Headlines

ಕಾಲು ಜಾರಿ ಬಿದ್ದು ಪೊಲೀಸ್ ದಫೇದಾರ್ ದುರ್ಮರಣ

ಕಾಲು ಜಾರಿ ಬಿದ್ದು ಪೊಲೀಸ್ ದಫೇದಾರ್ ದುರ್ಮರಣ

ಭದ್ರಾವತಿ – ನಗರದ ಹೊಸಮನೆ ಪ್ರದೇಶದ ನಿವಾಸಿ ಹಾಗೂ ಶಿವಮೊಗ್ಗದ ಕೆಎಸ್‌ಆರ್‌ಪಿ ಬೆಟಾಲಿಯನ್‌ನ ದಫೇದಾರ್ ಚಂದ್ರಶೇಖರ್ (44) ಅವರು ದುರ್ಘಟನೆಯಲ್ಲಿ ಮೃತಪಟ್ಟಿದ್ದಾರೆ.

ಶನಿವಾರ ರಾತ್ರಿ ಅವರು ಬಾರಂದೂರು ಬೈಪಾಸ್ ಉಜ್ಜಿನೀಪುರದ ನಗರಸಭೆಯ ಪಂಪ್‌ಹೌಸ್ ಬಳಿ ಇರುವ ಭದ್ರಾ ನದಿ ಸೇತುವೆಯ ಕೆಳಭಾಗಕ್ಕೆ ಬಹಿರ್ದೆಸೆಗೆ ತೆರಳಿದಾಗ, ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಭಾನುವಾರ ಬೆಳಗ್ಗೆ ಮೃತದೇಹ ಪತ್ತೆಯಾಗಿದೆ. ಮೃತರಿಗೆ ಪತ್ನಿ, ಒಬ್ಬ ಗಂಡು ಮತ್ತು ಮೂವರು ಹೆಣ್ಣು ಮಕ್ಕಳು ಇದ್ದಾರೆ. ಈ ಸಂಬಂಧ ಕಾಗದನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version