Headlines

RIPPONPETE | ಹಿರೇಮೈಥಿ ಗ್ರಾಮದಲ್ಲಿ ಜಮೀನು ವಿವಾದದ ಹಿನ್ನೆಲೆಯಲ್ಲಿ ಗಲಾಟೆ – ಎರಡು ಗುಂಪುಗಳ ನಡುವೆ ಘರ್ಷಣೆ, ಹಲವರಿಗೆ ಗಾಯ

RIPPONPETE | ಹಿರೇಮೈಥಿ ಗ್ರಾಮದಲ್ಲಿ ಜಮೀನು ವಿವಾದದ ಹಿನ್ನೆಲೆಯಲ್ಲಿ ಗಲಾಟೆ – ಎರಡು ಗುಂಪುಗಳ ನಡುವೆ ಘರ್ಷಣೆ, ಹಲವರಿಗೆ ಗಾಯ

ರಿಪ್ಪನ್ ಪೇಟೆ : ಇಲ್ಲಿನ ಹಿರೇಮೈಥಿ ಗ್ರಾಮದಲ್ಲಿ జಮೀನು ವಿವಾದದ ಹಿನ್ನೆಲೆಯಲ್ಲಿ ಎರಡು ಕುಟುಂಬಗಳ ನಡುವೆ ತೀವ್ರ ಗಲಾಟೆ ಸಂಭವಿಸಿ ಪರಸ್ಪರ ದೊಣ್ಣೆ, ಗುದ್ದಲಿ ಹಾಗೂ ಬೇಲಿ ಗೂಟಗಳಿಂದ ಹೊಡೆದಾಟ ನಡೆದ ಪರಿಣಾಮ ಐದು ಜನರಿಗೆ ತೀವ್ರ ಗಾಯಗಳಾಗಿದ್ದು, ಗಾಯಾಳುಗಳನ್ನು ಸಾಗರ ಹಾಗೂ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಹಿಳೆ-ಪುರುಷರು ಸೇರಿದಂತೆ ಎರಡೂ ಕುಟುಂಬಗಳ ಹಲವು ಸದಸ್ಯರು ಈ ಮಾರಾಮಾರಿಯಲ್ಲಿ ಭಾಗಿಯಾಗಿದ್ದಾರೆ

ಹಿರೆಮೈಥೆ ಗ್ರಾಮದ ಶಿವಪ್ಪ ಜಿ.ಟಿ  ನೀಡಿರುವ ದೂರಿನ ಪ್ರಕಾರ, ತಮ್ಮ ತೋಟಕ್ಕೆ ಹೋಗುವ ದಾರಿಯ ಕುರಿತಾಗಿ ಪಕ್ಕದ ಜಮೀನಿನ ಗಂಗಾಧರರ ಕುಟುಂಬದೊಂದಿಗೆ ಹಲವು ವರ್ಷಗಳಿಂದ ವಿವಾದ ಮುಂದುವರಿದು ಬಂದಿದೆ. ಇದೇ ವಿವಾದ ಹಿನ್ನಲೆಯಲ್ಲಿ ಗಂಗಾಧರ, ಅವರ ಪುತ್ರರು ಈಶ್ವರ–ಲೋಕೇಶ್ ಮತ್ತು ತಮ್ಮ ತಿಮ್ಮಪ್ಪ ತಡೆದು ನಿಲ್ಲಿಸಿ ಜಗಳ ಪ್ರಾರಂಭಿಸಿದರೆಂದು ದೂರಿನಲ್ಲಿ ತಿಳಿಸಲಾಗಿದೆ. ಈಶ್ವರ ಕೈಯಲ್ಲಿದ್ದ ಗುದ್ದಲಿಯಿಂದ ದಾಳಿ ಮಾಡಲು ಪ್ರಯತ್ನಿಸಿದಾಗ ಹೊಡೆತ ಪಿರಿಯಾದಿದಾರರ ಬಲ ಹಣೆಗೆ ಬಿದ್ದು ರಕ್ತಗಾಯವಾಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ದೊಣ್ಣೆಯಿಂದ ಹೊಡೆದ ಪರಿಣಾಮ ಪಿರಿಯಾದಿದಾರ ಮತ್ತು ಅವರ ಮಗನಿಗೂ ಗಾಯಗಳಾಗಿವೆ. ಜಗಳ ಬಿಡಿಸಲು ಬಂದ ಉಪೇಂದ್ರನ ಮೇಲೂ ದಾಳಿ ನಡೆದಿದ್ದು, ಸ್ಥಳೀಯರು ಮಧ್ಯ ಪ್ರವೇಶಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ದೂರು ಸಲ್ಲಿಸಿದ್ದಾರೆ.

ಹಿರೆಮೈಥೆ ಗ್ರಾಮದ ಗಂಗಾಧರ್ ನೀಡಿರುವ ದೂರಿನಲ್ಲಿ, ಬಗರ್ ಹುಕುಂ ಜಮೀನಿನ ಹಕ್ಕು ಕುರಿತು ತೀರ್ಪು ಪಿರಿಯಾದಿದಾರರ ಪರ ಬಂದಿರುವುದಕ್ಕೆ ಶಿವಪ್ಪ ಮತ್ತು ಲಿಂಗಪ್ಪ ಅಸಮಾಧಾನಗೊಂಡಿದ್ದರು. ಈ ಹಿನ್ನೆಲೆ 27ರಂದು ತೋಟ ಹಾದಿ ವಿಚಾರವಾಗಿ ಮಾತಿಗೆ ಮಾತು ಬೆಳೆದು ಜಗಳ ಉಂಟಾಯಿತು ಎಂದು ದೂರಿನಲ್ಲಿ ಹೇಳಲಾಗಿದೆ. ಶಿವಪ್ಪನ ಅಳಿಯ ಸಂದೇಶ್ ಬೇಲಿ ಗೂಟದಿಂದ ದಾಳಿ ಮಾಡಿದ ಪರಿಣಾಮ ಈಶ್ವರ ತಲೆಗೆ ಪೆಟ್ಟು ಬಿದ್ದಿದ್ದು, ಇನ್ನೂ ಕೆಲವರಿಗೆ ಕೈ–ಕಾಲುಗಳಿಗೆ ಗಾಯಗಳಾಗಿವೆ ಎಂದು ಅವರು ಮಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಘಟನೆಯ ನಂತರ ಎರಡು ಕುಟುಂಬಗಳು ಪರಸ್ಪರ ಜೀವ ಬೆದರಿಕೆ ಮತ್ತು ಹಲ್ಲೆ ಆರೋಪಗಳನ್ನು ಮಾಡಿದ್ದಾರೆ. ರಿಪ್ಪನ್‌ಪೇಟೆ ಠಾಣೆಯಲ್ಲಿ ಎರಡೂ FIR ಗಳನ್ನು ದಾಖಲಿಸಲಾಗಿದ್ದು, ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ.

Exit mobile version