Headlines

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

ಆಗುಂಬೆ ಸಮೀಪದಲ್ಲಿ ಸಿಡಿಲು ಬಡಿದು ವ್ಯಕ್ತಿ ಸಾವು | Lighting

ಸಿಡಿಲು ಬಡಿದು ವ್ಯಕ್ತಿ ಸಾವು | lighting ತೀರ್ಥಹಳ್ಳಿ : ತಾಲೂಕಿನ ಕೆಲವು ಭಾಗದಲ್ಲಿ ಸಾಧಾರಣ ಮಳೆಯಾಗಿದ್ದು, ಮಳೆ ಜೊತೆಗೆ ಸಿಡಿಲ ಆರ್ಭಟವು ಹೆಚ್ಚಾಗಿದೆ. ಇದೆ ವೇಳೆ ಸಿಡಿಲು ಬಡಿದು ಓರ್ವ ವ್ಯಕ್ತಿ ದುರ್ಮರಣ ಹೊಂದಿರುವ ಘಟನೆ ತಾಲೂಕಿನ ಆಗುಂಬೆ ಬಳಿ ನಡೆದಿದೆ. ಮೃತ ದುರ್ದೈವಿ ನಾಗೇಂದ್ರ ಬಿನ್ ಸಿನ್ ಪೂಜಾರಿ ( 40 ವರ್ಷ ) ಎಂದು ಗುರುತಿಸಲಾಗಿದ್ದು ಇವರು ಬೀದರಗೋಡು ಗ್ರಾಮದವರು.   ಇವರು ಬಾಳೆಹಳ್ಳಿ ಗ್ರಾಮದ ಗುಜುಗೊಳ್ಳಿ ಕೇಶವ ಕಿಣಿ ಬಿನ್ ವಿಠಲ್ ಕಿಣಿ…

Read More

ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಬೋಜೆಗೌಡ ಭರ್ಜರಿ ಗೆಲುವು | MLC

ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಬೋಜೆಗೌಡ ಭರ್ಜರಿ ಗೆಲುವು | MLC  ಶಿವಮೊಗ್ಗ  : ನೈರುತ್ಯ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದ ಚುನಾವಣೆ ನಡೆದಿದ್ದು ಮತ ಎಣಿಕೆಯಲ್ಲಿ ಹಾಲಿ ವಿಧಾನ ಪರಿಷತ್ ಸದಸ್ಯ ಭೋಜೆಗೌಡ ಗೆಲುವು ಸಾಧಿಸಿದ್ದಾರೆ. ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಹೊನ್ನಾಡಿ, ನ್ಯಾಮತಿ, ಚನ್ನಗಿರಿ ತಾಲೂಕು ವ್ಯಾಪ್ತಿಯ ವಿಧಾನ ಪರಿಷತ್ ಕ್ಷೇತ್ರದಲ್ಲಿ ಹಾಲಿ ಎಂಎಂಸಿ ಎಸ್ ಎಲ್ ಬೋಜೇಗೌಡ, ಐದು ಸಾವಿರಕ್ಕೂ ಅಧಿಕ ಮತಗಳಿಂದ ಜಯ ಸಾಧಿಸಿದ್ದಾರೆ. ಈ ಮೂಲಕ ಮಲೆನಾಡು…

Read More

ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಗಮನ ಸೆಳೆದ RCB ಅಭಿಮಾನಿಯಾದ ಜ್ಯೊಮಾಟೋ ಡೆಲಿವರಿ ಬಾಯ್

ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಗಮನ ಸೆಳೆದ RCB ಅಭಿಮಾನಿಯಾದ ಜ್ಯೊಮಾಟೋ ಡೆಲಿವರಿ ಬಾಯ್ ಚುನಾವಣೆ 2024ರ ಫಲಿತಾಂಶ ಹೊರಬಿದ್ದಿದೆ. ಎನ್‌ಡಿಎ ಒಕ್ಕೂಟಕ್ಕೆ ಬಹುಮತ ಬಂದಿದ್ದು, ಸರ್ಕಾರ ರಚನೆ ಕಸರತ್ತು ಆರಂಭವಾಗಿದೆ. ಕರ್ನಾಟಕದಲ್ಲಿ ಬಿಜೆಪಿ 17 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 9 ಸ್ಥಾನಗಳನ್ನು ಗೆದ್ದಿದ್ದು, ಜೆಡಿಎಸ್ 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಶಿವಮೊಗ್ಗದಲ್ಲಿ ಬಿಜೆಪಿ ಮತ್ತೊಮ್ಮೆ ಪ್ರಾಬಲ್ಯ ಸಾಧಿಸಿದ್ದು, ಬಿವೈ ರಾಘವೇಂದ್ರ 7,78,721 ಮತಗಳನ್ನು ಪಡೆಯುವ ಮೂಲಕ 2,43,715 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಅವರನ್ನು…

