Headlines

ಸಾಗರ,ರಿಪ್ಪನ್‌ಪೇಟೆ ಹಾಗೂ ಆನಂದಪುರ ಸೇರಿದಂತೆ ವಿವಿಧೆಡೆ ನಾಳೆ (10-03-2024) ವಿದ್ಯುತ್ ವ್ಯತ್ಯಯ

ಸಾಗರ,ರಿಪ್ಪನ್‌ಪೇಟೆ ಹಾಗೂ ಆನಂದಪುರ ಸೇರಿದಂತೆ ವಿವಿಧೆಡೆ ನಾಳೆ (10-03-2024) ವಿದ್ಯುತ್ ವ್ಯತ್ಯಯ


110/33/11ಕೆ.ವಿ. ಸಾಗರ ವಿ.ವಿ ಕೇಂದ್ರದ ತ್ರೈಮಾಸಿಕ ನಿರ್ವಹಣೆ ಹಿನ್ನಲೆಯಲ್ಲಿ 10.03.2024 ರಂದು ಭಾನುವಾರ ಬೆಳಿಗ್ಗೆ 10:00 ರಿಂದ ಸಂಜೆ 6:00 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

10.03.2024 ರಂದು ಬೃಹತ್ ಕಾಮಗಾರಿ ವಿಭಾಗ, ಶಿವಮೊಗ್ಗ ಇವರು ರೇಲ್ವೆ ಟ್ರ್ಯಾಕ್ಷನ್ ಕಾಮಗಾರಿಗೆ ಸಂಬಂಧಿಸಿದಂತೆ ಹೊಸದಾಗಿ ನಿರ್ಮಿಸುತ್ತಿರುವ 110 ಕೆವಿ ಮಾರ್ಗವನ್ನು 110 ಕೆವಿ ಬಸ್ ಬಾರ್ ಗೆ ಜೋಡಿಸುವ ಕಾಮಗಾರಿಯ ಹಿನ್ನಲೆಯಲ್ಲಿ 110 ಕೆವಿ ಬಸ್ ಬಾರ್ ನ ಮಾರ್ಗ ಮುಕ್ತತೆ ಪಡೆಯಲಿರುತ್ತಾರೆ, ಆದುದರಿಂದ ವಿ.ವಿ ಕೇಂದ್ರಕ್ಕೆ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ ಇರುತ್ತದೆ ಆದ್ದರಿಂದ 10.03.2024 ರಂದು ಭಾನುವಾರ ಬೆಳಿಗ್ಗೆ 10:00 ರಿಂದ ಸಂಜೆ 6:00 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವುಂಟಾಗಲಿದೆ.

ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ :

ಸಾಗರ , ಆನಂದಪುರ , ರಿಪ್ಪನ್‌ಪೇಟೆ ಹಾಗೂ ಹೊಸನಗರ ,ಆವಿನಹಳ್ಳಿ, ಮಾಸೂರು ,ಸಾಗರ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವುಂಟಾಗಲಿದೆ.

About The Author

Leave a Reply

Your email address will not be published. Required fields are marked *

Exit mobile version