Headlines

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

ರಿಪ್ಪನ್‌ಪೇಟೆ ,ಉಡುಪಿ,ಮಂಗಳೂರು ಮತ್ತು ಚಿಕ್ಕಮಗಳೂರಿನಲ್ಲಿ ನಾಳೆ(10-04-2024) ಈದ್ ಉಲ್ ಫಿತರ್ ಹಬ್ಬ ಆಚರಣೆ

ರಿಪ್ಪನ್‌ಪೇಟೆ ,ಕರಾವಳಿ ಭಾಗ ಮತ್ತು ಚಿಕ್ಕಮಗಳೂರಿನಲ್ಲಿ ನಾಳೆ(10-04-2024) ಈದ್ ಉಲ್ ಫಿತರ್ ಹಬ್ಬ ಆಚರಣೆ ಕೇರಳದ ಪೊನ್ನಾನಿಯಲ್ಲಿ ಚಂದ್ರ ದರ್ಶನವಾದ ಹಿನ್ನಲೆಯಲ್ಲಿ ಕರಾವಳಿ ತೀರದ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಬುಧವಾರ ಈದುಲ್ ಫಿತ್‌ರ್ ಆಚರಿಸಲು ತೀರ್ಮಾನಿಸಲಾಗಿದೆ.ಅದರದೊಂದಿಗೆ ಹಾಸನ, ಚಿಕ್ಕಮಗಳೂರು ಜಿಲ್ಲೆಯಲ್ಲೂ ಈದುಲ್ ಫಿತರ್ ಆಚರಣೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ,ರಿಪ್ಪನ್‌ಪೇಟೆ ಪಟ್ಟಣದಲ್ಲಿಯೂ ನಾಳೆಯೇ ಈದುಲ್ ಫಿತ್ ರ್ ಆಚರಿಸಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ. ಬೆಂಗಳೂರಿನಲ್ಲಿ ಗುರುವಾರ ಈದುಲ್ ಫಿತ್ ರ್ ಆಚರಣೆ…

Read More

ನಾಳೆ (10-04-2024) ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟ

ನಾಳೆ (10-04-2024) ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟ ಶಿವಮೊಗ್ಗ : ದ್ವಿತೀಯ ಪಿಯುಸಿ(PUC) ಪರೀಕ್ಷೆಯ ಫಲಿತಾಂಶ ಬುಧವಾರ ( ನಾಳೆ ) ಪ್ರಕಟವಾಗಲಿದೆ. ನಾಳೆ ಬೆಳಗ್ಗೆ 10 ಗಂಟೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳಿಂದ ಸುದ್ದಿಗೋಷ್ಠಿ ನಡೆಸಿದ ಬಳಿಕ ವೆಬ್‌ಸೈಟ್‌ನಲ್ಲಿ ಫಲಿತಾಂಶ  ಪ್ರಕಟವಾಗಲಿದೆ. ರಾಜ್ಯಾದ್ಯಂತ ಈ ಬಾರಿ 1,124 ಕೇಂದ್ರಗಳಲ್ಲಿ 6.98 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.  2023-24 ಸಾಲಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ 80-20 ಮಾದರಿಯಲ್ಲಿ ಇರುತ್ತದೆ. ವಿದ್ಯಾರ್ಥಿಗಳು ಲಿಖಿತ ರೂಪದಲ್ಲಿ 80 ಅಂಕಗಳಿಗೆ…

Read More

ರಿಪ್ಪನ್‌ಪೇಟೆ ಪಟ್ಟಣದ ಅಭಿವೃದ್ಧಿಗೆ ಕಂಟಕಪ್ರಾಯವಾಗಿರುವ ಕಟ್ಟಡ – ತೆರವುಗೊಳಿಸಲು ಮುಂದಾಗುತ್ತಾರ ಅಧಿಕಾರಿಗಳು – ಜನಹಿತಕ್ಕಾಗಿ | The building is a thorn in the development of Ripponpet town

