Headlines

ಮಾಲೀಕನ ಸಾವಿನ ದುಃಖ ತಾಳಲಾರದೆ ಪ್ರಾಣ ತ್ಯಜಿಸಿದ ಸಾಕು ನಾಯಿ

ಮಾಲೀಕನ ಸಾವಿನ ದುಃಖ ತಾಳಲಾರದೆ ಪ್ರಾಣ ತ್ಯಜಿಸಿದ ಸಾಕು ನಾಯಿ

ಭದ್ರಾವತಿ: ನಾಯಿ — ನಿಷ್ಠೆ, ಪ್ರೀತಿ ಮತ್ತು ಬದ್ಧತೆಯ ಪ್ರತೀಕ. ಮಾಲೀಕನಿಗಾಗಿ ಜೀವವನ್ನೇ ಪಣಕ್ಕಿಡುವ ಈ ಪ್ರಾಣಿ, ಕೆಲವೊಮ್ಮೆ ಅವನಿಂದ ದೂರವಾಗುವುದನ್ನೇ ಸಹಿಸಲಾರದು. ಭದ್ರಾವತಿಯಲ್ಲಿ ನಡೆದ ಈ ಹೃದಯವಿದ್ರಾವಕ ಘಟನೆ ಅದಕ್ಕೆ ಜೀವಂತ ಉದಾಹರಣೆ.

ನಗರದ ಹುತ್ತಾಕಾಲನಿಯ ಜಿಂಕ್‌ಲೈನ್ ಪ್ರದೇಶದ ನಿವಾಸಿ ಲಾರೆನ್ಸ್ (61) ಪೈಂಟರ್ ಕೆಲಸ ಮಾಡುತ್ತಿದ್ದು, ಮೆದುಳಿನ ಕಾಯಿಲೆಯಿಂದ ಬಳಲುತ್ತಿದ್ದರು. ಇತ್ತೀಚೆಗೆ ಅವರು ನಿಧನರಾದರು. ಆಸ್ಪತ್ರೆಯಿಂದ ಅವರ ಮೃತದೇಹವನ್ನು ಮನೆಗೆ ತರಲಾಗುತ್ತಿದ್ದಂತೆಯೇ, ಮನೆಯ ಶ್ವಾನವು ಆ ದೃಶ್ಯವನ್ನು ಕಂಡು ತೀವ್ರ ನೊಂದುಕೊಂಡಿತು.

ಮಾಲೀಕನ ಮೃತದೇಹದ ಪಕ್ಕದಲ್ಲೇ ಅದು ಮಲಗಿ, ಶಾಂತವಾಗಿ ತನ್ನ ಅಂತಿಮ ಉಸಿರೆಳೆದಿತು. ಕುಟುಂಬಸ್ಥರು ಲಾರೆನ್ಸ್ ಅವರ ಅಂತ್ಯಕ್ರಿಯೆ ಬಳಿಕ, ಆ ಶ್ವಾನವನ್ನೂ ಮನೆಯ ಹಿಂಭಾಗದಲ್ಲೇ ಗೌರವಪೂರ್ವಕವಾಗಿ ಅಂತ್ಯಸಂಸ್ಕಾರ ನಡೆಸಲಾಯಿತು.

Exit mobile version