪಿಸುವಂತೆ ಒತ್ತಾಯಿಸಿ  ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ರವರನ್ನು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ  ಶ್ರೀ ನಾರಾಯಣ ಗುರು ಮಹಾಸಂಸ್ಥಾನ ಮಠದ ಶ್ರೀ ರೇಣುಕಾನಂದ ಸ್ವಾಮೀಜಿಗಳು   ಭೇಟಿ ಮಾಡಿ ಮನವಿ  ಸಲ್ಲಿಸಿದರು. ರಾಜ್ಯದಲ್ಲಿರುವ ಆರ್ಯ ಈಡಿಗ ಜನಾಂಗದ ಸರ್ವತೋಮುಖ ಅಭಿವೃದ್ಧಿಗೆ ಆರ್ಯ ಈಡಿಗ ನಿಗಮ ಸ್ಥಾಪಿಸುವಂತೆ ಮನವಿ ಸಲ್ಲಿಸಲಾಯಿತು. ಶ್ರೀ ನಾರಾಯಣ ಗುರು ಮಹಾ ಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ರೇಣುಕಾನಂದ ಸ್ವಾಮೀಜಿ,  ಸೋಲೂರು ಮಠದ ಪೀಠಾಧ್ಯಕ್ಷರಾದ ವಿಕ್ಯಾತನಂದ ಸ್ವಾಮೀಜಿ …

Read More

ಆನಂದಪುರ ಸಮೀಪದಲ್ಲಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ – ಇಬ್ಬರು ಯುವಕರು ಸ್ಥಳದಲ್ಲೇ ಸಾವು|accident

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸಮೀಪದ ಕಣ್ಣೂರು ಬಳಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಭೀಕರ ಘಟನೆ ನಡೆದಿದೆ. ಗೌತಮಪುರ ನಿವಾಸಿಗಳಾದ ಪ್ರದೀಪ್ (25) ಹಾಗೂ ದಯಾನಂದ್ (30) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆನಂದಪುರದಿಂದ ಸಂತೆ ಮುಗಿಸಿಕೊಂಡು ತರಕಾರಿ ತೆಗೆದುಕೊಂಡು ಹೋಗುತ್ತಿದ್ದ ವೇಳೆ  ಕಣ್ಣೂರು ಸಮೀಪ ನಿಂತಿದ್ದ ಲಾರಿಗೆ ಹಿಂಬದಿಯಿಂದಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸ್ಥಳದಲ್ಲಿ ನೂರಾರು ಜನ ಜಮಾಯಿಸಿದ್ದುಸೂಕ್ತ ಸೂಚನಾ ಫಲಕವಿಲ್ಲದೆ ಲಾರಿ ನಿಲ್ಲಿಸಿರುವುದಕ್ಕೆ ಆಕ್ರೋಶ…

Read More

ಕಾರು ಅಪಘಾತ – ಸಹಾಯ ಮಾಡುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದ ಗೃಹ ಸಚಿವ ಆರಗ|accident

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಕುಡುಮಲ್ಲಿಗೆ ಸಮೀಪ ಅಪರಿಚಿತ ಕಾರೊಂದು ಅಪಘಾತಕ್ಕೀಡಾಗಿತ್ತು. ಕಾರಿನಲ್ಲಿದ್ದ ಶಿವಮೊಗ್ಗದ ನಿವಾಸಿಗಳು ಕಾರ್ಕಳಕ್ಕೆ ಹೋಗುತ್ತಿದ್ದರು‌. ಮಕ್ಕಳ ಪರೀಕ್ಷೆ ಬರೆಸುವ ಕಾರಣಕ್ಕೆ ಶಿವಮೊಗ್ಗದ ಕುಟುಂಬ ಹೋಗುತ್ತಿತ್ತು. ಈ ವೇಳೆ ಅಚಾನಕ್ಕಾಗಿ ರಸ್ತೆ ಪಕ್ಕದ ಚರಂಡಿಗೆ ಅವರ ಕಾರು ಇಳಿದು, ಅದನ್ನು ಮೇಲೆ ತರಲಾಗದೇ ಒದ್ದಾಡುತ್ತಿದ್ದರು. ಈ ಸಂದರ್ಭದಲ್ಲಿ, ಇದೇ ಮಾರ್ಗವಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ತೀರ್ಥಹಳ್ಳಿಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದರು. ದಾರಿಯಲ್ಲಿ ಕಾರು ಅಪಘಾತವಾಗಿದ್ದ ದೃಶ್ಯ ಕಂಡ ತಕ್ಷಣ ತಮ್ಮ ಕಾರು ನಿಲ್ಲಿಸಲು ಡ್ರೈವರ್…

Read More
Exit mobile version