Headlines

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ನಿಧನ | sandalwood

ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ನಿಧನ ಚಂದನವನದ ಹಿರಿಯ ಹಾಗೂ ಖ್ಯಾತ ನಟಿ ಲೀಲಾವತಿ ಅವರು ವಯೋಸಹಜ ಕಾಯಿಲೆಯಿಂದ ಶುಕ್ರವಾರ ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು. ಅವರ ಆರೋಗ್ಯದಲ್ಲಿ ಮತ್ತೆ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಎರಡು ದಿನಗಳಿಂದ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿತ್ತಾದರೂ ಶುಕ್ರವಾರ ಮಧ್ಯಾಹ್ನ ದಿಢೀರ್ ಲೋ ಬಿಪಿ ಸಮಸ್ಯೆ ಶುರುವಾಗಿದೆ. ತಕ್ಷಣವೇ ಅವರನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಲೀಲಾವತಿ ಕೊನೆಯುಸಿರೆಳೆದರು….

Read More

ಮನೆಯಂಗಳದಲ್ಲಿದ್ದ ಶ್ರೀಗಂಧದ ಮರಗಳನ್ನು ರಾತ್ರೋರಾತ್ರಿ ಕದ್ದೊಯ್ದ ಕಳ್ಳರು | sandal theft

ಮನೆಯಂಗಳದಲ್ಲಿದ್ದ ಶ್ರೀಗಂದದ ಮರಗಳನ್ನು ರಾತ್ರೋರಾತ್ರಿ ಕದ್ದೊಯ್ದ ಕಳ್ಳರು ಸಾಗರ : ನಗರದ ಶ್ರೀರಾಂಪುರ ಬಡಾವಣೆಯ ಪ್ರಗತಿಪರ ಕೃಷಿಕ ಗೌತಮ್ ಪೈರವರ ಮನೆ ಅಂಗಳದಲ್ಲಿದ್ದ ಎರಡು ಗಂಧದ ಮರದ ಕಾಂಡವನ್ನು ಕತ್ತರಿಸಿಕೊಂಡು ಕಳ್ಳರು ಹೊತ್ತೊಯ್ದಿರುವ ಪ್ರಕರಣ ನಡೆದಿದೆ. ಗೌತಮ್ ಪೈ ಪ್ರಗತಿಪರ ಕೃಷಿಕರಾಗಿದ್ದು, ಮನೆಯ ಅಂಗಳದಲ್ಲಿ ಪಶ್ಚಿಮಘಟ್ಟದ ವಿವಿಧ ಜಾತಿಯ ಹೂ, ಹಣ್ಣಿನ ಗಿಡಗಳನ್ನು ಬೆಳೆದು ಮಾದರಿಯಾಗಿದ್ದಾರೆ. ಎರಡು ಗಂಧದ ಮರಗಳು 18 ಹಾಗೂ 22 ವರ್ಷದ ಅವಧಿಯಲ್ಲಿ ಬೆಳೆದಿದ್ದು, ಕಾಂಡಗಳು ಸದೃಢವಾಗಿ ಬೆಳೆದಿದ್ದವು. ಅವರೇ ತಿಳಿಸಿದಂತೆ ಸುಮಾರು…

Read More

ರಾಜ್ಯ ಸರ್ಕಾರದ ಡಾ. ಚಿಕ್ಕಕೊಮಾರಿ ಗೌಡ ದತ್ತಿ ಪ್ರಶಸ್ತಿಗೆ ಆಯ್ಕೆಯಾದ ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ | Kalagodu rathnakar

ರಾಜ್ಯ ಸರ್ಕಾರದ ಡಾ. ಚಿಕ್ಕಕೊಮಾರಿ ಗೌಡ ದತ್ತಿ ಪ್ರಶಸ್ತಿಗೆ ಆಯ್ಕೆಯಾದ ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ರಿಪ್ಪನ್‌ಪೇಟೆ : ಕರ್ನಾಟಕ ಪಂಚಾಯತ್‌ರಾಜ್ ಪರಿಷತ್‌ನಿಂದ ನೀಡಲಾಗುವ ಡಾ.ಚಿಕ್ಕ ಕೊಮಾರಿಗೌಡ ದತ್ತಿ ಪ್ರಶಸ್ತಿಗೆ ಶಿವಮೊಗ್ಗ ಜಿಪಂ ಮಾಜಿ ಅಧ್ಯಕ್ಷರು ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಲಗೋಡು ರತ್ನಾಕರ್ ಆಯ್ಕೆಯಾಗಿದ್ದಾರೆ. 2021-22ನೇ ಸಾಲಿನ ಪ್ರಶಸ್ತಿ ಇದಾಗಿದ್ದು, ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವವರಿಗೆ ನೀಡುವ ಪ್ರಶಸ್ತಿ ಇದಾಗಿದೆ. ಜಿಪಂ ಮಾಜಿ ಅಧ್ಯಕ್ಷರು ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಲಗೋಡು…