ಜನಹಿತಕ್ಕಾಗಿ ಯಾವುದೇ ಒಂದು ಗ್ರಾಮ, ನಗರದ ಅಭಿವೃದ್ಧಿಗೆ ಆ ಭಾಗವನ್ನು ಪ್ರತಿನಿಧಿಸುವ ವಿವಿಧ ಹಂತದ ಚುನಾಯಿತ ಪ್ರತಿನಿಧಿಗಳು,ಅಧಿಕಾರಿ ಜೊತೆ ಗ್ರಾಮಸ್ಥರ ಸಹಕಾರ ಇದ್ದಾಗ ಮಾತ್ರ ನಿರೀಕ್ಷಿತ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸಾಧ್ಯ­ವಾಗುತ್ತದೆ. ಅದರ ಜೊತೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಆ ಊರಿನ ಅಭಿವೃದ್ಧಿ ಕುಂಠಿತಕ್ಕೂ ಬೆರಳೆಣಿಕೆ ಗ್ರಾಮಸ್ಥರೇ ಕಾರಣರಾಗುತ್ತಾರೆ ಎನ್ನುವುದಕ್ಕೆ ನಮ್ಮ ಗ್ರಾಮ ನಿದರ್ಶನ’ ಎನ್ನುತ್ತಾರೆ ರಿಪ್ಪನ್‌ಪೇಟೆ ಪಟ್ಟಣದ ಅಭಿವೃದ್ಧಿ ಪರ ಚಿಂತಕರು. ಹೌದು ರಿಪ್ಪನ್‌ಪೇಟೆ ಪಟ್ಟಣದ ಅಭಿವೃದ್ಧಿಯ ಹಿನ್ನಲೆಯಲ್ಲಿ ಜನಪ್ರತಿನಿಧಿಗಳ ವಿಶೇಷ ಆಸಕ್ತಿಯಿಂದ ನಾಲ್ಕು ರಸ್ತೆಗಳನ್ನು…

Read More

Shivamogga | ಗಾಂಜಾ ಮಾರಾಟ ಮಾಡುತಿದ್ದ ಆರೋಪಿ ಮಾಲು ಸಮೇತ ವಶಕ್ಕೆ

ಶಿವಮೊಗ್ಗ : ಆಟೋ ನಿಲ್ಲಿಸಿಕೊಂಡು ಗಾಂಜಾ ಮಾರಾಟ ಮಾಡುತಿದ್ದ ಆರೋಪಿಯನ್ನು ಪೊಲೀಸರು ಮಾಲು ಸಮೇತ ಬಂಧಿಸಿದ್ದಾರೆ. ಗೋಪಾಳ ನಿವಾಸಿ ಸಮೀರ್ @ ಸಯ್ಯದ್ ಸಮೀರ್ ಬಂಧಿತ ಆರೋಪಿಯಾಗಿದ್ದಾನೆ.  ನಗರದ ಕಾಮತ್ ಲೇಔಟ್ ನ ಖಾಲಿ ಜಾಗದಲ್ಲಿ ಆಟೋ ನಿಲ್ಲಿಸಿಕೊಂಡು ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ 23 ವರ್ಷದ ಯುವಕನನ್ನ‌ ಬಂಧಿಸಲಾಗಿದೆ. ನಡೆದಿದ್ದೇನು..??? ದಿನಾಂಕ: 08-04-2024 ರಂದು ಮದ್ಯಾಹ್ನ ತುಂಗಾ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಕಾಮತ್‌ ಲೇಔಟ್‌ ಖಾಲಿ ಜಾಗದಲ್ಲಿ ಯಾರೋ ಆಸಾಮಿಗಳು ಆಟೋ ಒಂದನ್ನು…

Read More

ತಂದೆಯ ಮಾತು ಕೇಳದೇ ಓಡಿ ಹೋಗಿ ಪ್ರಿಯಕರನನ್ನು ವರಿಸಿದ ಮಗಳು! ಶ್ರದ್ಧಾಂಜಲಿ ಫ್ಲೆಕ್ಸ್​ ಅಳವಡಿಸಿ ಗೋಳಿಟ್ಟ ತಂದೆ | Viral News

ತಂದೆಯ ಮಾತು ಕೇಳದೇ ಓಡಿ ಹೋಗಿ ಪ್ರಿಯಕರನನ್ನು ವರಿಸಿದ ಮಗಳು! ಶ್ರದ್ಧಾಂಜಲಿ ಫ್ಲೆಕ್ಸ್​ ಅಳವಡಿಸಿ ಗೋಳಿಟ್ಟ ತಂದೆ | Viral News ತುಂಬಾ ಪ್ರೀತಿಯಿಂದ ಸಾಕು ಸಲುಹಿದ ಮಗಳು ತನ್ನ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದಕ್ಕೆ ತಂದೆ ಆಕ್ರೊಶ ವ್ಯಕ್ತಪಡಿಸಿದ ರೀತಿ ಇದೀಗ ಎಲ್ಲೆಡೆ ಚರ್ಚೆಯಾಗುತ್ತಿದೆ. ಮಗಳು ಬದುಕಿರುವಾಗಲೇ ಆಕೆಯ ಶ್ರದ್ಧಾಂಜಲಿ ಫ್ಲೆಕ್ಸ್​ ಅಳವಡಿಸಿ, ಕುಟುಂಬವೇ ಕಣ್ಣೀರಿಟ್ಟಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್​ ಆಗಿದೆ. ಈ ಘಟನೆ ತೆಲಂಗಾಣದ ರಾಜಣ್ಣ ಸಿರಿಸಿಲ್ಲಾ ಜಿಲ್ಲೆಯಲ್ಲಿ ನಡೆದಿದೆ. ಇಷ್ಟವಿಲ್ಲದಿದ್ದರೂ ಮಗಳು ಚಿಲುವೆರಿ…

Read More

Hosanagara | ಇಸ್ಪೀಟು ಅಡ್ಡೆಯ ಮೇಲೆ ಪೊಲೀಸರ ದಾಳಿ – ನಗದು ಸಹಿತ ಆರೋಪಿಗಳು ವಶಕ್ಕೆ..!!

