
ಅನೆ ದಾಳಿಯಿಂದ ಹಾನಿಗೀಡಾದ ಪ್ರದೇಶಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ಭೇಟಿ , ಪರಿಶೀಲನೆ
ರಿಪ್ಪನ್‌ಪೇಟೆ;- ಹೊಸನಗರ ತಾಲೂಕಿನ ಅರಸಾಳು -ಕೆಂಚನಾಲ -ಬೆಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ದಿಢೀರ್ ಕಾಣಿಸಿಕೊಂಡಿರುವ ಕಾಡು ಆನೆಗಳು ರೈತರು ಬೆಳೆದ ಬಾಳೆ ಮತ್ತು ಭತ್ತದ ಗದ್ದೆಗಳಿಗೆ ನುಗ್ಗಿ ಬೆಳೆಯನ್ನು ತಿಂದು ದ್ವಂಸಗೊಳಿಸಿರುವ ಪ್ರದೇಶಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಅರಣ್ಯಇಲಾಖೆಯ ಮತ್ತುಕಂದಾಯ ಇಲಾಖೆ ಆಧಿಕಾರಿಗಳೊಂದಿಗೆ ದಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸುವುದರೊಂದಿಗೆ ಹಾನಿಗೊಳಗಾಗಿರುವ ರೈತರಿಗೆ ವೈಯಕ್ತಿಕ ಧನ ಸಹಾಯವನ್ನು ನೀಡಿ ಹಾಗೂ ಅರಣ್ಯಇಲಾಖೆಯಿಂದ ಪರಿಹಾರ ಕೊಡುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿ ಕೆಂಚನಾಲ ಗ್ರಾಮ ಪಂಚಾಯಿತ್ ವ್ಯಾಪ್ತಿಯ ಮಸರೂರು ಮಾಣಿಕೆರೆ ಹೊನ್ನಕೊಪ್ಪಕಮದೂರು ಬಳಿ ರೈತರ ಬಾಳೆ ತೋಟಕ್ಕೆ ಆನೆ ದಾಳಿ ನಡೆಸಿ ಬಾಳೆ ದ್ವಂಸಗೊಳಿಸಿದ್ದು ಕಳೆದ ವರ್ಷ ಸಹ ಇದೇಜಾಗದಲ್ಲಿ ಅನೆ ಬಂದು ಹೋಗುವ ಮೂಲಕ ಬೆಳೆ ಹಾನಿಗೊಳಿಸಿರುತ್ತವೆ ಅದ್ದರಿಂದ ಮುಂದಿನ ದಿನಗಳಲ್ಲಿ ಅನೆ ಬರದಂತೆ ಸೋಲಾರ್ಗಾರ್ಡ್ ಅಳವಡಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ತಕ್ಷಣ ಅಳವಡಿಸುವ ಕಾರ್ಯ ಕೈಗೊಳ್ಳುವಂತೆ ಅರಣ್ಯಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಬೆಳ್ಳೂರು ಗ್ರಾಮ ಪಂಚಾಯಿತ್ ವ್ಯಾಪ್ತಿಯ ಕಳಸೆ ಗ್ರಾಮದಲ್ಲಿ ಸಹ ಇದೇರೀತಿಯಲ್ಲಿರೈತರಜಮೀನಿಗೆ ನುಗ್ಗಿ ಬೆಳೆ ನಾಶಗೊಳಿಸಿರುತ್ತವೆ ಕೈಗೆ ಬಂದತುತ್ತು ಬಾಯಿಗೆ ಇಲ್ಲದಂತಾಗಿದೆ ಎಂದು ರೈತರುತಮ್ಮ ನೋವನ್ನು ಶಾಸಕ ಬೇಳೂರು ಗೋಪಾಲಕೃಷ್ಣ ಬಳಿ ತೊಡಿಕೊಂಡಾಗ ಶಾಸಕರು ಸ್ಪಂದಿಸಿ ವೈಯಕ್ತಿಕಧನ ಸಹಾಯ ನೀಡುವುದರೊಂದಿಗೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ರೈತರಿಗೆ ಪರಿಹಾರ ನೀಡುವ ಬಗ್ಗೆ ತಾರತಮ್ಯ ಮಾಡದೆ ಸಮರ್ಪಕವಾಗಿ ಪರಿಶೀಲನೆ ನಡಸಿ ಪರಿಹಾರಕೊಡುವ ವ್ಯವಸ್ಥೆ ಮಾಡುವಂತೆ ಖಡಕ್ ಸೂಚನೆ ನೀಡಿದರು.
