ರಿಪ್ಪನ್‌ಪೇಟೆ – 33 ವರ್ಷದ ಮಹಿಳೆ ಕ್ಯಾನ್ಸರ್‌ಗೆ ಬಲಿ | “ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಸೋತ ಗೀತಾ”
ರಿಪ್ಪನ್‌ಪೇಟೆ – ಮಹಾಮಾರಿ ಕ್ಯಾನ್ಸರ್ ಗೆ ಇನ್ನೂ ಬಾಳಿ ಬದುಕಬೇಕಾಗಿದ್ದ ಯುವತಿಯೊಬ್ಬಳು ಮೃತಪಟ್ಟಿರುವ ಘಟನೆ ಪಟ್ಟಣದ ವ್ಯಾಪ್ತಿಯಲ್ಲಿ ನಡೆದಿದೆ.
ಗವಟೂರು ಗ್ರಾಮದ 33 ವರ್ಷದ ಗೀತಾ ಎಂಬ ಯುವತಿ ಮಹಾಮಾರಿ ಕ್ಯಾನ್ಸರ್‌ನಿಂದ ಚಿಕಿತ್ಸೆ ಫಲಿಸದೇ ಇಂದು ನಿಧನರಾಗಿದ್ದಾರೆ. ಪತಿ ಅನಿಲ್ ಕುಮಾರ್ ಅವರನ್ನು ಅಗಲಿದ ಗೀತಾ ಕಳೆದ ಕೆಲವು ತಿಂಗಳಿನಿಂದ ದುಸ್ತರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು.
ಮೂಲತಃ ಆರೋಗ್ಯವಂತಳಾಗಿದ್ದ ಗೀತಾ ಅವರಿಗೆ ತಿಂಗಳುಗಳ ಹಿಂದೆ ರಕ್ತ ಕ್ಯಾನ್ಸರ್ ದೃಢಪಟ್ಟಿತ್ತು. ಆರಂಭದಲ್ಲಿ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದರೂ, ವೈದ್ಯರ ಸಲಹೆಯಂತೆ ಅವರನ್ನು ನಂತರ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ನಿರಂತರ ಚಿಕಿತ್ಸೆಗೆ ಒಳಗಾಗುತ್ತಿದ್ದರೂ ಸ್ಥಿತಿ ಹೈರಾಣಗೊಳಿಸಿ ಕೊನೆಗೂ ಚಿಕಿತ್ಸೆ ಫಲಿಸದೇ ಅವರು ಅಕಾಲಿಕವಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಈ ದುಃಖದ ಸುದ್ದಿ ಗ್ರಾಮದಲ್ಲಿ ಆಘಾತ ಮೂಡಿಸಿದೆ. ನೆರೆಹೊರೆ, ಬಂಧುಬಳಗ, ಪರಿಚಿತರು ಶೋಕದಲ್ಲಿ ಮುಳುಗಿದ್ದು, ಕುಟುಂಬದವರಿಗೆ ಗ್ರಾಮಸ್ಥರು ಸಾಂತ್ವನ ಹೇಳುತ್ತಿದ್ದಾರೆ.
ಪಿಯುಸಿ ಓದುತ್ತಿರುವ ಮಗ ಹಾಗೂ ಒಂಬತ್ತನೇ ತರಗತಿ ವ್ಯಾಸಾಂಗ ಮಾಡುತ್ತಿರುವ ಇಬ್ಬರು ಗಂಡು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ
ಮಧುರ ಸ್ವಭಾವ, ಎಲ್ಲರೊಂದಿಗೆ ಬೆರೆಯುವ ನಿಸ್ವಾರ್ಥ ಮನಸ್ಸು ಹೊಂದಿದ್ದ ಗೀತಾ ತಮ್ಮ ಸರಳ ಬದುಕಿನಿಂದಲೇ ಗ್ರಾಮದಲ್ಲಿರುವ ಅನೇಕರ ಮೆಚ್ಚುಗೆ ಪಡೆದವರಾಗಿದ್ದರು. ಯುವ ವಯಸ್ಸಿನಲ್ಲೇ ಪ್ರಾಣ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾದ ವಿಷಯ ಸ್ಥಳೀಯರಲ್ಲಿ ಅಘಾತ ಮೂಡಿಸಿದೆ.