Read More

ತೀರ್ಥಹಳ್ಳಿಯಲ್ಲಿ ಮಾನಸಿಕ ವ್ಯಕ್ತಿಯಿಂದ ಸಾರ್ವಜನಿಕರಿಗೆ ಕಿರಿಕಿರಿ ! ನಿಮಾನ್ಸ್ ಆಸ್ಪತ್ರೆಗೆ ರವಾನೆ !! | Thirthahalli

ತೀರ್ಥಹಳ್ಳಿಯಲ್ಲಿ ಮಾನಸಿಕ ವ್ಯಕ್ತಿಯ ಹುಚ್ಚಾಟ ! ನಿಮಾನ್ಸ್ ಆಸ್ಪತ್ರೆಗೆ ರವಾನೆ! ತೀರ್ಥಹಳ್ಳಿ:  ಪಟ್ಟಣದಲ್ಲಿ ಹುಚ್ಚನೊಬ್ಬ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದು ಹುಚ್ಚಾಟ ಮೆರೆಯುತ್ತಿದ್ದ ಹಿನ್ನಲೆಯಲ್ಲಿ ಸ್ಥಳೀಯ ಪ್ರಮುಖರು, ಪೊಲೀಸ್ ಇಲಾಖೆ ನೆರವಿನೊಂದಿಗೆ ಆತನನ್ನು ನಿಮಾನ್ಸ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಆತ ರಸ್ತೆಯಲ್ಲಿ ಸಿಕ್ಕ ಸಿಕ್ಕವರಿಗೆ ಕಿರಿಕಿರಿ ಮಾಡುತ್ತಿದ್ದಾನೆ. ಇದರಿಂದ ಪಟ್ಟಣದಲ್ಲಿ ಓಡಾಡಲು ಜನರು ಸಂಕಷ್ಟ  ಅನುಭವಿಸುವಂತಾಗಿದೆ. ರಸ್ತೆ ಮಧ್ಯ ನಿಂತು ಕೂಗಾಡುತ್ತಾ ಇನ್ನು ಯುವತಿಯರಿಗೆ ಕೂಡ ಕೀಟಲೆ ನೀಡುತ್ತಿದ್ದು, ಇದರಿಂದ ಯುವತಿಯರಿಗೆ ರಸ್ತೆಯಲ್ಲಿ ಓಡಾಡಲು ಆಗುತ್ತಿಲ್ಲ. ಈತನ ಅಸಭ್ಯ…

Read More

RIPPONPET | ಅಪರಾಧ ತಡೆ ಮಾಸಾಚರಣೆ -ಜಾಗೃತಿಗಾಗಿ ಬೈಕ್ ರ್‍ಯಾಲಿ – ಡಿವೈಎಸ್ಪಿ ಭಾಗಿ

RIPPONPET | ಅಪರಾಧ ತಡೆ ಮಾಸಾಚರಣೆ -ಜಾಗೃತಿಗಾಗಿ ಬೈಕ್ ರ್‍ಯಾಲಿ – ಡಿವೈಎಸ್ಪಿ ಭಾಗಿ ರಿಪ್ಪನ್‌ಪೇಟೆ : ವಾಹನ ಚಲಾಯಿಸುವ ವೇಳೆ ರಸ್ತೆ ಸುರಕ್ಷತೆಯ ನಿಯಮವನ್ನು ಪಾಲಿಸದೆ ಇರುವುದು ನಿಮಗೆ ನೀವೇ ದ್ರೋಹ ಮಾಡಿದ ಹಾಗೆ. ರಸ್ತೆ ಸುರಕ್ಷತೆಯ ಬಗ್ಗೆ ಯುವಜನತೆ ಪಾಲಿಸದೆ ಇರುವುದರಿಂದ ಹೆಚ್ಚಿನ ವಾಹನ ಅಪಘಾತಗಳಾಗಿ ಸಾವು ಸಂಭವಿಸುತ್ತದೆ. ಈ ನಿಟ್ಟಿನಲ್ಲಿ ವಾಹನ ಚಲಾಯಿಸವವರು ಜಾಗರೂಕರಾಗಬೇಕು ಎಂದು ತೀರ್ಥಹಳ್ಳಿ ಉಪ ವಿಭಾಗದ ಡಿವೈಎಸ್ಪಿ ಗಜಾನನ ವಾಮನ ಸುತಾರ ಹೇಳಿದರು. ಪಟ್ಟಣದಲ್ಲಿ ರಸ್ತೆ ಸುರಕ್ಷತೆ ಹಾಗೂ…

