ವಿದ್ಯುತ್ ಸ್ಪರ್ಶ – ವಿದ್ಯಾರ್ಥಿ ಸಾವು
ಶಿವಮೊಗ್ಗ: ಹಾಡೋನಹಳ್ಳಿಯಲ್ಲಿ ವಿದ್ಯುತ್ ಸ್ಪರ್ಶವಾಗಿ ಬಾಲಕನೊಬ್ಬ ಜೀವ ಕಳೆದುಕೊಂಡಿರುವ ಘಟನೆ ವರದಿಯಾಗಿದೆ.
ಹಾಡೋನಹಳ್ಳಿಯ ಅಂಬಾಭವಾನಿ ದೇವಸ್ಥಾನಕ್ಕೆ ನವರಾತ್ರಿಯ ಹಿನ್ನೆಲೆಯಲ್ಲಿ ವಿದ್ಯುತ್ ದೀಪದ ಅಲಂಕಾರ ಮಾಡಲಾಗಿದೆ. ದೇವಸ್ಥಾನಕ್ಕೆ ಹಾಕಿದ ಸೀರಿಯಲ್ ಸೆಟ್ ಅಲಂಕಾರವನ್ನ ದೇವಸ್ಥಾನದ ಗೇಟಿಗೆ ಸಹ ಹಾಕಲಾಗಿದೆ. ಈ ವೇಳೆ ಸೀರಿಯಲ್ ಸೆಟ್ ಸ್ಕಿನ್ ಆಗಿದ್ದರಿಂದ ಗೇಟ್ ಗೂ ವಿದ್ಯುತ್ ಚ್ಛಕ್ತಿ ಹರಿದಿದೆ.
ಗ್ರಾಮದ ಬಾಲಕ ಸಮರ್ಥ (೧೪) ಗೇಟನ್ನು ಮುಟ್ಟುತ್ತಿದ್ದಂತೆ ಶಾಕ್ ಹೊಡೆದು ಅಸ್ವಸ್ಥನಾಗಿದ್ದಾನೆ. ಆಸ್ಪತ್ರೆಗೆ ತರುವಾಗ ಬಾಲಕ ಸಾವನ್ನಪ್ಪಿದ್ದಾನೆ.
ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಮರ್ಥ್ ಶಿವಮೊಗ್ಗದ ಆಕ್ಸಫರ್ಡ್ ಶಾಲೆಯಲ್ಲಿ ೯ ನೇ ತರಗತಿಯ ವಿದ್ಯಾರ್ಥಿಯಾಗಿದ್ದಾನೆ. ಈ ಘಟನೆ ಶುಕ್ರವಾರ ಸಂಜೆ ನಡೆದಿದೆ