Read More

ಜೈಲು ಕಂಬಿಯ ಹಿಂದೆ ಅಡಗಿ ಕುಳಿತ ನಾಗರಹಾವು – ತಪ್ಪು ಮಾಡದೇ ಇದ್ದರೂ ನಾಗರಾಜ ಜೈಲು ಸೇರಿದ್ಯಾಕೆ..!??snakerescue

ಜೈಲು ಕಂಬಿಯ ಹಿಂದೆ ಅಡಗಿ ಕುಳಿತ ನಾಗರಹಾವು – ತಪ್ಪು ಮಾಡದೇ ಇದ್ದರೂ ನಾಗರಾಜ ಜೈಲು ಸೇರಿದ್ಯಾಕೆ..!??#snakerescue   ವಾಹನಗಳಲ್ಲಿ ಮನೆಗಳಿಗೆ ಹಾವುಗಳು ನುಗ್ಗಿರೋದನ್ನು ನೋಡಿದಿದ್ದೇವೆ ಆದರೆ ಶಿವಮೊಗ್ಗದ ಜೈಲಿಗೆ ನಾಗರಹಾವೊಂದು ನುಗ್ಗಿ ಜೈಲು ಕಂಬಿಯ ಹಿಂದೆ ಅಡಗಿ‌ ಕುಳಿತ ಘಟನೆ ನಡೆದಿದೆ. ಶಿವಮೊಗ್ಗ ನಗರದ ಹೊರವಲಯದ ಮಲವಗೊಪ್ಪ ಬಳಿ ಇರುವ ಕೇಂದ್ರ ಕಾರಾಗೃಹಕ್ಕೆ ಹಾವು ನುಗ್ಗಿದೆ. ಹಾವನ್ನು ಗಮನಿಸಿದ ಜೈಲಿನ ಸಿಬ್ಬಂದಿ ಕೂಡಲೇ ಮೇಲಾಧಿಕಾರಿಗಳಿಗೆ ತಿಳಿಸಿದ್ದಾರೆ. ಠಾಣಾ ಸಿಬ್ಬಂದಿಯ ಚಲನವಲನ ನೋಡಿ ಹೆದರಿದ ನಾಗಪ್ಪ ನೇರವಾಗಿ ಜೈಲಿನ…

Read More

ಜೂನ್ 8 ರಂದೇ ಹೆಚ್ ಡಿ ಕುಮಾರಸ್ವಾಮಿ‌ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ..!!

ಜೂನ್ 8 ರಂದೇ ಹೆಚ್ ಡಿ ಕುಮಾರಸ್ವಾಮಿ‌ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ..!! ಜೂನ್. 8 ರಂದು ಕೇಂದ್ರ ಸಚಿವರಾಗಿ ಹೆಚ್ ಡಿ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಪ್ರಧಾನಿ ಮೋದಿ ಪದಗ್ರಹಣದ ಸಮಾರಂಭದ ವೇಳೆಯೇ ಕೇಂದ್ರ ಸಚಿವರಾಗಿ ಹೆಚ್ ಡಿ ಕುಮಾರಸ್ವಾಮಿ ಅವರು ಕೂಡ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎನ್ನಲಾಗಿದೆ.  HDKಗೆ ಕೃಷಿ ಖಾತೆಯ ಮೇಲೆ ಒಲವಿದ್ದು, ಕೃಷಿ ಖಾತೆ ಕುಮಾರಸ್ವಾಮಿಗೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಜೂ.8…

Read More

ಪರಿಷತ್ ಚುನಾವಣೆ | ಶಿಕ್ಷಕರೇ ಹಣ ಹೆಂಡಕ್ಕೆ ಮತ ಮಾರಿಕೊಂಡು ಭ್ರಷ್ಟರಾಗಿ, ಸ್ವಾರ್ಥಿಯಾಗಿ, ನೈತಿಕವಾಗಿ ದಿವಾಳಿಯಾದರೆ ಈ ಜಗವ ಕಾಯುವವರಾರು..!!?? | VOTE FOR SALE

