ಕೇಬಲ್ ಕಳವು ಮಾಡುತಿದ್ದ ಇಬ್ಬರು ಆರೋಪಿಗಳು ರಿಪ್ಪನ್‌ಪೇಟೆ ಪೊಲೀಸರ ಬಲೆಗೆ
ರಿಪ್ಪನ್‌ಪೇಟೆ : ಇಲ್ಲಿನ ಅರಸಾಳು ಗ್ರಾಮದಲ್ಲಿ ನಡೆದ ಕೇಬಲ್ ಕಳವು ಪ್ರಕರಣದಲ್ಲಿ ಪರಾರಿಯಾಗುತ್ತಿದ್ದ ಇಬ್ಬರು ಆರೋಪಿಗಳನ್ನು ರಿಪ್ಪನ್‌ಪೇಟೆ ಪಿಎಸೈ ರಾಜುರೆಡ್ಡಿ ನೇತ್ರತ್ವದ ಪೊಲೀಸರು ಪತ್ತೆಹಚ್ಚಿ ಬಂಧಿಸಲು ಯಶಸ್ವಿಯಾಗಿದ್ದಾರೆ.
ಅರಸಾಳು ಗ್ರಾಮದ ಮಂಜ ಮತ್ತು ನಾಗ ಬಂಧಿತ ಆರೋಪಿಗಳಾಗಿದ್ದಾರೆ.
ಅರಸಾಳು ಗ್ರಾಮದಲ್ಲಿ ಹೊಳೆ ಬದಿಯಲ್ಲಿ ಮೋಟಾರ್ ಗಳಿಗೆ ಅಳವಡಿಸುತಿದ್ದ ಕೇಬಲ್ ಗಳನ್ನು ಕದ್ದು ಮಾರುತಿದ್ದ ಆರೋಪಿಗಳು ಅರಸಾಳು ಗ್ರಾಮದಲ್ಲಿ ಸುತ್ತಾಡುತ್ತಿದ್ದ ಕುರಿತು ಬಂದ ಗುಪ್ತ ಮಾಹಿತಿಯ ಆಧಾರದ ಮೇಲೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಕಳವು ಸಂಬಂಧ ಪಟ್ಟ ಕೇಬಲ್ ಸಾಮಗ್ರಿಗಳನ್ನು ಕೂಡ ಪೊಲೀಸರು ಜಪ್ತಿ ಮಾಡಿದ್ದಾರೆ.ಆರೋಪಿಗಳನ್ನು ನ್ಯಾಯಲಯದ ಮುಂದೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಉಮೇಶ್ , ಸಂತೋಷ್ ಕೊರವರ , ರಾಮಚಂದ್ರ , ಪರಮೇಶ್ವರಪ್ಪ ಹಾಗೂ ಅವಿನಾಶ್ ಇದ್ದರು.




