Headlines

ದಂಪತಿಗಳು ಮಲಗಿದ್ದಾಗ ರಾತ್ರಿ ಮಂಚದ ಕೆಳಗಿನಿಂದ ಎದ್ದು ಬಂದ ‘ಫ್ರಾಕ್‌ ಧರಿಸಿದ್ದ ಪುರುಷ’

ಗಂಡ ಹೆಂಡತಿ ಮಲಗಿದ್ದಾಗ ರಾತ್ರಿ ಮಂಚದ ಕೆಳಗಿಂದ ಎದ್ದು ಬಂದ ‘ಫ್ರಾಕ್‌ ಧರಿಸಿದ್ದ ಪುರುಷ’

A ‘man in a frock’ emerged from under the bed at night while the husband and wife were sleeping.

ತೀರ್ಥಹಳ್ಳಿಯಲ್ಲಿ ನಡೆದ ವಿಚಿತ್ರ ಘಟನೆ..!

ತೀರ್ಥಹಳ್ಳಿ: ಕೊಠಡಿಯಲ್ಲಿ ಪತಿಯೊಂದಿಗೆ ತಂಗಿದ್ದ ಮಹಿಳೆಗೆ ಮಂಚದ ಕೆಳಗೆ ಮಲಗಿದ್ದ ಪುರುಷನೊಬ್ಬ ನಡುರಾತ್ರಿ ಮೈಕೈ ಮುಟ್ಟಿ ಆತಂಕ ಮೂಡಿಸಿದ್ದಾನೆ. ಘಟನೆ ಸಂಬಂಧ ತೀರ್ಥಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನ ದಂಪತಿ ಈಚೆಗೆ ತೀರ್ಥಹಳ್ಳಿಯಲ್ಲಿ ತಂಗಿದ್ದರು. ಕೊಠಡಿಯಲ್ಲಿ ಮಲಗಿದ್ದಾಗ ರಾತ್ರಿ 12.30ರ ಹೊತ್ತಿಗೆ ಮಂಚದ ಕೆಳಗಿನಿಂದ ವ್ಯಕ್ತಿಯೊಬ್ಬ ಮಹಿಳೆಯ ಮೈಕೈ ಮುಟ್ಟಿದ ಅನುಭವವಾಗಿದೆ. ಮಹಿಳೆ ತನ್ನ ಪತಿಗೆ ವಿಷಯ ತಿಳಿಸಿದ್ದು, ಅವರು ಪರಿಶೀಲಿಸಿದರು. ಆಗ ಮಂಚದ ಅಡಿಯಿಂದ ಎದ್ದು ಬಂದ ವ್ಯಕ್ತಿಯೊಬ್ಬ ಕಿಟಕಿಯಿಂದ ಹೊರಗೆ ಹೋಗಿದ್ದಾನೆ ಎಂದು ಆರೋಪಿಸಿದ್ದಾರೆ.

ಅಪರಿಚಿತ ವ್ಯಕ್ತಿಯು ಮಹಿಳೆಯರು ಧರಿಸುವ ಫ್ರಾಕ್‌ ಧರಿಸಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆ ಸಂಬಂಧ ತೀರ್ಥಹಳ್ಳಿ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Exit mobile version