ಅರಣ್ಯ ಜಾಗ ಒತ್ತುವರಿದಾರರ ರೈತರಿಗೆ ನೋಟಿಸ್
ಕೆಂಚನಾಲ ಗ್ರಾಮ ಪಂಚಾಯಿತ್ ವ್ಯಾಪ್ತಿಯ ಅರಸಾಳು ವಲಯ ವ್ಯಾಪ್ತಿಯಲ್ಲಿ ಬರುವ ಮಸರೂರು ಮಾಣಿಕೆರೆಗ್ರಾಮದಅರಣ್ಯ ಸರ್ವೇ ನಂಬರ್‌ನಲ್ಲಿಆಕ್ರಮ ಸಾಗುವಳಿ ಮಾಡಿಕೊಂಡಿರುವರೈತನೋರ್ವರಿಗೆಅರಣ್ಯಇಲಾಖೆ ನೋಟಿಸ್ಜಾರಿ ಮಾಡಿದ್ದಾರೆ ಎಂದು ಶಾಸಕರ ಬಳಿ ರೈತ ನೋಟಿಸಿ ಹಿಡಿದುಕೊಂಡು ತೋರಿಸಿದಾಗ ಸ್ಥಳದಲ್ಲಿದ್ದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ತರಾಟೆಗೆ ತಗೆದುಕೊಂಡ ಅವರು ಈ ರೀತಿಯಾಗಿ ನೋಟಿಸ್ ನೀಡಿದರೆ ಮುಂದೆ ನಿಮ್ಮಗಳ ವಿರುದ್ದಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಕೊಡಗು -ಹಾಸನ-ಚಿಕ್ಕಮಂಗಳೂರು ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿ ಇರುತ್ತಿತ್ತು ಆದರೆ ಇತ್ತೀಚಿನ ವರ್ಷಗಳಲ್ಲಿ ಮಲೆನಾಡಿನ ವ್ಯಾಪ್ತಿಯಲ್ಲಿ ಕಾಣಿಸಿಕೊಳ್ಳುತ್ತಿದೆ ಅವುಗಳು ಸಂಚರಿಸುವ ಕಾರಿಡಾರ್ ನ್ನು ಬಂದ್ ಮಾಡುವಕಾರ್ಯ ಮಾಡಲಾಗುವುದುಅಲ್ಲದೆ ಕಳೆದ ವರ್ಷ ಕೃಷಿ ಕಾರ್ಮಿಕನೋರ್ವನನ್ನು ಬಲಿ ಪಡೆದಿರುವುದು ಇನ್ನು ಜನಮಾನಸದಲ್ಲಿ ಮಾಸುವ ಮುನ್ನವೇ ಪುನ: ಅನೆಗಳು ಬಂದಿರುತ್ತವೆ, ಅದರೆ ಬಿಜೆಪಿಯವರು ಉದ್ದೇಶ ಪೂರ್ವಕವಾಗಿ ಇಲ್ಲಸಲ್ಲದ ಅರೋಪವನ್ನು ಮಾಡುತ್ತಿದ್ದಾರೆ.ಅವರ ಅವಧಿಯಲ್ಲಿ ಈ ರೀತಿ ದಾಳಿ ಮಾಡಿದಾಗ ಏನು ಕಡಿದು ಗುಡ್ಡೆ ಹಾಕಿದ್ದಾರೆ ಎಂದು ಹೇಳಲಿ ಎಂದು ಸವಾಲು ಹಾಕಿದ ಅವರು ಅವರ ಅವಧಿಯಲ್ಲಿ ಯಾವ ಅರಣ್ಯಾಧಿಕಾರಿಗಳನ್ನು ಅಮಾನತ್ತು ಪಡಿಸಿ ಕ್ರಮ ಜರುಗಿಸಿದ್ದಾರೆಂದು ಹೇಳಿ ಎಂದರು.
ಈ ಸಂದರ್ಭದಲ್ಲಿ ಶಿವಮೊಗ್ಗ ವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಜ್ಜಯ್ಯ, ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಸಹಾಯಕಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಹೊಸನಗರ ತಹಶೀಲ್ದಾರ್ ಭರತ್‌ರಾಜ್ ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್.ವಿ.ಈಶ್ವರಪ್ಪಗೌಡ, ಹೊಸನಗರತಾಲ್ಲೂಕ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ಚಂದ್ರಮೌಳಿಗೌಡ,ಉಬೇದುಲ್ಲಾ ಷರೀಫ್ , ರವೀಂದ್ರ ಕೆರೆಹಳ್ಳಿ, ಡಿ.ಈ.ಮಧುಸೂದನ್, ಗಣಪತಿ,ಎನ್.ಚಂದ್ರೇಶ್, ನಿರೂಪ್‌ಕುಮಾರ್,ಆಶೀಫ್‌ಭಾಷಾ, ಖಲಿಲ್ ಷರೀಫ್, ಗೋಪಾಲ ಕೃಷ್ಣ ಜಿ. ಆರ್ ಹಾಗೂ ಇನ್ನಿತರರು ಹಾಜರಿದ್ದರು.



