Headlines

ಬಿಲಗೋಡಿ–ತಾರನಬೈಲು ಮಾರ್ಗದಲ್ಲಿ ರಸ್ತೆ ಕುಸಿತ – ಮಾಜಿ ಸಚಿವ ಹರತಾಳು ಹಾಲಪ್ಪ ಭೇಟಿ , ಪರಿಶೀಲನೆ

ಬಿಲಗೋಡಿ–ತಾರನಬೈಲು ಮಾರ್ಗದಲ್ಲಿ ರಸ್ತೆ ಕುಸಿತ – ಹರತಾಳು ಹಾಲಪ್ಪ ಪರಿಶೀಲನೆ

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪುರಪ್ಪೆಮನೆ ಮಾರ್ಗವಾಗಿ ಸಾಗರ ತಾಲ್ಲೂಕಿನ ಬಿಲಗೋಡಿ, ತಾರನಬೈಲು ಸಂಪರ್ಕಿಸುವ ಪ್ರಮುಖ ರಸ್ತೆ ಮಳೆನೀರು ಹಾಗೂ ಮಣ್ಣುಸ್ರಾವದಿಂದಾಗಿ ಕುಸಿದು ಬಿದ್ದಿದೆ. ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದ್ದು, ಜನರು ಪರ್ಯಾಯ ದಾರಿಗಳನ್ನು ಬಳಸುವಂತಾಗಿದೆ.

ಈ ಸಂದರ್ಭ ಮಾಜಿ ಸಚಿವರು ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಹರತಾಳು ಹಾಲಪ್ಪ ಅವರು ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸ್ಥಳದಿಂದಲೇ ಪೋನ್ ಮೂಲಕ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಹರತಾಳು ಹಾಲಪ್ಪ ನಂತರ, “ಗ್ರಾಮಸ್ಥರ ಸಂಚಾರ ತೊಂದರೆ ನಿವಾರಣೆಗೆ ಶೀಘ್ರದಲ್ಲೇ ರಸ್ತೆ ಪುನರ್‌ನಿರ್ಮಾಣ ಕಾರ್ಯ ಆರಂಭವಾಗಲಿದೆ” ಎಂದು ಭರವಸೆ ನೀಡಿದರು.

ಈ ಸಂಧರ್ಭದಲ್ಲಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಗಣಪತಿ, ಹೊಸನಗರ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷ ರಾಘವೇಂದ್ರ ಕೆ, ಗ್ರಾಮ ಪಂಚಾಯತ್ ಸದಸ್ಯರಾದ ಪೂರ್ಣ, ರವಿ ಸುಮಾ, ಮಹಾಲಕ್ಷ್ಮಿ, ಬೂತ್ ಅಧ್ಯಕ್ಷ ಶ್ರೀನಿಧಿ ರಮೇಶ್, ಪಕ್ಷದ ಮುಖ್ಯಸ್ಥ ಗುರು ಪ್ರಸಾದ್, ಎ.ಆರ್. ಮಂಜುನಾಥ್, ಅರುಣ್ ಕುಮಾರ್, ಬಿ.ಆರ್. ಕೃಷ್ಣಮೂರ್ತಿ, ಎ.ಎನ್. ಪ್ರಕಾಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Exit mobile version