Headlines

ಪಾನಿಪೂರಿ ಕಡಿಮೆ ಕೊಟ್ಟರೆಂದು ರಸ್ತೆ ಮಧ್ಯೆ ಅಳುತ್ತಾ ಕೂತ ಮಹಿಳೆ, ಪೊಲೀಸರಿಂದ ಸಂಧಾನ

ಪಾನಿಪೂರಿ ಕಡಿಮೆ ಕೊಟ್ಟರೆಂದು ರಸ್ತೆ ಮಧ್ಯೆ ಅಳುತ್ತಾ ಕೂತ ಮಹಿಳೆ, ಪೊಲೀಸರಿಂದ ಸಂಧಾನ

ಪಾನಿಪೂರಿ ಎಂದ ಕೂಡಲೇ ಅದೆಷ್ಟೋ ಜನರ ಬಾಯಲ್ಲಿ ನೀರು ಬರುತ್ತೆ , ಅಂತದರಲ್ಲಿ ಪಾನಿಪೂರಿ ತಿನ್ನಬೇಕೆಂದು ಹೋದ ಮಹಿಳೆಗೆ 20 ರೂಪಾಯಿಗೆ ಆರು ಪಾನಿಪೂರಿ ಕೊಡುವ ಬದಲು ನಾಲ್ಕೇ ಕೊಟ್ಟರೆ ಹೇಗಾಗಬೇಡ .

ಹೌದು ಗುಜರಾತ್ ನ ವಡೋದರಾದಲ್ಲಿ ಅಂತದ್ದೆ ಒಂದು ವಿಚಿತ್ರ ಘಟನೆ ನಡೆದಿದ್ದು ಇಲ್ಲಿ ಮಹಿಳೆಯೊಬ್ಬರು ಪಾನಿಪೂರಿ ಮಾರಾಟಗಾರನ ಬಳಿ ಬಂದು ಪಾನಿಪೂರಿ ಕೇಳಿದ್ದಾರೆ ಅಂಗಡಿಯಾತ ಮಹಿಳೆಗೆ ಆರು ಪಾನಿಪೂರಿ ಕೊಡುವ ಬದಲು ನಾಲ್ಕು ಪಾನಿಪೂರಿ ಕೊಟ್ಟಿದ್ದಾನೆ ಇದರಿಂದ ಬೇಸರಗೊಂಡ ಮಹಿಳೆ ಅಂಗಡಿಯಾತನಿಂದ ಎರಡು ಪಾನಿಪೂರಿ ಕಡಿಮೆ ಕೊಟ್ಟಿದ್ದೀರಿ ಎಂದು ಹೇಳಿದ್ದಾಳೆ ಆದರೆ ಅಂಗಡಿಯಾತ ಮಹಿಳೆಯ ಮಾತಿಗೆ ಬೆಲೆ ಕೊಡಲಿಲ್ಲ ಇದರಿಂದ ಕೋಪಗೊಂಡ ಮಹಿಳೆ ಅಲ್ಲೇ ಇದ್ದ ಮುಖ್ಯ ರಸ್ತೆಯ ಮಧ್ಯೆ ಕುಳಿತು ಪ್ರತಿಭಟನೆಗೆ ಮುಂದಾಗಿದ್ದಾಳೆ , ಮಹಿಳೆಯ ವರ್ತನೆಯಿಂದ ಮಾರ್ಗದಲ್ಲಿ ಸಂಚರಿಸುವ ಕೆಲ ವಾಹನ ಸವಾರರು ಗೊಂದಲಕ್ಕೀಡಾಗಿದ್ದಾರೆ .

ಪೊಲೀಸರಿಂದ ಸಂಧಾನ :

ಇತ್ತ ಮಹಿಳೆ ರಸ್ತೆ ಮಧ್ಯೆ ಕುಳಿತು ವಾಹನ ಸವಾರರಿಗೆ ತೊಂದರೆ ಆಗುತ್ತಿದ್ದುದರಿಂದ ಅಲ್ಲಿದ್ದ ಯಾರೋ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಮಹಿಳೆಯನ್ನು ವಿಚಾರಿಸಿದ್ದಾರೆ ಆಗ ಮಹಿಳೆ ತಾನು ಪಾನಿಪೂರಿ ತಿನ್ನಲು ಬಂದಿದ್ದೆ ಆದರೆ ಅಂಗಡಿಯಾತ ಆರು ಪಾನಿಪೂರಿ ಕೊಡುವ ಬದಲು ನಾಲ್ಕು ಕೊಟ್ಟಿದ್ದಾನೆ ಇನ್ನು ಎರಡು ಪಾನಿಪೂರಿ ಕೊಡಲು ಹೇಳಿದರೆ ಕೊಡದೆ ಮೋಸ ಮಾಡಿದ್ದಾನೆ ಎಂದು ಮಕ್ಕಳಂತೆ ಕಣ್ಣೀರು ಹಾಕಿದ್ದಾಳೆ , ಬಳಿಕ ಮಹಿಳೆಯ ಮನವೊಲಿಸಲು ಪೊಲೀಸರು ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗದೇ ಇದ್ದಾಗ ಕೊನೆಗೆ ಪೊಲೀಸರೇ ಮಹಿಳೆಗೆ ಪಾನಿಪೂರಿ ತೆಗೆಸಿಕೊಟ್ಟು ಸಮಾಧಾನಪಡಿಸಬೇಕಾಯಿತು .

Exit mobile version