Headlines

ಶಿವಮೊಗ್ಗದ ಮೂವರು ಮಹಿಳೆಯರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಶಿವಮೊಗ್ಗದ ಮೂವರು ಮಹಿಳೆಯರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಬೆಂಗಳೂರು: ಸಾಹಿತಿಗಳಾದ ಶೂದ್ರ ಶ್ರೀನಿವಾಸ್, ಪ್ರತಿಭಾ ನಂದಕುಮಾರ್‌ ಸಹಿತ ಐವರನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ 2024 ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಚಾಮರಾಜನಗರದ ಡಾ.ಎಂ.ಬಸವಣ್ಣ, ಬೆಂಗಳೂರಿನ ಶೂದ್ರ ಶ್ರೀನಿವಾಸ್‌, ಪ್ರತಿಭಾ ನಂದಕುಮಾರ್, ಕಲಬುರಗಿಯ ಡಾ.ಡಿ.ಬಿ.ನಾಯಕ್, ಮುಂಬೈಯ ಡಾ.ವಿಶ್ವನಾಥ ಕಾರ್ನಾಡ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ತಿಳಿಸಿದರು.

ಸಾಹಿತ್ಯಶ್ರೀ ಪ್ರಶಸ್ತಿಗೆ ಚಿಕ್ಕಮಗಳೂರಿನ ಡಾ.ಬಿ.ಎಂಪುಟ್ಟಯ್ಯ, ಬೆಂಗಳೂರು ಡಾ.ಕೆ.ವೈ. ನಾರಾಯಣಸ್ವಾಮಿ, ಕೋಲಾರದ ಪದ್ಮಾಲಯ ನಾಗರಾಜ್, ತುಮಕೂರಿನ ಬಿ.ಯು.ಸುಮಾ, ಶಿವಮೊಗ್ಗದ ಮಮತಾ ಸಾಗರ,  ಶಿವಮೊಗ್ಗದಲ್ಲಿ ಸರಕಾರಿ ಕಾಲೇಜಿನ  ಪ್ರಾಚಾರ್ಯೆಯಾಗಿರುವ  ಸಬಿತಾ ಬನ್ನಾಡಿ, ಬಳ್ಳಾರಿಯ ಅಬ್ದುಲ್ ಹೈ ತೋರಣಗಲ್, ಅಕ್ಕಲಕೋಟೆಯ ಡಾ.ಗುರುಲಿಂಗಪ್ಪ ದಬಾಲೆ, ತೀರ್ಥಹಳ್ಳಿಯವರಾದ ಹಾಲಿ ಉತ್ತರಕನ್ನಡ ದ ಹೊನ್ನಾವರದ ಕವಲಕ್ಕಿಯಲ್ಲಿ ವೈದ್ಯೆಯಾಗಿರುವ  ಡಾ!!.ಎಚ್.ಎಸ್. ಅನುಪಮಾ, ರಾಯಚೂರಿನ ಡಾ.ಅಮರೇಶ ಯತಗಲ್ ಅವರು ಆಯ್ಕೆಯಾಗಿದ್ದಾರೆ.

ಪ್ರಜಾವಾಣಿ ಪತ್ರಿಕೆಯ ಸುದ್ದಿ ಸಂಪಾದಕ ಸುದೇಶ ದೊಡ್ಡಪಾಳ್ಯ ಅವರ ‘ಈಶಾನ್ಯ ದಿಕ್ಕಿನಿಂದ’ ಕೃತಿಗೆ ವೈಚಾರಿಕ ಅಂಕಣ ಬರಹದ ಬಿ.ವಿ.ವೀರಭದ್ರಪ್ಪ ದತ್ತಿ ಬಹುಮಾನ ಲಭಿಸಿದೆ.

Exit mobile version