Hosanagara | ಇಸ್ಪೀಟು ಅಡ್ಡೆಯ ಮೇಲೆ ಪೊಲೀಸರ ದಾಳಿ – ನಗದು ಸಹಿತ ಆರೋಪಿಗಳು ವಶಕ್ಕೆ..!! ಹೊಸನಗರ : ಅಂದರ್ ಬಾಹರ್ ಆಡುತಿದ್ದ ಅಡ್ಡೆಯ ಮೇಲೆ ಪೊಲೀಸರು ದಾಳಿ ಆರೋಪಿಗಳನ್ನು ಹಾಗೂ ಜೂಜಾಟಕ್ಕೆ ಬಳಸಿದ್ದ ಹಣ ವಶಪಡಿಸಿಕೊಂಡಿರುವ ಘಟನೆ ಗೇರುಪುರದಲ್ಲಿ ನಡೆದಿದೆ. ಹೊಸನಗರ ಸರ್ಕಲ್ ಇನ್ಸ್‌ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್‌ರವರ ಆದೇಶದ ಮೇರೆಗೆ ತಾಲ್ಲೂಕಿನ ಗೇರುಪುರ ಗ್ರಾಮದಲ್ಲಿ ಇಸ್ಪೀಟ್ ಅಡ್ಡೆ ಮೇಲೆ ದಾಳಿ ನಡೆಸಿದ ಪಿಎಸ್ಐ ರಾಜುರೆಡ್ಡಿ ನೇತೃತ್ವದ ತಂಡ ಇಸ್ಪೀಟ್ ಜೂಜಾಟದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಹಾಗೂ…

Read More

ಇಂದಿನ ಮಾರುಕಟ್ಟೆಯಲ್ಲಿ ಅಡಿಕೆಯ ಧಾರಣೆ (08-04-2024)

ಶಿವಮೊಗ್ಗ ಜಿಲ್ಲೆಯ ಅಡಿಕೆ ಮಾರುಕಟ್ಟೆ ಯಲ್ಲಿ ಅಡಿಕೆ ದರ ಎಷ್ಟಿದೆ?  ಇವತ್ತಿನ ಅಡಿಕೆ ರೇಟು  ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಯಾವ್ಯಾವ ತಾಲ್ಲೂಕಿನ ಯಾವ್ಯಾವ ಮಾರುಕಟ್ಟೆಯಲ್ಲಿ  ಅಡಿಕೆ ಧಾರಣೆ  ಗರಿಷ್ಠ ಎಷ್ಟು ಕನಿಷ್ಠ ಎಷ್ಟು ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ.  ಶಿವಮೊಗ್ಗ ಮಾರುಕಟ್ಟೆಯ ಏ. 08 ಸೋಮವಾರ ನಡೆದ ಅಡಿಕೆ (Arecanut) ವಹಿವಾಟು ವಿವರ ಇಲ್ಲಿದೆ. ಹಸ :       ₹  53010 – ₹ 53010 ಬೆಟ್ಟೆ :      ₹  41509 –…

Read More

ಬತ್ತಿದ ನೀರಿನ ಸಲೆ ಕುಮದ್ವತಿ ನದಿತಟದ ಒಣಗಿದ ಮರಗಳು, ನೀರಿಗಾಗಿ ಪ್ರಾಣಿ ಪಕ್ಷಿಗಳ ಪರದಾಟ | Kumadwathi

