ಫುಟ್ ಪಾತ್ ಗೆ ನುಗ್ಗಿದ ಬೈಕ್: ಮಹಿಳೆ, ಸಹ ಸವಾರ ಸಾವು
ಶಿವಮೊಗ್ಗ:ಸಾಗರ ರಸ್ತೆಯ ಮಲ್ನಾಡು ಗೇಟ್ ವೇ ಬಳಿ ಪುಟ್ಬಾತ್ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದವರ ಮೇಲೆ ಬೈಕ್ ಹರಿದು ಬೈಕ್ ಸವಾರ ಹಾಗೂ ಟೆಂಟ್ ನಲ್ಲಿ ವಾಸವಾಗಿದ್ದ ಮಹಿಳೆ ಸಾವನ್ನಪ್ಪಿದ ಘಟನೆ ಇಂದು ನಸುಕಿನಲ್ಲಿ ಸಂಭವಿಸಿದೆ.
ಫುಟ್ ಪಾತ್ ಮೇಲೆ ಪ್ಲಾಸ್ಟಿಕ್ ವಸ್ತುಗಳನ್ನು ವ್ಯಾಪಾರ ಮಾಡಿಕೊಂಡಿದ್ದ ದುರ್ಗಾ ಪ್ರಸಾದ್ ಎಂಬುವರು ಟೆಂಟ್ ಹಾಕಿಕೊಂಡು ನಾಲ್ಕು ವರ್ಷದಿಂದ ಕುಟುಂಬದ ಜೊಯೆ ಅಲ್ಲೇ ವಾಸವಾಗಿದ್ದರು.
ಆಯನೂರು ಗೇಟಿ್ ಕಡೆಯಿಂದ ಕೆ 14 ಈ ವೈ 1306 ಕ್ರಮ ಸಂಖ್ಯೆಯ ಮೋಟಾರ್ ಬೈಕ್ ನಲ್ಲಿ ಬಂದ ಮೂವರು ಫುಟ್ಪಾತ್ ನಲ್ಲಿದ್ದ ಟೆಂಟ್ ಗೆ ಡಿಕ್ಕಿ ಹೊಡೆದಿದ್ದಾರೆ . ಟೆಂಟ್ ನಲ್ಲಿ ದುರ್ಗಾ ಪ್ರಸಾದ್ ಅವರ ತಂದೆ ನಾಗಯ್ಯ, ತಾಯಿ ಕಾಮೇಶ್ವರಿ ಹಾಗೂ ತಂಗಿ ಜ್ಯೋತಿ ಎ ಇದ್ದರು . ಕಾಮೇಶ್ವರಿ ಸ್ಥಳದಲ್ಲೇ ಸಾವಿಗೀಡಾದರು.
ದುರ್ಗಾ ಪ್ರಸಾದ ಮೂತ್ರ ವಿಸರ್ಜನೆಗೆಂದು ಬೆಳಗಿನ ಜಾವ ಐದು ಇಪ್ಪತ್ತಕ್ಕೆ ಟೆಂಟ್ ನಿಂದ ಹೊರ ಬಂದಾಗ ಈ ಘಟನೆ ನಡೆದಿದ್ದು ಅವರು ಪಾರಾಗಿದ್ದಾರೆ.
ಬೈಕ್ ಅನ್ನು ಸುದರ್ಶನ್ ಎನ್ನುವರು ಚಲಾಯಿಸುತ್ತಿದ್ದು ಆತನ ಹಿಂದೆ ಆಕಾಶ ಎಂಬವನು ಕುಳಿತಿದ್ದನು ಆಕಾಶನಿಗೆ ತೀವ್ರವಾಗಿ ಗಾಯಗಳಾಗಿದ್ದು ಆತನನ್ನು ಮೆಗನ್ ಆಸ್ಪತ್ರೆಗೆ ಆಂಬುಲೆನ್ಸ್ ನಲ್ಲಿ ಸಾಗಿಸುವಾಗ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ತಲೆಗೆ ಹೊಡೆತ ಬಿದ್ದಿದ್ದ ಕಾಮೇಶ್ವರಿ ರವರು ಸಾವನ್ನಪ್ಪಿರುವುದಾಗಿ ಮೂಲಗಳು ದೃಢಪಡಿಸಿವೆ. ಪ್ರಕರಣ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಸಾಗರ ತಾಲೂಕಿನ ಮಡಸೂರಿನಲ್ಲಿ ವ್ಯಕ್ತಿ ಹತ್ಯೆ: ಅಡಿಕೆ ತೋಟಕ್ಕೆ ಔಷಧಿ ಹೊಡೆಯಲು ತೆರಳಿದ್ದ ವೇಳೆ ಕೃತ್ಯ A man identified…
ಚಾನೆಲ್‌ನಲ್ಲಿ ಈಜಲು ತೆರಳಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ನೀರುಪಾಲು SSLC student Krishna drowned while swimming in Tunga Channel…
ಶಿವಮೊಗ್ಗದಲ್ಲಿ ಶಾಂತಿಯುತವಾಗಿ ನಡೆದ ಈದ್ ಮಿಲಾದ್ ಮೆರವಣಿಗೆ Shivamogga witnessed a grand and peaceful Eid Milad procession…
ಹುಂಚ ಶವಾಗಾರಕ್ಕೆ ಕೊನೆಗೂ ‘ಮುಹೂರ್ತ’: DHO ಭೇಟಿ, ಬಾಕಿ ಕಾಮಗಾರಿ ಆರಂಭ Postman News report brings action on…
ಸಿದ್ದರಮಟ್ಟಿ ಬಳಿ ಗಾಂಜಾ ಮಾರಾಟ: ಇಬ್ಬರು ಆರೋಪಿಗಳ ಬಂಧನ, ₹31,350 ಮೌಲ್ಯದ ಗಾಂಜಾ ಜಪ್ತಿ Two accused persons were…
ಬೀದಿ ನಾಯಿಗಳ ದಾಳಿ: ಆರು ಕುರಿಗಳು ಸಾವು Six sheep belonging to a resident of Sagar were…