Headlines

ಸಮಾಜ ಸೇವಕ , ಗುಡ್ ಶೆಫರ್ಡ್ ಚರ್ಚ್ ಮಾಜಿ ಅಧ್ಯಕ್ಷ ಕೆ ಎಂ ಜೊಸೇಫ್ ನಿಧನ

ಸಮಾಜ ಸೇವಕ , ಗುಡ್ ಶೆಫರ್ಡ್ ಚರ್ಚ್ ಮಾಜಿ ಅಧ್ಯಕ್ಷ ಕೆ ಎಂ ಜೊಸೇಫ್ ನಿಧನ

K.M. Joseph (76), a noted social worker and Congress leader from Halagudde, has passed away. Former Good Shepherd Church president, his funeral will be held on April 25.

ರಿಪ್ಪನ್ ಪೇಟೆ : ಹಾಲಗುಡ್ಡೆ ಗ್ರಾಮದ ಖ್ಯಾತ ಸಮಾಜಸೇವಕ ಹಾಗೂ ಹಿರಿಯ ರಾಜಕೀಯ ಮುಖಂಡ ಕೆ. ಎಂ ಜೋಸೆಫ್ (76) ಅವರು ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ.

ಹಲವು ದಶಕಗಳ ಕಾಲ ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು, ಜನಸೇವೆಗೆ ತನ್ನ ಜೀವನವನ್ನು ಸಮರ್ಪಿಸಿಕೊಂಡಿದ್ದರು.
ಕೆ. ಎಂ ಜೋಸೆಫ್ ಅವರು ಗುಡ್ ಶೇಫರ್ಡ್ ಚರ್ಚ್‌ನ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಚರ್ಚ್‌ನ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಜೊತೆಗೆ, ಕಾಂಗ್ರೆಸ್ ಪಕ್ಷದ ಸಕ್ರಿಯ ಮುಖಂಡರಾಗಿ ರಾಜಕೀಯ ಕ್ಷೇತ್ರದಲ್ಲಿಯೂ ತಮ್ಮದೇ ಆದ ಗುರುತನ್ನು ಮೂಡಿಸಿದ್ದರು. ಸಮಾಜದ ಬಡ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಅವರು ನಿರಂತರವಾಗಿ ಶ್ರಮಿಸಿದ್ದು, ಸ್ಥಳೀಯರಲ್ಲಿ ಅಪಾರ ಗೌರವಕ್ಕೆ ಪಾತ್ರರಾಗಿದ್ದರು.

ಅದೇ ರೀತಿ, ಕ್ಯಾಥೋಲಿಕ್ ಅಸೋಸಿಯೇಷನ್‌ನಲ್ಲಿ ಪ್ರಮುಖ ಪಾತ್ರ ವಹಿಸಿ, ಸೆಂಟ್ ವಿನ್ಸೆಂಟ್ ಡಿ ಪೌಲ್ ಸೊಸೈಟಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುವ ಮೂಲಕ ದಾನಧರ್ಮ ಮತ್ತು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಮೃತರು ಪತ್ನಿ, ಮೂವರು ಪುತ್ರರು ಹಾಗೂ ಒಬ್ಬ ಪುತ್ರಿಯನ್ನು ಅಗಲಿದ್ದಾರೆ. ಅವರ ಅಗಲಿಕೆಯಿಂದ ಕುಟುಂಬದವರಲ್ಲದೆ ಸ್ನೇಹಿತರು ಮತ್ತು ಅಭಿಮಾನಿಗಳಲ್ಲೂ ದುಃಖ ಮನೆಮಾಡಿದೆ.

ಅವರ ಅಂತ್ಯಕ್ರಿಯೆ ಏಪ್ರಿಲ್ 25ರಂದು ಶನಿವಾರ ಸಂಜೆ ಗುಡ್ ಶೇಫರ್ಡ್ ಚರ್ಚ್‌ನ ರುದ್ರಭೂಮಿಯಲ್ಲಿ ನೆರವೇರಲಿದ್ದು, ಬಂಧುಗಳು, ಸ್ನೇಹಿತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

About The Author

Exit mobile version