ಆಗುಂಬೆ ಬಳಿಯಲ್ಲಿ ದನದ ಕೊಟ್ಟಿಗೆಗೆ ತಗುಲಿದ ಬೆಂಕಿ  | Fire
    ತೀರ್ಥಹಳ್ಳಿ ತಾಲೂಕಿನ ಆಗುಂಬೆ ಹೋಬಳಿಯ ಹೊನ್ನೇತಾಳು ಗ್ರಾಂ ಪಂ ವ್ಯಾಪ್ತಿಯ ಹುಂಚಿಕೊಪ್ಪದ ಶಿವಪ್ಪ ನಾಯ್ಕ್ ಅವರಿಗೆ ಸೇರಿದ ದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ತಗುಲಿರುವ ಘಟನೆ ನಡೆದಿದೆ.
    ಗ್ರಾಮಸ್ಥರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದರಿಂದ ಭಾರಿ ಅನಾಹುತ ತಪ್ಪಿದೆ.
  ಕೊಟ್ಟಿಗೆಯ ಹುಲ್ಲಿನ ಪಕಾಸಿ , ತೊಲೆ, ಬೆಂಗಟೆ ಹಂಚು ಸಂಪೂರ್ಣ ಉರಿದು ಹೋಗಿದೆ. ಅಂದಾಜು ಎಪ್ಪತ್ತು ಸಾವಿರ ಮಲ್ಯದ ವಸ್ತುಗಳು ಹಾನಿಯಾಗಿವೆ ಎಂದು ಹೇಳಲಾಗುತ್ತಿದೆ. 
    


