Headlines

ಚಿನ್ನಮನೆ ಬಳಿ ಭಾರೀ ಅವಘಡ – ಚಲಿಸುತಿದ್ದ ಕಾರಿನ ಮೇಲೆ ಬಿದ್ದ ಮರ – ನಜ್ಜುಗುಜ್ಜಾದ ಕಾರು

ಚಿನ್ನಮನೆ ಗ್ರಾಮದ ಬಳಿ ಭಾರೀ ಅವಘಡ – ಚಲಿಸುತಿದ್ದ ಕಾರಿನ ಮೇಲೆ ಬಿದ್ದ ಮರ – ನಜ್ಜುಗುಜ್ಜಾದ ಕಾರು

ಶಿವಮೊಗ್ಗ ಜಿಲ್ಲೆಯ ಆಯನೂರು ಸಮೀಪದ ಚಿನ್ನಮನೆ ಗ್ರಾಮದ ಬಳಿ ಭಾರೀ ಅವಘಡ ಸಂಭವಿಸಿದೆ. ಚಲಿಸುತಿದ್ದ ಕಾರಿನ ಮೇಲೆ ಏಕಾಏಕಿ ಮರವೊಂದು ಬಿದ್ದು ಕಾರು ಸಂಪೂರ್ಣ ನಜ್ಜುಗುಜ್ಜಾಗಿರುವ ಘಟನೆ ಮಧ್ಯಾಹ್ನ ನಡೆದಿದೆ.

ಮಾರುತಿ ಸ್ವಿಫ್ಟ್ ಕಾರಿನ ಚಾಲಕರ ಕಾರು ಚಲಾಯಿಸುತ್ತಿರುವಾಗ ತೀವ್ರ ಗಾಳಿಯಿಂದ ಕಿತ್ತು ಬಂದ ದೊಡ್ಡ ಮರದ ಕೊಂಬೆ ಕಾರಿನ ಮೇಲೆ ಬಿದ್ದಿದೆ. ಘಟನೆಯಿಂದ ಕಾರಿನ ಮುಂಭಾಗ ಹಾಗೂ ಮೇಲ್ಭಾಗ ಸಂಪೂರ್ಣ ಹಾನಿಗೊಳಗಾಗಿದೆ. ಆದರೆ ಅದೃಷ್ಟವಶಾತ್, ಕಾರಿನಲ್ಲಿ ಪ್ರಯಾಣಿಸುತ್ತಿದ್ದವರಿಗೆ ಕೇವಲ ಸಣ್ಣಪುಟ್ಟ ಪೆಟ್ಟಾಗಿದ್ದು ದೊಡ್ಡ ಅನಾಹುತ ತಪ್ಪಿದೆ ಎಂದು ಮೂಲಗಳು ತಿಳಿಸಿವೆ.

ಸ್ಥಳೀಯರು ತಕ್ಷಣ ಓಡಿಬಂದು ಗಾಯಾಳುಗಳನ್ನು ಕಾರಿನಿಂದ ಹೊರತೆಗೆಯುವಲ್ಲಿ ಸಹಕರಿಸಿದರು. ಅಪಘಾತದ ತೀವ್ರತೆಯಿಂದ ಕಾರಿನ ಗಾಜು ಚೂರುಚೂರಾಗಿದ್ದು, ದೇಹಕ್ಕೆ ಸಣ್ಣ ಗಾಯಗಳಾಗಿವೆ. ಚಿಕಿತ್ಸೆಗಾಗಿ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ.

ರಸ್ತೆ ಮಧ್ಯೆ ಬಿದ್ದ ಮರವನ್ನು ತೆರವುಗೊಳಿಸಲು ಗ್ರಾಮಸ್ಥರ ಸಹಾಯದಿಂದ ಕ್ರಮ ಕೈಗೊಳ್ಳಲಾಗಿದೆ. ಈ ಅವಘಡದಿಂದ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.

Exit mobile version