ಶಿವಮೊಗ್ಗದ ಸರ್ಕ್ಯೂಟ್ ಹೌಸ್ ಬಳಿ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನ – ಪ್ರಕರಣ ದಾಖಲು
ಶಿವಮೊಗ್ಗ, ಸೆ.9: ನಗರದ ಹೃದಯ ಭಾಗವಾದ ಶರಾವತಿ ನಗರ ಎ ಬ್ಲಾಕ್ ಹಾಗೂ ಸರ್ಕ್ಯೂಟ್ ಹೌಸ್ ಬಳಿ ಭಾನುವಾರದ ಬೆಳಗಿನ ಜಾವ ಯುವತಿಯೊಬ್ಬಳ ಮೇಲೆ ನಡೆದ ಅತ್ಯಾಚಾರ ಯತ್ನ ನಡೆದ ಪ್ರಕರಣ ನಡೆದಿದೆ
ಮೂಲಗಳ ಪ್ರಕಾರ, ತಾಯಿ ಮತ್ತು ಸಹೋದರನನ್ನು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಸ್ಸಿಗೆ ಹತ್ತಿಸಿ ಸ್ವಂತ ದ್ವಿಚಕ್ರ ವಾಹನದಲ್ಲಿ ಮನೆಗೆ ಮರಳುತ್ತಿದ್ದ ಯುವತಿಯನ್ನು, ಇಬ್ಬರು ಸಂಶಯಾಸ್ಪದ ಯುವಕರು ಹಿಂಬಾಲಿಸಿದ್ದಾರೆ. ಅವರಲ್ಲಿ ಒಬ್ಬನು ಸರ್ಕ್ಯೂಟ್ ಹೌಸ್ ಬಳಿ ಬೈಕ್ ಅಡ್ಡಗಟ್ಟಿ ಯುವತಿಯನ್ನು ಕೆಳಗೆ ಬೀಳಿಸಿದ ಎನ್ನಲಾಗಿದೆ.
ಯುವಕನು ಯುವತಿಯ ವೇಲ್ ಹಾಗೂ ಟೀ ಶರ್ಟ್ ಹಿಡಿದು ಎಳೆದಾಡಿದ ಪರಿಣಾಮ ಆಕೆಯ ಉಡುಪು ಹರಿದುಹೋಗಿದೆ. ಬೆದರಿಕೆಗೆ ಒಳಗಾದರೂ ಧೈರ್ಯದಿಂದ ಪ್ರತಿರೋಧಿಸಿದ ಯುವತಿ, ಅಲ್ಲಿ ಸಾಗುತ್ತಿದ್ದ ವಾಹನಗಳ ನೆರವಿನಿಂದ ತಪ್ಪಿಸಿಕೊಂಡಿದ್ದಾರೆ. ಆರೋಪಿ ತಕ್ಷಣ ಪರಾರಿಯಾಗಿದ್ದಾನೆ.
ಘಟನೆಯ ಬಳಿಕ ಆತಂಕಗೊಂಡ ಯುವತಿ ಮನೆಗೆ ತೆರಳಿ ಸಹೋದರನಿಗೆ ವಿಷಯ ತಿಳಿಸಿದ್ದಾರೆ. ನಂತರ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಪತ್ತೆಹಚ್ಚಲು ತೀವ್ರ ತನಿಖೆ ಆರಂಭಿಸಿದ್ದಾರೆ.



