Headlines

ಸೊನಲೆಯಲ್ಲಿ ಕಾರ್ಮಿಕನ ಹತ್ಯೆ ಪ್ರಕರಣ : ಇಬ್ಬರ ಬಂಧ‌ನ , ಘಟನೆ ಬಗ್ಗೆ ಎಸ್ ಪಿ ನಿಖಿಲ್ ಹೇಳಿದ್ದೇನು.!?

ಸೊನಲೆಯಲ್ಲಿ ಕಾರ್ಮಿಕನ ಹತ್ಯೆ ಪ್ರಕರಣ : ಇಬ್ಬರ ಬಂಧ‌ನ , ಘಟನೆ ಬಗ್ಗೆ ಎಸ್ ಪಿ ನಿಖಿಲ್ ಹೇಳಿದ್ದೇನು!?

Two accused have been arrested in connection with the murder of a labourer in Sonale, Shivamogga district. SP Nikhil briefed the media on the investigation, motive, and the arrests made by the police.

​ಶಿವಮೊಗ್ಗ: ಹೆಂಡತಿಯೊಂದಿಗೆ ಸೇರಿ ಬಾಳುವಂತೆ ಬುದ್ಧಿವಾದ ಹೇಳಿದ ಸಹೋದ್ಯೋಗಿಯನ್ನೇ ಚಾಕುವಿನಿಂದ ಇರಿದು ಕೊಂದ ಭೀಕರ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ಸೊನಲೆ ಗ್ರಾಮದಲ್ಲಿ ನಡೆದಿತ್ತು ಕೂಡಲೇ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ  ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ತಿಳಿಸಿದ್ದಾರೆ.

ಎಸ್ ಪಿ ನಿಖಿಲ್ ಹೇಳಿದ್ದೇನು .!?

​ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಈಚನಳ್ಳಿ ತಾಂಡಾದ ನಿವಾಸಿಗಳಾದ ಪರಶುರಾಮ್ (ಮೃತ), ಹಾಗೂ ಆರೋಪಿಗಳಾದ ಪರಶುರಾಮ್ ಮತ್ತು ಅರುಣ್ ಹೊಸನಗರದ ಸೊನಲೆ ಗ್ರಾಮಕ್ಕೆ ಗಾರೆ ಕೆಲಸಕ್ಕೆಂದು ಒಟ್ಟಾಗಿ ಬಂದಿದ್ದರು.

ಆರೋಪಿ ಅರುಣ್ ಕಳೆದ 10-12 ತಿಂಗಳುಗಳಿಂದ ತನ್ನ ಪತ್ನಿಯಿಂದ ಪ್ರತ್ಯೇಕವಾಗಿ ವಾಸವಿದ್ದ. ರಾತ್ರಿ ಕೆಲಸ ಮುಗಿಸಿ ಊಟ ಮಾಡುವಾಗ ಮದ್ಯದ ಅಮಲಿನಲ್ಲಿ ಈ ವಿಚಾರ ಪ್ರಸ್ತಾಪವಾಗಿದೆ. ಆಗ ವಯಸ್ಸಿನಲ್ಲಿ ಹಿರಿಯನಾಗಿದ್ದ ಮೃತ ಪರಶುರಾಮ್, “ಹೆಂಡತಿಯನ್ನು ಬಿಟ್ಟುಬಿಡುವುದು ಪರಿಹಾರವಲ್ಲ, ಕುಟುಂಬವನ್ನು ಒಟ್ಟಿಗೆ ಸಾಗಿಸಿಕೊಂಡು ಹೋಗಬೇಕು” ಎಂದು ಅರುಣ್ ಗೆ ಬುದ್ಧಿವಾದ ಹೇಳಿದ್ದಾರೆ.

ಈ ಹಿತವಚನವೇ ಆರೋಪಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿದೆ. ಈ ವೇಳೆ ಕೋಪಗೊಂಡ ಅರುಣ್ ಹಾಗೂ ಮತ್ತೊಬ್ಬ ಆರೋಪಿ ಪರಶುರಾಮ್ ಸೇರಿ, ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಪರಶುರಾಮ್ ಅವರ ಕುತ್ತಿಗೆಗೆ ಇರಿದಿದ್ದಾರೆ. ತೀವ್ರ ರಕ್ತಸ್ರಾವದಿಂದಾಗಿ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದರು.

ಘಟನೆ ನಡೆದ ತಕ್ಷಣ ಹೊಸನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರೂ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮೃತ ಪರಶುರಾಮ್ 15 ದಿನಗಳ ರಜೆಯ ಬಳಿಕ ಘಟನೆಯ ದಿನವಷ್ಟೇ ಕೆಲಸಕ್ಕೆ ವಾಪಸಾಗಿದ್ದರು. ಆರೋಪಿಗಳ ವಿರುದ್ಧ ಯಾವುದೇ ಹಳೆಯ ಕ್ರಿಮಿನಲ್ ಹಿನ್ನೆಲೆಗಳಿಲ್ಲ. ಇದು ಮದ್ಯದ ಅಮಲಿನಲ್ಲಿ ಹಾಗೂ ಕ್ಷಣಿಕ ಆವೇಶದಲ್ಲಿ ನಡೆದ ಕೃತ್ಯವೇ ಹೊರತು, ಪೂರ್ವನಿಯೋಜಿತ ಕೊಲೆಯಲ್ಲ ಎಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಎನ್. ಕುಮಾರ್ ಸ್ಪಷ್ಟಪಡಿಸಿದ್ದಾರೆ.

About The Author

Exit mobile version