“ಬತ್ತಿದ ನೀರಿನ ಸಲೆ  ಕುಮದ್ವತಿ ನದಿತಟದ ಒಣಗಿದ ಮರಗಳು, ನೀರಿಗಾಗಿ ಪ್ರಾಣಿ ಪಕ್ಷಿಗಳ ಪರದಾಟ ರಿಪ್ಪನ್‌ಪೇಟೆ;-ಕಳೆದ 10 ಅಗಸ್ಟ್ -ಸೆಪ್ಟಂಬರ್ ತಿಂಗಳಿಂದ ನಡುಮಲೆನಾಡಿನಲ್ಲಿ ಮಳೆಯಾಗದೇ ಇರುವ ನೀರು ಸಂಪೂರ್ಣವಾಗಿ ಬತ್ತಿ ಆಂತರ್ಜಲ ಕುಂಠಿತಗೊಂಡು ಹಳಕೊಳ್ಳಗಳಲ್ಲಿ ನೀರು ಹರಿಯದೇ ಒಣಗಿಹೋಗಿದ್ದು ಕುಮದ್ವತಿ ತಟದಲ್ಲಿನ  ಬೃಹತ್ ಗಾತ್ರದ ಮರಗಳು ಒಣಗಿ ಈಗಲೂ ಆಗಲೂ ಧರೆಗುರುಳವ ಸ್ಥಿತಿಯಲ್ಲಿ ನಿಂತಿವೆ. ಮಲೆನಾಡಿನ ಜೀವ ಜಲವಾಗಿರುವ ಕುಮದ್ವತಿ ಶರ್ಮಿಣಾವತಿ ನದಿಯಲ್ಲಿ ನೀರಿಲ್ಲದೆ ಒಣಗಿ ಹೋಗಿದ್ದು ಕಾಡು ಪ್ರಾಣಿಗಳು ಜಾನುವಾರುಗಳು ನೀರಿಗಾಗಿ ಪರಿತಪ್ಪಿಸುವ ಸ್ಥಿತಿ ಎದರುರಾಗಿದೆ.ಕೊಳವೆ…

Read More

Accident | ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಇಳಿದ ಖಾಸಗಿ ಬಸ್ – ತಪ್ಪಿದ ಭಾರಿ ಅನಾಹುತ

Accident | ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಇಳಿದ ಖಾಸಗಿ ಬಸ್ – ತಪ್ಪಿದ ಭಾರಿ ಅನಾಹುತ ಚಾಲಕನ ನಿಯಂತ್ರಣ ತಪ್ಪಿ 50 ಮಂದಿ ಪ್ರಯಾಣಿಕರನ್ನು ಹೊತ್ತೊಯುತ್ತಿದ್ದ ಖಾಸಗಿ ಬಸ್ ಕೆರೆಗೆ ಇಳಿದ ಘಟನೆ ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಕುಪ್ಪುಗುಡ್ಡೆ ಯಲ್ಲಿ ನಡೆದಿದೆ. ಆನವಟ್ಟಿಯಿಂದ ಸೊರಬ ಕಡೆಗೆ ತೆರಳುತಿದ್ದ ಪೂರ್ಣಚಂದ್ರ ಎಂಬ ಖಾಸಗಿ  ಬಸ್‌ವೊಂದು ಕೆರೆಗೆ ಇಳಿದ ಘಟನೆಯೊಂದು ನಡೆದಿದೆ. ಕೊರಕೋಡು ಕ್ರಾಸ್‌ ಬಳಿಯಲ್ಲಿ ಬರುತ್ತಿದ್ದ ಬಸ್‌ ಇದ್ದಕ್ಕಿದ್ದ ಹಾಗೆ ಕೆರೆಗೆ ಇಳಿದಿದೆ. ಅದೃಷ್ಟವಶಾತ್‌ ಘಟನೆಯಲ್ಲಿ…

Read More

Accident | ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ – ಓರ್ವ ಸಾವು, ಇಬ್ಬರು ಗಂಭೀರ

Accident | ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ – ಓರ್ವ ಸಾವು, ಇಬ್ಬರು ಗಂಭೀರ ಶಿವಮೊಗ್ಗ : ಇಲ್ಲಿನ ನಿದಿಗೆ ಕೆರೆಯ ಬಳಿ ಇಂದು ಬೆಳಿಗ್ಗೆ ರೆನಾಲ್ಡ್(Renault)  ಕಾರು ಹಾಗೂ ವ್ಯಾಗನರ್‌(waganor) ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಿಂದಾಗಿ ಇಬ್ಬರು ಗಾಯಗೊಂಡಿದ್ದು ಓರ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಮೇಘರಾಜ್ ಎಂದು ಗುರುತಿಸಲಾಗಿದ್ದು ಈತನು ಶಾಂತಲಾ ಫ್ಯಾಕ್ಟರಿಯ ಮಾರ್ಕೆಟಿಂಗ್ ಮ್ಯಾನೇಜರ್ ಎಂದು ಹೇಳಲಾಗುತ್ತಿದೆ. ಲಿಂಗದಹಳ್ಳಿಯಿಂದ ಬರುತ್ತಿದ್ದ ರೆನಾಲ್ಡ್‌ ಕಾರು ಶಿವಮೊಗ್ಗದಿಂದ ಮಾಚೇನಹಳ್ಳಿಗೆ ಹೋಗುತ್ತಿದ್ದ ವ್ಯಾಗನರ್‌ ಕಾರಿನ…

Read More
Exit mobile version