POSTMANNEWS

ನೈಜ ಸುದ್ದಿ ನೇರ ಬಿತ್ತರ..

ನಗರ : ಸುಸಜ್ಜಿತ ಬಸ್ ನಿಲ್ದಾಣಕ್ಕೆ ಆಗ್ರಹಿಸಿ ಅಹೋರಾತ್ರಿ ಧರಣಿ

Youth leader Nitin leads BJP workers and local residents in Hosangara to demand the construction of a new bus station. The existing old structure is unsafe and requires immediate government action.

ಹೊಸನಗರ : ತಾಲ್ಲೂಕಿನ ನಗರ ಹೋಬಳಿಯ ದುಸ್ಥಿತಿಯಲ್ಲಿರುವ ಹಳೆಯ ಬಸ್ ನಿಲ್ದಾಣ ತೆರವುಗೊಳಿಸಿ ನೂತನ ಬಸ್ ನಿಲ್ದಾಣ ನಿರ್ಮಿಸಲು ಆಗ್ರಹಿಸಿ ಯುವ ಮುಖಂಡ ನಗರ ನಿತಿನ್ ನೇತ್ರತ್ವದಲ್ಲಿ ಸಾರ್ವಜನಿಕರು ಹಾಗೂ ಬಿಜೆಪಿ ನಗರ ಹೋಬಳಿ ಕಾರ್ಯಕರ್ತರು ಅಹೋರಾತ್ರಿ ಧರಣಿಗೆ ಮುಂದಾಗಿದ್ದಾರೆ.

ಈ ಬಗ್ಗೆ ಮಾದ್ಯಮದವರೊಂದಿಗೆ ಮಾತನಾಡಿದ  ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಗರದ ನೂತನ ಬಸ್ ನಿಲ್ದಾಣ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದರೂ, ಸ್ಥಳೀಯ ಗ್ರಾಮ ಪಂಚಾಯತ್‌ನ ಕೆಲ ಸದಸ್ಯರು ವೈಯಕ್ತಿಕ ಹಿತಾಸಕ್ತಿಯಿಂದ ಅನಧಿಕೃತವಾಗಿ ಎನ್‌ಒಸಿ ನೀಡದೆ ಯೋಜನೆಯನ್ನು ವಿಳಂಬಗೊಳಿಸಿದ್ದಾರೆ ಎಂದು ಆರೋಪಿಸಿದರು.

ಪ್ರಸ್ತುತ ಇರುವ ಹಳೆಯ ಬಸ್ ನಿಲ್ದಾಣ ಸಾರ್ವಜನಿಕ ಬಳಕೆಗೆ ಅಪಾಯಕರವಾಗಿದೆ ಎಂದು ಒತ್ತಾಯಿಸಿದ್ದಾರೆ. ಅದು ಕುಸಿದು ಬಿದ್ದರೆ ಜನಸಾಮಾನ್ಯರ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇರುವುದರಿಂದ, ಸರ್ಕಾರ ತಕ್ಷಣವೇ ನೂತನ ಬಸ್ ನಿಲ್ದಾಣ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಅಗತ್ಯವಿದೆ ಎಂದು ಹೇಳಿದ್ದಾರೆ.

ಈ ಪ್ರತಿಭಟನೆಯಲ್ಲಿ ರಾಜೇಶ್ ಹಿರಿಮನೆ, ರಮಾಕಾಂತ್ ಮತ್ತಿಮನೆ, ಶ್ರೀಕಾಂತ್, ಜಗದೀಶ್ ಹೆಂಡೆಗದ್ದೆ, ಕೆ.ಬಿ. ಕುಮಾ, ಕೃಷ್ಣಮೂರ್ತಿ, ಉಮೇಶ್, ಸಂತೋಷ ಚಿಕ್ಕಪೇಟೆ, ರಮೇಶ್, ದೇವರಾಜ್, ವಿನಾಯಕ ಚಕ್ಕಾರು ಸೇರಿದಂತೆ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.

About The Author

Exit mobile version