January 11, 2026

HIT AND RUN | ಬೈಕ್ ಹಾಗೂ ಸ್ಕೂಟಿ ನಡುವೆ ಡಿಕ್ಕಿ – ಯುವತಿಗೆ ಗಂಭೀರ ಗಾಯ , ಬೈಕ್ ಸವಾರ ಪರಾರಿ

Collision between bike and scooty – Young woman seriously injured, biker flees

ರಿಪ್ಪನ್ ಪೇಟೆ : ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಯುವತಿಯೊಬ್ಬಳಿಗೆ ಗಂಭೀರ ಗಾಯವಾಗಿರುವ ಘಟನೆ ಹೊಸನಗರ ರಸ್ತೆಯ ಚಿಪ್ಪಿಗರ ಕೆರೆಯ ಬಳಿ ನಡೆದಿದೆ . ಅತೀ ವೇಗವಾಗಿ ಬಂದು ಅಜಾಗರೂಕತೆಯಿಂದ ಸ್ಕೂಟಿಗೆ ಡಿಕ್ಕಿಯಾಗಿ ನಂತರ ಸ್ಥಳದಿಂದ ಪರಾರಿಯಾಗಿರುವ ಬೈಕ್ ಸಮೇತ ಸವಾರ ಪರಾರಿಯಾಗಿದ್ದಾನೆ.

ಗವಟೂರು ಸಮೀಪದ ಹಳೂರು ನಿವಾಸಿ ಅನ್ನಪೂರ್ಣ ಎಂಬ ಯುವತಿಗೆ ಗಂಭೀರ ಗಾಯವಾಗಿರುವ ಘಟನೆ ನಡೆದಿದೆ.

ಹೊಸನಗರ ರಸ್ತೆಯ ಕೆರೆಯ ಏರಿ ಮೇಲೆ ಹಳೂರು ನಿವಾಸಿ ಸಂಜೀವ್ ತಮ್ಮ ಮಗಳೊಂದಿಗೆ ಹೊಂಡಾ ಆಕ್ಟೀವಾ ಸ್ಕೂಟಿಯಲ್ಲಿ ಗವಟೂರಿನಿಂದ ಪಟ್ಟಣದ ಕಡೆಗೆ ಬರುತಿದ್ದಾಗ ಪಟ್ಟಣದ ಕಡೆಯಿಂದ ಅತೀ ವೇಗವಾಗಿ ಬಂದ ಅನಾಮಧೇಯ ಬೈಕ್ ಸವಾರ ಏಕಾಏಕಿ ಸ್ಕೂಟಿಗೆ ಡಿಕ್ಕಿ ಹೊಡೆದು ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ.

ತತ್ತಕ್ಷಣ ಸ್ಥಳಿಯರು ಗಾಯಾಳುಗಳನ್ನು ಆಂಬುಲೆನ್ಸ್ ಮೂಲಕ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಪ್ರಥಮ ಚಿಕಿತ್ಸೆ ನೀಡಿ ಹೆಚ್ವಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕರೆದೊಯ್ಯಲಾಗಿದೆ.

ರಿಪ್ಪನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

About The Author

Exit mobile version