Headlines

ಪ್ರೀತಿ ವಿಚಾರದಲ್ಲಿ ಹಲ್ಲೆ-ಅವಮಾನ: ವಿಷ ಸೇವಿಸಿ ಯುವಕ ಆತ್ಮಹತ್ಯೆ

ಪ್ರೀತಿ ವಿಚಾರದಲ್ಲಿ ಹಲ್ಲೆ-ಅವಮಾನ: ವಿಷ ಸೇವಿಸಿ ಯುವಕ ಆತ್ಮಹತ್ಯೆ

A 28-year-old man from Shikaripura died after consuming poison at Shivamogga KSRTC bus stand, allegedly following assault and humiliation by his girlfriend and her family. Police have registered a case against five

ಶಿವಮೊಗ್ಗ: ಪ್ರೀತಿ ಸಂಬಂಧದ ವಿಚಾರದಲ್ಲಿ ಹಲ್ಲೆ ಹಾಗೂ ಅವಮಾನಕ್ಕೊಳಗಾದ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಶಿಕಾರಿಪುರ ತಾಲೂಕಿನ ಶಬರೀಶ್ (28) ಮೃತ ಯುವಕನಾಗಿದ್ದು, ಆತ ತೀರ್ಥಹಳ್ಳಿಯಲ್ಲಿ ಟೈಲ್ಸ್ ಕೆಲಸ ಮಾಡುತ್ತಿದ್ದನು ಎಂದು ತಿಳಿದುಬಂದಿದೆ. ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಶಬರೀಶ್‌ಗೆ ಆಕೆಯ ಮನೆಯವರಿಂದ ವಿರೋಧವಿತ್ತು ಎನ್ನಲಾಗಿದೆ.

ಏಪ್ರಿಲ್ 21ರಂದು ಯುವತಿ ಮಾತನಾಡಬೇಕೆಂದು ಕರೆ ಮಾಡಿದ್ದರಿಂದ ಶಬರೀಶ್ ಶಿವಮೊಗ್ಗದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ತೆರಳಿದ್ದನು. ಈ ವೇಳೆ ಯುವತಿ ಹಾಗೂ ಆಕೆಯ ಸಂಬಂಧಿಕರು ಶಬರೀಶ್ ಮೇಲೆ ಹಲ್ಲೆ ನಡೆಸಿ, ಮದುವೆಗೆ ನಿರಾಕರಿಸಿದ್ದರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ಆತನ ಮೊಬೈಲ್‌ನಲ್ಲಿದ್ದ ಫೋಟೋಗಳನ್ನು ಅಳಿಸಿ ಬೆದರಿಕೆ ಹಾಕಿದ್ದರೆಂದು ಆರೋಪಿಸಲಾಗಿದೆ.

ಈ ಘಟನೆದಿಂದ ಮನನೊಂದ ಶಬರೀಶ್ ಬಸ್ ನಿಲ್ದಾಣದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದನು. ಸ್ಥಳದಲ್ಲಿದ್ದವರು ತಕ್ಷಣ ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಏಪ್ರಿಲ್ 22ರಂದು ಮೃತಪಟ್ಟಿದ್ದಾನೆ.

ಈ ಪ್ರಕರಣ ಸಂಬಂಧ ಯುವಕನ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಐವರ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ.

About The Author

Exit mobile version