Headlines

ನೆತ್ತಿಗೇರಿದ ಅಧಿಕಾರದ ಅಮಲು – ಸಾಗರ ನಗರಸಭೆ ಆಯುಕ್ತ ನಾಗಪ್ಪರಿಂದ ಬೀದಿ ವ್ಯಾಪಾರಿಗಳಿಗೆ ಅವಾಚ್ಯ ನಿಂದನೆ – ವಿಡಿಯೋ ವೈರಲ್

ನೆತ್ತಿಗೇರಿದ ಅಧಿಕಾರದ ಅಮಲು – ಸಾಗರ ನಗರಸಭೆ ಆಯುಕ್ತ ನಾಗಪ್ಪರಿಂದ ಬೀದಿ ವ್ಯಾಪಾರಿಗಳಿಗೆ ಅವಾಚ್ಯ ನಿಂದನೆ – ವಿಡಿಯೋ ವೈರಲ್

ಸಾಗರ: ನಗರಸಭೆ ಆಯುಕ್ತ ನಾಗಪ್ಪನವರು ಬೀದಿ ಬದಿ ವ್ಯಾಪಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಾಹಿತಿಯ ಪ್ರಕಾರ, ನಿನ್ನೆ ರಾತ್ರಿ ಸಾಗರದ ರಾಣಿ ಚೆನ್ನಮ್ಮ ವೃತ್ತದ ಬಳಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ನಿಮಿತ್ತ ಸ್ಥಳ ಖಾಲಿ ಮಾಡಿಸುವ ವೇಳೆ ನಾಗಪ್ಪನವರು ಸ್ಥಳಕ್ಕೆ ಬಂದು ವ್ಯಾಪಾರಿಗಳಿಗೆ ಜಾಗ ತೆರವುಗೊಳಿಸಲು ಸೂಚಿಸಿದ್ದಾರೆ. ಈ ವೇಳೆ ಅವರು ಅಸಭ್ಯ ಹಾಗೂ ಅವಾಚ್ಯ ಶಬ್ದಗಳನ್ನು ಬಳಸಿ ಮಾತನಾಡಿರುವ ದೃಶ್ಯಗಳು ಕ್ಯಾಮೆರಾಗಳಲ್ಲಿ ಸೆರೆಯಾಗಿವೆ.

ಈ ಘಟನೆಗೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಮಾಣದಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ನಗರಸಭೆಯ AEE ಆಗಿ ಕಾರ್ಯನಿರ್ವಹಿಸುತ್ತಾ, ಕಳೆದ 17 ವರ್ಷಗಳಿಂದ ಪ್ರಭಾರ ಆಯುಕ್ತರಾಗಿ ಮುಂದುವರೆಯುತ್ತಿರುವ ನಾಗಪ್ಪನವರಿಗೆ ಎಲ್ಲ ಪಕ್ಷಗಳ ಮುಖಂಡರ ಕೃಪಾಕಟಾಕ್ಷವಿದೆ ಎಂಬ ಚರ್ಚೆಯೂ ಜೋರಾಗಿದೆ.

ಬಡ ಬೀದಿ ವ್ಯಾಪಾರಿಗಳ ಮೇಲೆ ಅತಿಯಾದ ಅಧಿಕಾರದ ಅಮಲಿನಿಂದ ಬೋ*** ಮಗ , ಸೂ**** ಮಗ ಎಂದರೇ ಜನಸಾಮಾನ್ಯರೇನು ಇವರ ಮನೆ ಜೀತದಾಳುಗಳಾ? ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಈಗ ಚರ್ಚೆಗೆ ಗ್ರಾಸವಾಗಿದೆ.

Exit mobile version