Headlines

ಲವ್ ಮ್ಯಾರೇಜ್ ಗೆ ಸಹಕರಿಸಿದ್ದಾರೆಂದು ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ಇಬ್ಬರ ಕೊಲೆ

Two people were attacked and murdered with deadly weapons for allegedly helping in a love marriage.

ಶಿವಮೊಗ್ಗ : ಪ್ರೀತಿಗೆ ಸಹಕರಿಸಿದ್ದಾರೆಂದು ಬಾವಿಸಿ ಇಬ್ಬರು ವ್ಯಕ್ತಿಗಳ ಮೇಲೆ  ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಭದ್ರಾವತಿಯ ಜೈಭೀಮ್ ನಗರದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಕಿರಣ್ (25) ಮತ್ತು ಮಂಜುನಾಥ್(65) ಮೃತರು ಎಂದು ಗುರುತಿಸಲಾಗಿದೆ.

ಜೈಭೀಮ್ ನಗರದ ನಿವಾಸಿಯಾಗಿದ್ದ ಶೃತಿ ಮತ್ತು ನಂದೀಶ್ ಪರಸ್ಪರ ಪ್ರೀತಿಸುತ್ತಿದ್ದರು. ಪ್ರೀತಿಸುತ್ತಿದ್ದ ಯುವತಿ ಮತ್ತು ಯುವಕ ಎರಡು ದಿನಗಳ ಹಿಂದೆ  ನಾಪತ್ತೆಯಾಗಿದ್ದರು. ಶುಕ್ರವಾರ ಭದ್ರಾವತಿಗೆ ವಾಪಾಸ್ ಆದ ಯುವಕ ಯುವತಿ ನೇರವಾಗಿ  ಭದ್ರಾವತಿ ಹಳೇನಗರ ಪೊಲೀಸ್ ಠಾಣೆಗೆ ಹೋಗಿದ್ದರು. ಹುಡುಗಿ ಹುಡುಗನೊಂದಿಗೆ ಹೋಗುವುದಾಗಿ ಹೇಳಿದಾಗ, ಹುಡುಗಿಯ ಸಹೋದರ ಮತ್ತು ಅವನ ಸ್ನೇಹಿತರು ದಂಪತಿಯ ಇಬ್ಬರು ಸ್ನೇಹಿತರಾದ ಕಿರಣ್ ಮತ್ತು ಮಂಜುನಾಥ್ ಪ್ರೀತಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಭಾವಿಸಿ ಮಾರಾಕಾಸ್ತ್ರದಿಂದ ಇರಿದಿದ್ದಾರೆ. ಈ ಗಲಾಟೆಯಲ್ಲಿ ಗಾಯಗೊಂಡವರನ್ನ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ನಗರಕ್ಕೆ ಕಳುಹಿಸಲಾಗಿದೆ.

ಹತ್ಯೆಯಲ್ಲಿ ಭಾಗಿಯಾದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಭದ್ರಾವತಿಯ ಹಳೇ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

Exit mobile version