Headlines

ಆನಂದಪುರ | ಜಿಂಕೆ ಚರ್ಮ ಮಾರಾಟಕ್ಕೆ ಯತ್ನ – ಪೊಲೀಸ್ ಅರಣ್ಯ ಸಂಚಾರಿದಳ ದಾಳಿ : ಮಾಲು ಸಮೇತ ಓರ್ವನ ಬಂಧನ

Attempt to sell deer skin – Police forest patrol raids: One arrested with goods

ಆನಂದಪುರ : ಸಾಗರ ಪೊಲೀಸ್ ಅರಣ್ಯ ಸಂಚಾರಿದಳ ಮಿಂಚಿನ ದಾಳಿ  ನಡೆಸಿ ಚಿಂಕಾರಿ ಜಿಂಕೆಯ ಚರ್ಮ ಮಾರಾಟ ಮಾಡಲು ಯತ್ನಿಸಿದ ಆರೋಪಿಯನ್ನು ಮಾಲು ಸಮೇತ ಬಂಧಿಸಿರುವ ಘಟನೆ ಯಡೆಹಳ್ಳಿ ವೃತ್ತದಲ್ಲಿ ನಡೆದಿದೆ.

ನವಲುಗುಂದ ಗ್ರಾಮದ ಅರ್ಜುನ್ ಬಿನ್ ರಾಮಪ್ಪ ಬಂಧಿತ ವ್ಯಕ್ತಿಯಾಗಿದ್ದಾನೆ.

ಉಅಡೆಹಳ್ಳಿ ವೃತ್ತದ ಬಳಿ ಚಿಂಕಾರಿ ಜಿಂಕೆ ಚರ್ಮ ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ತಿಳಿದು, ಕೂಡಲೇ ಅರಣ್ಯ  ಸಂಚಾರಿದಳದ ಪಿಎಸೈ ವಿನಾಯಕ್ ನೇತ್ರತ್ವದಲ್ಲಿ ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.ಬಂಧಿತನಿಂದ ಜಿಂಕೆಚರ್ಮವನ್ನು ವಶಪಡಿಸಿಕೊಳ್ಳಲಾಗಿದೆ.ಆ

ಆರೋಪಿಯ ಮೇಲೆ ವನ್ಯಜೀವಿ ಸಂರಕ್ಷಣ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಂಗದ ಮುಂದೆ ಹಾಜರುಪಡಿಸಿದ್ದು , ಮಾನ್ಯ ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ದಾಳಿಯಲ್ಲಿ ಅರಣ್ಯ ಸಂಚಾರಿದಳದ ಸಿಬ್ಬಂದಿಗಳಾದ ವಿಶ್ವನಾಥ್ ,ಚಂದ್ರಕಾಂತ್ , ಆಂಜನೇಯ ಪಾಟೀಲ್ ,ಮಹೇಶ್ , ಪ್ರಮೋದ ಕುಮಾರಿ ಹಾಗೂ ಹಾಲೇಶ್ ಇದ್ದರು‌

Exit mobile version