Read More

Accident | ಬೈಕ್ ಗೆ ನಾಯಿ ಅಡ್ಡ ಬಂದು ಅಪಘಾತ – ಪತಿ ಸ್ಥಳದಲ್ಲೇ ಸಾವು , ಪತ್ನಿ ಗಂಭೀರ

ಬೈಕ್ ಗೆ ನಾಯಿ ಅಡ್ಡ ಬಂದು ಅಪಘಾತ – ಸವಾರ  ಸ್ಥಳದಲ್ಲೇ ಸಾವು ತೀರ್ಥಹಳ್ಳಿ: ಬೈಕ್ ಚಲಿಸುವ ವೇಳೆ ನಾಯಿ ಅಡ್ಡ ಬಂದು ಅಪಘಾತವಾಗಿ ಸವಾರ ಸ್ಥಳದಲ್ಲೇ ಸಾವು ಕಂಡು ಪತ್ನಿ ಗಂಭೀರ ಗಾಯಗೊಂಡಿರುವ ಘಟನೆ ಕಲ್ಮನೆ ಸಮೀಪದ ಹೆಗ್ಗೋಡಿ ನಲ್ಲಿ ನಡೆದಿದೆ. ಕಮ್ಮರಡಿ ಸಮೀಪದ ಅರೇಹಳ್ಳಿ ಗ್ರಾಮ ಪಂಚಾಯಿತಿಯ ಜೋಡುಕಟ್ಟೆ ಬೈಲು ಊರಿನ ಹಮೀದ್ (55) ಮೃತಪಟ್ಟ ದುರ್ಧೈವಿಯಾಗಿದ್ದಾರೆ. ಹಮೀದ್ ಮತ್ತು ರೆಹಮತ್ ದಂಪತಿಗಳು ಇಂದು TVS ಜುಪಿಟರ್ ಸ್ಕೂಟರ್ ನಲ್ಲಿ ಹೋಗುವಾಗ ನಾಯಿ ಬೈಕ್…

Read More

Hosanagara | ಅರಣ್ಯ ಇಲಾಖೆಯಿಂದ ಭರ್ಜರಿ ಕಾರ್ಯಾಚರಣೆ: ಶ್ರೀಗಂಧದ ತುಂಡುಗಳ ಸಹಿತ ನಾಲ್ವರ ಬಂಧನ

ನಗರ ವಲಯ ಅರಣ್ಯ ಇಲಾಖೆಯಿಂದ ಭರ್ಜರಿ ಕಾರ್ಯಾಚರಣೆ:  ಶ್ರೀಗಂಧದ ತುಂಡುಗಳ ಸಹಿತ ನಾಲ್ವರು ಆರೋಪಿಗಳ ಬಂಧನ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಗರ ವಲಯ ವ್ಯಾಪ್ತಿಯ ಹುಂಚ ಹೋಬಳಿ ತೊಗರೆ ಗ್ರಾಮದ ಸರ್ವೆ ನಂಬರ್ 97ರ ಅರಣ್ಯ ಪ್ರದೇಶದಲ್ಲಿ ಬೆಲೆಬಾಳುವ ಶ್ರೀಗಂಧದ ಮರಗಳನ್ನು ಕಡಿತಲೆ ಮಾಡಿ ಸಾಗಾಣಿಕೆಗೆ ಯತ್ನಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಮಾಲು ಸಮೇತ  ಬಂಧಿಸಿ,ಕೃತ್ಯಕ್ಕೆ ಬಳಸಿದ್ದ ಒಂದು ಬೈಕ್ ವಶಪಡಿಸಿಕೊಂಡಿದ್ದಾರೆ.  ಆರೋಪಿಗಳಾದ ನಿವಣೆ ವಾಸಿ ಪರಮೇಶ್ವರಪ್ಪ, ಮಾಣಿ ಗ್ರಾಮದ ಎಂ ಕೆ ಹರೀಶ, ನಾಗರ ಕೊಡುಗೆ…

Read More

Shivamogga | ಕಾಲೇಜಿನ ಕಟ್ಟಡದಿಂದ ಬಿದ್ದು ವಿದ್ಯಾರ್ಥಿನಿ ಸಾವು ಪ್ರಕರಣ – ಪ್ರಾಂಶುಪಾಲ ಸೇರಿದಂತೆ ಎಂಟು ಜನ ಮೇಲೆ ಪ್ರಕರಣ ದಾಖಲು

