Headlines

ರಿಪ್ಪನ್ ಪೇಟೆಯ ಓಂಕಾರ್ ಕ್ಲಿನಿಕ್ ನಲ್ಲಿ ಕಪ್ಪಿಂಗ್ ಥೆರಪಿ ಸೌಲಭ್ಯ ಆರಂಭ

ರಿಪ್ಪನ್ ಪೇಟೆಯ ಓಂಕಾರ್ ಕ್ಲಿನಿಕ್ ನಲ್ಲಿ ಕಪ್ಪಿಂಗ್ ಥೆರಪಿ ಸೌಲಭ್ಯ ಆರಂಭ

Cupping therapy service launched at Omkar Clinic in Ripponpet, Shivamogga, offering relief from back pain, joint pain, stress, and sleep disorders with growing local response.

ರಿಪ್ಪನ್ ಪೇಟೆ: ದೈಹಿಕ ನೋವು ಹಾಗೂ ಮಾನಸಿಕ ಒತ್ತಡಕ್ಕೆ ಪರ್ಯಾಯ ಚಿಕಿತ್ಸೆಯಾಗಿ ಪ್ರಸಿದ್ಧಿ ಪಡೆಯುತ್ತಿರುವ “ಕಪ್ಪಿಂಗ್ ಥೆರಪಿ” ಇದೀಗ ರಿಪ್ಪನ್ ಪೇಟೆಯಲ್ಲಿಯೂ ಲಭ್ಯವಾಗಿದೆ. ಪಟ್ಟಣದ ಒಂಕಾರ್ ಕ್ಲಿನಿಕ್‌ನಲ್ಲಿ ಈ ವಿಶೇಷ ಚಿಕಿತ್ಸೆ ಆರಂಭವಾಗಿದೆ.

ಕ್ಲಿನಿಕ್‌ನ ತಜ್ಞರಾದ ಡಾ. ಪೂಜಾಶ್ರೀ ಅವರ ಮಾಹಿತಿ ಪ್ರಕಾರ, ಕಪ್ಪಿಂಗ್ ಥೆರಪಿ ಮೂಲಕ ಬೆನ್ನುನೋವು, ಕುತ್ತಿಗೆ ನೋವು, ಭುಜ ಹಾಗೂ ಸಂಧಿ ನೋವು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುತ್ತಿದೆ. ಈ ವಿಧಾನವು ರಕ್ತ ಸಂಚಲನವನ್ನು ಸುಧಾರಿಸಿ, ದೇಹದಲ್ಲಿನ ವಿಷಪದಾರ್ಥಗಳನ್ನು ಹೊರಹಾಕಲು ಸಹಕಾರಿಯಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ವೈದ್ಯಕೀಯ ಮಾನದಂಡಗಳನ್ನು ಪಾಲಿಸಿಕೊಂಡು ನಡೆಸಲಾಗುವ ಈ ಚಿಕಿತ್ಸೆ ನಿದ್ರೆ ಸಮಸ್ಯೆ, ಆತಂಕ ಮತ್ತು ಮಾನಸಿಕ ಒತ್ತಡ ನಿವಾರಣೆಯಲ್ಲಿಯೂ ಸಹ ಪರಿಣಾಮಕಾರಿ ಎಂದು ತಿಳಿದುಬಂದಿದೆ. ಈಗಾಗಲೇ ಈ ಥೆರಪಿಗೆ ಸ್ಥಳೀಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಕ್ಲಿನಿಕ್ ಮೂಲಗಳು ತಿಳಿಸಿವೆ.

ಹೆಚ್ಚಿನ ಮಾಹಿತಿಗಾಗಿ ಓಂಕಾರ್ ಕ್ಲಿನಿಕ್ ಅನ್ನು ಸಂಪರ್ಕಿಸಬಹುದು ಎಂದು ಸೂಚಿಸಲಾಗಿದೆ.

ಸಂಪರ್ಕ ಸಂಖ್ಯೆ: 7259643464

ಸ್ಥಳ: ರಿಪ್ಪನ್ ಪೇಟೆ, ತೀರ್ಥಹಳ್ಳಿ ರಸ್ತೆ, ಶಿವಮೊಗ್ಗ

About The Author

Exit mobile version