ಹೊಸನಗರ ಬ್ಲಾಕ್ ಕಾಂಗ್ರೆಸ್ ನೂತನ ಪಟ್ಟಿ ಬಿಡುಗಡೆ
ಹೊಸನಗರ ; ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಶಿಫಾರಸ್ಸಿನಂತೆ ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿಯು, ಹೊಸನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ವಿವಿಧ ಸ್ಥಾನಗಳಿಗೆ ಪದಾಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ನೂತನ ಅಧ್ಯಕ್ಷರಾಗಿ ಕೋಡೂರು ಬಿ.ಜಿ. ಚಂದ್ರಮೌಳಿ, ಉಪಾಧ್ಯಕ್ಷರಾಗಿ ನಾಗೋಡಿ ವಿಶ್ವನಾಥ್, ಕೆಂಚನಾಲ ಉಬೇದ್ದುಲ್ಲಾ ಷರೀಫ್, ಜಯನಗರ ಚನ್ನಬಸವ, ಬಾಳೂರು ಲೀಲಾವತಿ, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಹೊಸನಗರ ಪಟ್ಟಣದ ಎಂ.ಪಿ.ಸುರೇಶ್, ಸದಾಶಿವ ಶ್ರೇಷ್ಟಿ, ರಿಪ್ಪನ್‌ಪೇಟೆಯ ಮಧುಸೂಧನ್ ಹಾಗು ಖಜಾಂಚಿಯಾಗಿ ದುಮ್ಮ ವಿನಯ್ ಕುಮಾರ್ ನೇಮಕಗೊಂಡಿದ್ದಾರೆ.
ಇನ್ನೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬಾಳೂರು ಉಮೇಶ್, ಮಾಕನಕಟ್ಟೆ ಗಣಪತಿ, ಕಾರಕ್ಕಿ ಸುಬ್ಬಣ್ಣ, ಜೇನಿ ಮಾಧವ ಶೆಟ್ಟಿ, ಹುಂಚ ರೋಡ್ ಪ್ರಶಾಂತ್ ಕುಮಾರ್ ಕಚ್ಚಿಗೆಬೈಲ್ ನಾಸೀರ್, ರಿಪ್ಪನ್‌ಪೇಟೆಯ ನೇಮಪ್ಪ ಬಂಡಿ, ಧನಲಕ್ಷ್ಮಿ, ಕಳೂರು ಕೃಷ್ಣಮೂರ್ತಿ ಶೆಟ್ಟಿ, ಅರಸಾಳು ನಾಗರಾಜ್, ಬಟ್ಟೆಮಲ್ಲಪ್ಪ ಇಕ್ಬಾಲ್, ಪುರಪ್ಪೆಮನೆ ಮೃತ್ಯುಂಜಯ, ಮಾರುತಿಪುರ ದೀಪಿಕಾ ಕೃಷ್ಣ, ಪ್ರಕಾಶ್ ಪಾಲೇಕರ್, ಕೆಂಚನಾಲ ಕೃಷ್ಣೋಜಿ, ಹರತಾಳು ಕುಮಾರ್ ಮಂಡಿ, ಪುರಪ್ಪೆಮನೆ ಸುಜಾತ ದಿನೇಶ್, ಜಯನಗರ ಗುರು ಅವರನ್ನು ನೇಮಕ ಮಾಡಿ ಆದೇಶ ನೀಡಿದೆ.