Shivamogga | ಕಾಲೇಜಿನ ಕಟ್ಟಡದಿಂದ ಬಿದ್ದು ವಿದ್ಯಾರ್ಥಿನಿ ಸಾವು ಪ್ರಕರಣ – ಪ್ರಾಂಶುಪಾಲ ಸೇರಿದಂತೆ ಎಂಟು ಜನ ಮೇಲೆ ಪ್ರಕರಣ ದಾಖಲು ಶಿವಮೊಗ್ಗ : ಕಾಲೇಜಿನ ಕಟ್ಟಡದಿಂದ ಬಿದ್ದು ಪ್ರಾಣ ಕಳೆದುಕೊಂಡ 17 ವರ್ಷದ ವಿದ್ಯಾರ್ಥಿನಿ ಮೇಘಶ್ರೀಯ ಸಾವಿನ ಪ್ರಕರಣದಲ್ಲಿ ಎಂಟು ಜನರ ಮೇಲೆ ಎಫ಼್ ಐಆರ್ ದಾಖಲಾಗಿದೆ. ಹೆಚ್ಚಿನ ಅಂಕ ಗಳಿಸದೆ ಇದ್ದರೆ ಶಾಲೆಯ ಹೆಸರು ಹಾಳಾಗಲಿದೆ ಎಂದು ಒತ್ತಡಹಾಕುತ್ತಿದ್ದ ಕಾಲೇಜಿನ ಪ್ರಾಂಶುಪಾಲ, ಶಿಕ್ಷಕ ಪ್ರಫುಲ್ಲಾ, ದಿವ್ಯಾ, ಮಧು, ಹಾಗೂ ಹಾಸ್ಟೆಲ್ ನ ವಾರ್ಡನ್ ಗಳಾದ…

Read More

Humcha | ಹುಂಚ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಎರಡು ತಿಂಗಳಿಂದ ನಾಪತ್ತೆ – ಲಾಕರ್ ಗಳ ಬೀಗ ಒಡೆದ ಅಧಿಕಾರಿಗಳು

ಹುಂಚ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಎರಡು ತಿಂಗಳಿಂದ ನಾಪತ್ತೆ – ಲಾಕರ್ ಗಳ ಬೀಗ ಒಡೆದ ಅಧಿಕಾರಿಗಳು ರಿಪ್ಪನ್‌ಪೇಟೆ : ಹುಂಚ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ನಾಪತ್ತೆಯಾಗಿದ್ದು ಈ ಹಿನ್ನಲೆಯಲ್ಲಿ ಅಧಿಕಾರಿಗಳು ಸಂಘಕ್ಕೆ ಸಂಬಂದಿಸಿದ ಲಾಕರ್ ಬೀಗ ಒಡೆದು ಪರಿಶೀಲನೆ ನಡೆಸಿರುವ ಘಟನೆ ನಡೆದಿದೆ. ಕಳೆದ ಎರಡು ತಿಂಗಳಿಂದ ಕಾರ್ಯದರ್ಶಿ ಸಂತೋಷ್ ಕೃಷ್ಣನಾಯ್ಕ್ ಕಛೇರಿಗೆ ಹಾಜರಾಗದೇ ನಾಪತ್ತೆಯಾಗಿರುವ ಹಿನ್ನಲೆಯಲ್ಲಿ ಅಡಳಿತ ಮಂಡಳಿಯವರು ಸಾಗರ ಸಹಕಾರ ಸಂಘಗಳ ಸಹಾಯಕ ನಿಂಬಂಧಕರಿಗೆ…

Read More

ಹಳೆಯ ದ್ವೇಷಕ್ಕೆ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ| Life imprisonment

 ಹಳೆಯ ದ್ವೇಷಕ್ಕೆ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ ಶಿವಮೊಗ್ಗ – ಹಳೆಯ ದ್ವೇಷದ‌ ಹಿನ್ನಲೆಯಲ್ಲಿ ಬಾರ್ ಎಂಡ್ ರೆಸ್ಟೋರೆಂಟ್ ನ ಎದುರು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ 10 ಸಾವಿರ ರೂ ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಇಲ್ಲಿನ ರಾಜೀವ್ ಗಾಂಧಿ ಬಡಾವಣೆಯ ವಾಸಿ ಪರಶುರಾಮ ಎಂಬಾತನು ಚಂದ್ರಶೇಖರ್, ಎಂಬುವನ ಮೇಲೆ ಹಳೆಯ ದ್ವೇಶದ ಹಿನ್ನೆಲೆಯಲ್ಲಿ, ದಿನಾಂಕಃ 02-03-2022 ರಂದು ಮಧ್ಯ ರಾತ್ರಿ ಶಿವಮೊಗ್ಗ ಟೌನ್ ಪಿಂಗಾರ…

Read More
Exit mobile version