ಸಾಲಕ್ಕೆ ಬೇಸತ್ತು ಕಳೆನಾಶಕ ಸೇವಿಸಿ ವ್ಯಕ್ತಿ ಸಾವು
ರಿಪ್ಪನ್ ಪೇಟೆ : ವಿಪರೀತ ಸಾಲದ ಒತ್ತಡದಿಂದ ಬಳಲುತ್ತಿದ್ದ ವ್ಯಕ್ತಿಯೋರ್ವ ಕಳೆನಾಶಕ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಚಂದಳ್ಳಿಯಲ್ಲಿ ನಡೆದಿದೆ.
ಚಂದಳ್ಳಿ ಗ್ರಾಮದ ರಾಜು (45) ಮೃತ ವ್ಯಕ್ತಿಯಾಗಿದ್ದಾನೆ.
ಮೃತ ರಾಜು ಅವರ ತಾಯಿ ಪುಟ್ಟಮ್ಮ ಅವರ ಹೆಸರಿನಲ್ಲಿ 1 ಎಕರೆ ಖಾತೆ ಜಮೀನು ಹಾಗೂ 3 ಎಕರೆ ಬಗರ್‌ಹುಕುಂ ಜಮೀನು ಇದ್ದು, ಕೃಷಿ ಸಂಬಂಧಿತ ಕೆಲಸಗಳಿಗೆ ವಿವಿಧ ಸಂಸ್ಥೆಗಳಿಂದ ಸಾಲ ಪಡೆದಿದ್ದರು.ಈ ಸಾಲದ ವಿಚಾರವನ್ನು ಮನಸ್ಸಿಗೆ ಹಾಕಿಕೊಂಡ ರಾಜು ಪ್ರತಿದಿನ ತಾಯಿಗೆ ಸಾಲದ ಬಗ್ಗೆ ಪ್ರಶ್ನಿಸುತ್ತಿದ್ದು, ಇದರಿಂದ ಮನೋವೈಕಲ್ಯಕ್ಕೊಳಗಾಗಿರುವ ಸೂಚನೆಗಳು ಕಂಡು ಬಂದಿದ್ದವು.
ದಿನಾಂಕ 19-11-2025 ರಂದು ಸಂಜೆ 7 ಗಂಟೆಗೆ ಮನೆಯಲ್ಲಿ ಕಳೆನಾಶಕ ಔಷಧ ಸೇವಿಸಿದ ರಾಜು ವಾಂತಿ ಮಾಡುತ್ತಿದ್ದನ್ನು ತಾಯಿ ಪುಟ್ಟಮ್ಮ ಗಮನಿಸಿ ತಕ್ಷಣ ನೆರವಿಗೆ ಕೂಗಿಕೊಂಡರು. ನಂತರ 108 ಆಂಬುಲೆನ್ಸ್ ಮೂಲಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.ಆದರೆ, ಚಿಕಿತ್ಸೆ ಫಲಕಾರಿಯಾಗದೇ 20-11-2025 ರಂದು ಬೆಳಗ್ಗೆ 5.30ಕ್ಕೆ ರಾಜು ಮೃತಪಟ್ಟಿದ್ದಾರೆ.
ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಲೇಜು ಸಮವಸ್ತ್ರದಲ್ಲೇ ಕೆರೆಯಲ್ಲಿ ಪತ್ತೆಯಾದ ಬಿಸಿಎ ವಿದ್ಯಾರ್ಥಿನಿಯ ಶವ ಶಿಕಾರಿಪುರ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದ ಹುಚ್ಚುರಾಯಸ್ವಾಮಿ ಕೆರೆಯಲ್ಲಿ ಬಿಸಿಎ…
ವಾಮಾಚಾರದ ಭಯ ಹುಟ್ಟಿಸಿ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ವಂಚನೆ: ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧನ Bhadravati police arrested…
ರಿಪ್ಪನ್‌ಪೇಟೆ: ವಾಹನದಿಂದ ಬಿದ್ದ ಕರುವನ್ನು ಕಿಲೋಮೀಟರ್‌ಗಟ್ಟಲೆ ಎಳೆದೊಯ್ದ ಚಾಲಕ; ಕರು ಸ್ಥಿತಿ ಚಿಂತಾಜನಕ , ಸ್ಥಳೀಯರ ಆಕ್ರೋಶ !! A…
ಈಸ್ಟ್‌ವೆಸ್ಟ್ ಬಸ್ ಮಾಲೀಕ ತಲ್ಕೀನ್ ಅಹ್ಮದ್ ನಿಧನ Talkeen Ahmed, owner of East West Bus institution and…
ಪತ್ರಕರ್ತನ ಮನೆಗೆ ಕನ್ನ ; ₹6.57 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕಳವು Thieves broke into journalist Shi.…
ಚೋರಡಿ ಲಾಡ್ಜ್‌ನಲ್ಲಿ ಪೊಲೀಸರಿಗೆ ಚಾಕು ತೋರಿಸಿ ಐವರು ಪರಾರಿ; ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲು ಶಿವಮೊಗ್ಗ: ಅನುಮಾನಾಸ್ಪದವಾಗಿ ಲಾಡ್ಜ್‌ನಲ್ಲಿ ತಂಗಿದ್ದ…