Headlines

ಶಿವಮೊಗ್ಗ–ಸಾಗರ ಬಸ್‌ನಲ್ಲಿ ಮಹಿಳೆಯ ವ್ಯಾನಿಟಿ ಬ್ಯಾಗ್‌ನಿಂದ 17 ಲಕ್ಷ ಮೌಲ್ಯದ ಚಿನ್ನಾಭರಣ , 45 ಸಾವಿರ ನಗದು ಕಳವು

ಶಿವಮೊಗ್ಗ–ಸಾಗರ ಬಸ್‌ನಲ್ಲಿ ಮಹಿಳೆಯ ವ್ಯಾನಿಟಿ ಬ್ಯಾಗ್‌ನಿಂದ 17 ಲಕ್ಷ ಮೌಲ್ಯದ ಚಿನ್ನಾಭರಣ , 45 ಸಾವಿರ ನಗದು ಕಳವು

A woman traveling from Shivamogga to Sagara lost 171 grams of gold ornaments worth around ₹17 lakh and ₹45,000 cash after an alleged theft from her vanity bag on a private bus. Tunga Police have registered a case.

ಶಿವಮೊಗ್ಗ: ಶಿವಮೊಗ್ಗದಿಂದ ಸಾಗರದತ್ತ ತೆರಳುತ್ತಿದ್ದ ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ವ್ಯಾನಿಟಿ ಬ್ಯಾಗ್‌ನಿಂದ ಸುಮಾರು ₹17 ಲಕ್ಷ ಮೌಲ್ಯದ 171 ಗ್ರಾಂ ಚಿನ್ನಾಭರಣ ಹಾಗೂ ₹45,000 ನಗದು ಕಳ್ಳತನವಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕಾರ್ಗಲ್ ಮೂಲದ ರಮ್ಜಾ ಸುಲೇಮಾನ್ ಅವರು ಕಾರ್ಗಲ್‌ನಲ್ಲಿ ನಡೆಯಲಿದ್ದ ಶುಭಕಾರ್ಯದಲ್ಲಿ ಭಾಗವಹಿಸಲು ಶಿವಮೊಗ್ಗದಿಂದ ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಪ್ರಯಾಣದ ವೇಳೆ ಆಲ್ಕೊಳ ಸಮೀಪ ಅಪರಿಚಿತ ಮಹಿಳೆಯೊಬ್ಬರು ಅವರ ಪಕ್ಕದಲ್ಲಿ ಬಂದು ಕುಳಿತಿದ್ದು, ಕೆಲಕಾಲ ಮಾತನಾಡಿದ ಬಳಿಕ ರಮ್ಜಾ ಸುಲೇಮಾನ್ ಅವರಿಗೆ ನಿದ್ದೆ ಬಂದಿದೆ.

ನಂತರ ಬಸ್ ಆನಂದಪುರ ಸಮೀಪದ ಯಡೇಹಳ್ಳಿಗೆ ತಲುಪಿದಾಗ ಎಚ್ಚರಗೊಂಡ ಅವರು, ತಮ್ಮ ವ್ಯಾನಿಟಿ ಬ್ಯಾಗ್‌ನ ಜಿಪ್ ತೆರೆದು ನೋಡಿದಾಗ ಅದರೊಳಗೆ ಬಟ್ಟೆಯ ಗಂಟಿನಲ್ಲಿ ಇಟ್ಟಿದ್ದ 171 ಗ್ರಾಂ ಚಿನ್ನಾಭರಣ ಹಾಗೂ ₹45,000 ನಗದು ಕಾಣೆಯಾಗಿರುವುದು ಗೊತ್ತಾಗಿದೆ.

ತಕ್ಷಣವೇ ಅವರು ಬಸ್ ಸಿಬ್ಬಂದಿಗೆ ವಿಷಯ ತಿಳಿಸಿದ್ದು, ಆನಂದಪುರ ಸಮೀಪ ಅಪರಿಚಿತ ಮಹಿಳೆಯೊಬ್ಬರು ಬಸ್‌ನಿಂದ ಇಳಿದಿರುವುದಾಗಿ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಘಟನೆಯಿಂದ ಆತಂಕಗೊಂಡ ಮಹಿಳೆ ಆರಂಭದಲ್ಲಿ ಎಲ್ಲಿ ದೂರು ನೀಡಬೇಕು ಎಂಬ ಗೊಂದಲದಲ್ಲಿದ್ದು, ಬಳಿಕ ಶಿವಮೊಗ್ಗದ ತುಂಗಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳ್ಳತನ ನಡೆಸಿದ ಆರೋಪಿಯನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿದ್ದಾರೆ.

About The Author

Exit mobile version