
ಬಿಲಗೋಡಿ–ತಾರನಬೈಲು ಮಾರ್ಗದಲ್ಲಿ ರಸ್ತೆ ಕುಸಿತ – ಮಾಜಿ ಸಚಿವ ಹರತಾಳು ಹಾಲಪ್ಪ ಭೇಟಿ , ಪರಿಶೀಲನೆ
ಬಿಲಗೋಡಿ–ತಾರನಬೈಲು ಮಾರ್ಗದಲ್ಲಿ ರಸ್ತೆ ಕುಸಿತ – ಹರತಾಳು ಹಾಲಪ್ಪ ಪರಿಶೀಲನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪುರಪ್ಪೆಮನೆ ಮಾರ್ಗವಾಗಿ ಸಾಗರ ತಾಲ್ಲೂಕಿನ ಬಿಲಗೋಡಿ, ತಾರನಬೈಲು ಸಂಪರ್ಕಿಸುವ ಪ್ರಮುಖ ರಸ್ತೆ ಮಳೆನೀರು ಹಾಗೂ ಮಣ್ಣುಸ್ರಾವದಿಂದಾಗಿ ಕುಸಿದು ಬಿದ್ದಿದೆ. ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದ್ದು, ಜನರು ಪರ್ಯಾಯ ದಾರಿಗಳನ್ನು ಬಳಸುವಂತಾಗಿದೆ. ಈ ಸಂದರ್ಭ ಮಾಜಿ ಸಚಿವರು ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಹರತಾಳು ಹಾಲಪ್ಪ ಅವರು ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳದಿಂದಲೇ ಪೋನ್ ಮೂಲಕ ಅಧಿಕಾರಿಗಳೊಂದಿಗೆ ಮಾತುಕತೆ…


