POSTMANNEWS

ನೈಜ ಸುದ್ದಿ ನೇರ ಬಿತ್ತರ..

ಭದ್ರಾ ಎಡದಂಡೆ ನಾಲೆ ಅಪಘಾತ: ಓರ್ವನ ಮೃತದೇಹ ಪತ್ತೆ ,ಮುಂದುವರಿದ ಉಳಿದ ಮೂವರ ಶೋಧ ಕಾರ್ಯಾಚರಣೆ

Bhadra Left Bank Canal Tragedy: One Body Recovered, Three Family Members Still Missing

One body recovered after four members of a family were swept away in the Bhadra Left Bank Canal near Bhadravati. Search for three others continues.

ಹೊಳೆಹೊನ್ನೂರು: ಬಟ್ಟೆ ತೊಳೆಯಲು ತೆರಳಿದ್ದ ಒಂದೇ ಕುಟುಂಬದ ನಾಲ್ವರು ಸದಸ್ಯರು ಭದ್ರಾ ಎಡದಂಡೆ ನಾಲೆಗೆ ಬಿದ್ದು ನೀರುಪಾಲಾದ ಪೈಕಿ ಶೋಧ ಕಾರ್ಯದ ವೇಳೆ ಓರ್ವನ ಮೃತದೇಹ ಪತ್ತೆಯಾಗಿದ್ದು, ಉಳಿದ ಮೂವರಿಗಾಗಿ ಶೋಧ ಕಾರ್ಯ ಮುಂದುವರಿಯಲಿದೆ.

ಒಂದೇ ಕುಟುಂಬದ ನೀಲಾಬಾಯಿ, ಅವರ ಪುತ್ರ ರವಿಕುಮಾರ್‌, ಪುತ್ರಿ ಶ್ವೇತಾ ಹಾಗೂ ಅಳಿಯ ಪರಶುರಾಮ್‌ ಭಾನುವಾರ ನಾಪತ್ತೆಯಾಗಿದ್ದರು.ಶೋಧ ಕಾರ್ಯಾಚರಣೆಯಲ್ಲಿ ರವಿಕುಮಾರ್ ಮೃತದೇಹ ಪತ್ತೆಯಾಗಿದೆ.

ಈ ದುರ್ಘಟನೆಯಲ್ಲಿ ಇಬ್ಬರು ಪುರುಷರು ಹಾಗೂ ಇಬ್ಬರು ಮಹಿಳೆಯರು ನೀರುಪಾಲಾಗಿದ್ದು, ತಾಯಿ, ಮಗ, ಮಗಳು ಹಾಗೂ ಅಳಿಯ ಸೇರಿದ್ದಾರೆ. ಸುಮಾರು 27 ಗಂಟೆಗಳ ಹಿಂದೆ ಘಟನೆ ಸಂಭವಿಸಿದ್ದು, ಕಳೆದ 24 ಗಂಟೆಗಳ ಕಾಲ ಅಗ್ನಿಶಾಮಕ ದಳ ಮತ್ತು ಪೊಲೀಸರ ಸಹಕಾರದಿಂದ ಶೋಧ ಕಾರ್ಯ ನಡೆಯಿತು.

ಇಂದು ಬೆಳಗ್ಗಿನಿಂದ ಭದ್ರಾ ಎಡದಂಡೆ ನಾಲೆಯಲ್ಲಿ ಅಗ್ನಿಶಾಮಕ ದಳದ ಎಎಸ್ಒ ಹುಲಿಯಪ್ಪ ಹಾಗೂ ಈಶ್ವರ್ ಮಲ್ಪೆ ಅವರ ನೇತೃತ್ವದಲ್ಲಿ ಸುಮಾರು 8 ಕಿಲೋಮೀಟರ್ ವ್ಯಾಪ್ತಿಯಲ್ಲಿ ಶೋಧ ನಡೆಸಲಾಯಿತು. ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ, ನಿನ್ನೆ ನೀರುಪಾಲಾದ ಸ್ಥಳದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ರವಿ ಎಂಬಾತನ ಮೃತದೇಹ ಪತ್ತೆಯಾಗಿದೆ.

ನಿನ್ನೆ ಇದೇ ಪ್ರದೇಶದಲ್ಲಿ ನಾಲ್ಕರಿಂದ ಐದು ಗಂಟೆಗಳ ಕಾಲ ಶೋಧ ಕಾರ್ಯ ನಡೆಸಿದರೂ ಯಾವುದೇ ಸುಳಿವು ಲಭ್ಯವಾಗಿರಲಿಲ್ಲ. ಇಂದಿನ ಶೋಧ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಉಳಿದ ನಾಪತ್ತೆಯಾದವರ ಪತ್ತೆಗೆ ನಾಳೆ ಮತ್ತೆ ಶೋಧ ಕಾರ್ಯ ಆರಂಭಿಸಲಾಗುತ್ತದೆ.

ಘಟನೆ ಕುರಿತು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

About The Author

Exit mobile version