POSTMANNEWS

ನೈಜ ಸುದ್ದಿ ನೇರ ಬಿತ್ತರ..

ಆಸ್ಪತ್ರೆ ಆವರಣಕ್ಕೆ ತಲುಪಿದ ಆಸ್ತಿ ಜಗಳ – ಮೆಗ್ಗಾನ್ ಆಸ್ಪತ್ರೆಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

A youth was brutally assaulted with a stone by his relatives inside McGann Hospital premises in Shivamogga over a property dispute. A case has been registered at Doddapete Police Station.


ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಯುವಕನೊಬ್ಬನ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ. ಹೊನ್ನಾಳಿ ತಾಲೂಕಿನ ಶಾಂತಕುಮಾರ್ ಎಂಬುವವರು ತಮ್ಮ ತಾಯಿ ವಿಷ ಸೇವಿಸಿದ್ದರಿಂದ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದರು.


ಶಾಂತಕುಮಾರ್ ಅವರು ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ಹೊರಗೆ ನಿಂತಿದ್ದ ವೇಳೆ, ಅವರ ಸಂಬಂಧಿಕರು ಅಲ್ಲಿಗೆ ಆಗಮಿಸಿ ಜಗಳವಾಡಿದ್ದಾರೆ. ಆಸ್ತಿ ವಿಚಾರದ ಹಳೆಯ ದ್ವೇಷ ಹಾಗೂ ತಾಯಿಯ ಅನಾರೋಗ್ಯದ ವಿಷಯವನ್ನು ತಮಗೆ ತಿಳಿಸಿಲ್ಲ ಎಂಬ ಕಾರಣಕ್ಕೆ ವಾಗ್ವಾದ ಆರಂಭಗೊಂಡಿದೆ ಎಂದು ಆರೋಪಿಸಲಾಗಿದೆ.


ಜಗಳ ತೀವ್ರಗೊಂಡ ಸಂದರ್ಭದಲ್ಲಿ ಅಲ್ಲೇ ಬಿದ್ದಿದ್ದ ಜೆಲ್ಲಿ ಕಲ್ಲಿನಿಂದ ಶಾಂತಕುಮಾರ್ ಅವರ ತಲೆಗೆ ಹೊಡೆದು ರಕ್ತಗಾಯಗೊಳಿಸಿ ನೆಲಕ್ಕುರುಳಿಸಿದ್ದಾರೆ. ಜೊತೆಗೆ ಅವಾಚ್ಯ ಶಬ್ದಗಳಿಂದ ಬೈದು, ಜೀವ ಸಹಿತ ಬಿಡುವುದಿಲ್ಲ ಎಂದು ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.


ಘಟನೆಗೆ ಸಂಬಂಧಿಸಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

About The Author

Exit mobile version