ಪರಿಷತ್ ಚುನಾವಣೆ | ಶಿಕ್ಷಕರೇ ಹಣ ಹೆಂಡಕ್ಕೆ ಮತ ಮಾರಿಕೊಂಡು ಭ್ರಷ್ಟರಾಗಿ, ಸ್ವಾರ್ಥಿಯಾಗಿ, ನೈತಿಕವಾಗಿ ದಿವಾಳಿಯಾದರೆ ಈ ಜಗವ ಕಾಯುವವರಾರು..!!?? ಒಂದು ರಾಷ್ಟ್ರದ ಗುಣಮಟ್ಟ ಅಲ್ಲಿನ ನಾಗರಿಕರ ಗುಣಮಟ್ಟದ ಮೇಲೆ ನಿರ್ಧಾರವಾದರೇ ನಾಗರಿಕರ ಗುಣಮಟ್ಟ ಶಿಕ್ಷಣದ ಗುಣಮಟ್ಟದ ಮೇಲೆ ಅವಲಂಬಿತವಾಗಿರುತ್ತದೆ. ಶಿಕ್ಷಣದ ಗುಣಮಟ್ಟ ಶಿಕ್ಷಕರ ಮೇಲೆ ಅವಲಂಬಿತವಾಗಿರುತ್ತದೆ. ಆದ್ದರಿಂದಲೇ ಶಿಕ್ಷಕರನ್ನು ‘ರಾಷ್ಟ್ರನಿರ್ಮಾಪಕರು ಎನ್ನಲಾಗುತ್ತದೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಶಿಕ್ಷಕನಿಗೆ ದೇವರ ಸ್ಥಾನವನ್ನು (‘ಆಚಾರ್ಯ ದೇವೋ ಭವ’) ನೀಡಲಾಗಿದೆ. ಹಿಂದೂ ಶಾಸ್ತ್ರಗ್ರಂಥಗಳಲ್ಲಿ ಶಿಕ್ಷಕನು ವಿದ್ಯಾರ್ಥಿಗೆ ಎರಡನೇ ಜನ್ಮ ಕೊಡುತ್ತಾನೆಂಬ…

Read More

NEET UG RESULT | ಮೊದಲ ರ‍್ಯಾಂಕ್‌ ನ 100 ವಿದ್ಯಾರ್ಥಿಗಳಲ್ಲಿ ಕರ್ನಾಟಕದ ಆರು ವಿದ್ಯಾರ್ಥಿಗಳು ಟಾಪರ್ಸ್

NEET UG RESULT | ಮೊದಲ ರ‍್ಯಾಂಕ್‌ ನ 100 ವಿದ್ಯಾರ್ಥಿಗಳಲ್ಲಿ ಕರ್ನಾಟಕದ ಆರು ವಿದ್ಯಾರ್ಥಿಗಳು ಟಾಪರ್ಸ್ ಕಳೆದ ತಿಂಗಳು ಮೇ 5ರಂದು ನಡೆದಿದ್ದ ನೀಟ್‌ ಪರೀಕ್ಷೆಯ (NEET UG 2024) ಫಲಿತಾಂಶ ಜೂ.4ರಂದು ಪ್ರಕಟವಾಗಿದೆ. ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ನಡೆಸಿದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ ದೇಶದಲ್ಲಿ ಮೊದಲ ರ‍್ಯಾಂಕ್‌ ಪಡೆದ ಟಾಪ್ 100 ವಿದ್ಯಾರ್ಥಿಗಳ ಪೈಕಿ 6 ವಿದ್ಯಾರ್ಥಿಗಳು ಮೊದಲ ಸ್ಥಾನವನ್ನು ಪಡೆದಿದ್ದಾರೆ. ಕರ್ನಾಟಕದ ವಿ.ಕಲ್ಯಾಣ್, ಶ್ಯಾಮ್…

