ಬಸ್ ಹತ್ತುವಾಗ ಮಹಿಳೆಯ ಸರ ಅಪಹರಣ
ಶಿವಮೊಗ್ಗ: ತಮ್ಮ ಮಗಳನ್ನು ಭೇಟಿಯಾಗಲು ಮೈಸೂರಿಗೆ ಪ್ರಯಾಣ ಬೆಳೆಸಿದ್ದ ಶಿವಮೊಗ್ಗದ 63 ವರ್ಷದ ವೃದ್ಧೆ ಯೊಬ್ಬರು ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮಧ್ಯರಾತ್ರಿ ಮಾಂಗಲ್ಯ ಸರ ಕಳೆದುಕೊಂಡಿರುವ ಘಟನೆ ನಡೆದಿದೆ.
ಪ್ರಯಾಣಕ್ಕಾಗಿ ಬಸ್ ಹತ್ತುತ್ತಿದ್ದಾಗ ನಿಲ್ದಾಣದಲ್ಲಿ ಭಾರೀ ಜನದಟ್ಟಣೆ ಇತ್ತು. ಜನದಟ್ಟಣೆಯ ಮಧ್ಯೆ ಬಸ್‌ನಲ್ಲಿ ಸೀಟು ಹಿಡಿಯಲು ಮುಂದಾಗಿದ್ದ ವೃದ್ಧೆಯ ಕತ್ತಿನಲ್ಲಿದ್ದ ಸುಮಾರು 40 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಕಳ್ಳರು ಕದ್ದಿದ್ದಾರೆ.
ಬಸ್‌ನಲ್ಲಿ ಸೀಟು ಹಿಡಿದ ಬಳಿಕ ರಾತ್ರಿ ಪ್ರಯಾಣಕ್ಕೆ ಚಳಿ ಆಗುತ್ತದೆ ಎಂದು ಶಾಲು ಹೊದೆಯಲು ನೋಡಿದಾಗ ಸರ ಕಳುವಾಗಿರುವುದು ಗೀತಮ್ಮ ಅವರ ಗಮನಕ್ಕೆ ಬಂದಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.