Read More

ಪ್ರಚಂಡ ಬಹುಮತದೊಂದಿಗೆ ನಾಲ್ಕನೇ ಬಾರಿಗೆ ಸಂಸತ್ ಪ್ರವೇಶಿಸಿದ ಬಿ ವೈ ರಾಘವೇಂದ್ರ | Election

ಪ್ರಚಂಡ ಬಹುಮತದೊಂದಿಗೆ ನಾಲ್ಕನೇ ಬಾರಿಗೆ ಸಂಸತ್ ಪ್ರವೇಶಿಸಿದ  ಬಿ ವೈ ರಾಘವೇಂದ್ರ ಬಿಜೆಪಿಯ ಹಾಲಿ ಸಂಸದ ಬಿ.ವೈ. ರಾಘವೇಂದ್ರ ಅವರು ಶಿವಮೊಗ್ಗ ಕ್ಷೇತ್ರದ ಸಂಸದರಾಗಿ ಸತತ 4ನೇ ಬಾರಿಗೆ ಪುನರಾಯ್ಕೆಯಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಪುತ್ರಿ ಗೀತಾ ಶಿವರಾಜ್ ಕುಮಾರ್ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ನವರ ಪೈಪೋಟಿಯ ಪ್ರಚಾರದ ನಡುವೆಯೂ 2,43,024 ಭಾರೀ ಮತಗಳ ಅಂತರದಿಂದ ಜಯಭೇರಿ ಬಾರಿಸಿರುವ ಬಿ.ವೈ ರಾಘವೇಂದ್ರ ಸೋಲಿಲ್ಲದ ಸರದಾರರಾಗಿ ನಾಲ್ಕನೇ ಬಾರಿ ಸಂಸತ್ ಪ್ರವೇಶಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರ…

Read More

ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರವಾರು ಪಕ್ಷಗಳು ಪಡೆದ ಮತ ಎಷ್ಟು..!?? ಇಲ್ಲಿದೆ ಸಂಪೂರ್ಣ ಮಾಹಿತಿ | Election

ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರವಾರು ಪಕ್ಷಗಳು ಪಡೆದ ಮತ ಎಷ್ಟು..!?? ಇಲ್ಲಿದೆ ಸಂಪೂರ್ಣ ಮಾಹಿತಿ | Election ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಬಿ.ವೈ. ರಾಘವೇಂದ್ರರವರಿಗೆ ಭರ್ಜರಿ ಗೆಲುವಾಗಿದೆ.ಬಂಗಾರಪ್ಪ ಪುತ್ರಿ, ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಸಹೋದರಿ, ನಟ ಶಿವರಾಜ್‌ಕುಮಾರ್ ಪತ್ನಿ ಗೀತಾ ಶಿವರಾಜ್‌ಕುಮಾರ್ ಅವರಿಗೆ ಸೋಲಾಗಿದೆ.ಯಡಿಯೂರಪ್ಪ ವಿರುದ್ದ ಸೆಡ್ಡು ಹೊಡೆದಿದ್ದ ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಠೇವಣಿ ಕಳೆದುಕೊಂಡಿದ್ದಾರೆ‌. ಈ ಲೋಕಸಭಾ ಕ್ಷೇತ್ರವು  ಶಿವಮೊಗ್ಗ ಜಿಲ್ಲೆಯ ಏಳು ಹಾಗೂ ಉಡುಪಿ…

Read More

Ripponpete | ಪರಿಷತ್ ಚುನಾವಣೆ – ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ನಿಶ್ಚಿತ – ಆರ್ ಎಂ ಮಂಜುನಾಥ್ ಗೌಡ

ಪರಿಷತ್ ಚುನಾವಣೆ – ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ – ಆರ್ ಎಂ ಮಂಜುನಾಥ್ ಗೌಡ ರಿಪ್ಪನ್‌ಪೇಟೆ : ವಿಧಾನಪರಿಷತ್ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಎಂಎಡಿಬಿ ಅಧ್ಯಕ್ಷ ಮಂಜುನಾಥ್ ಗೌಡ ಹೇಳಿದರು. ಪಟ್ಟಣದ ಪರಿಷತ್ ಚುನಾವಣೆಯ ಮತಗಟ್ಟೆಗೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿ ನಂತರ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಪದವೀಧರ ಕ್ಷೇತ್ರದಿಂದ ಆಯನೂರು ಮಂಜುನಾಥ್ ಹಾಗೂ ಶಿಕ್ಷಕರ ಕ್ಷೇತ್ರದಿಂದ ಮಂಜುನಾಥ್ ಕೆ.ಕೆ.ಅವರನ್ನು ಪಕ್ಷ ಕಣಕ್ಕೆ ಇಳಿಸಿದೆ. ಆಯನೂರು ಮಂಜುನಾಥ್ ಅವರು…

Read More
Exit mobile version