Headlines

ಜುಲೈ 19 ರಂದು ರಿಪ್ಪನ್ ಪೇಟೆ ರೋಟರಿ ಕ್ಲಬ್ ನ ಪದಗ್ರಹಣ ಸಮಾರಂಭ

ಜುಲೈ 19 ರಂದು ರಿಪ್ಪನ್ ಪೇಟೆ ರೋಟರಿ ಕ್ಲಬ್ ನ ಪದಗ್ರಹಣ ಸಮಾರಂಭ

ಅಧ್ಯಕ್ಷರಾಗಿ A M ಕೃಷ್ಣರಾಜು ಕಾರ್ಯದರ್ಶಿಯಾಗಿ ರವೀಂದ್ರ ಬಲ್ಲಾಳ್ ಪದವಿ ಸ್ವೀಕಾರ

ರಿಪ್ಪನ್‌ಪೇಟೆ ;-ಜುಲೈ ೧೯ ರಂದು ಶನಿವಾರ ಸಂಜೆ   ಪಟ್ಟಣದ ವಿಶ್ವಮಾನವ ಸಭಾಭವನದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ.ಹಾಗೂ ಪದವಿ ಕಾಲೇಜ್‌ನಲ್ಲಿ ವ್ಯಾಸಂಗ ಮಾಡಿಅತಿ ಹೆಚ್ಚು ಆಂಕಗಳಿಸಿ ತೇರ್ಗಡೆಯಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ಹಾಗೂ ೨೦೨೫-೨೬ ನೇ ಸಾಲಿನ ನೂತನರೋಟರಿಕ್ಲಬ್ ಪದವಿ ಸ್ವೀಕಾರ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದು ನೂತನ ಅಧ್ಯಕ್ಷ.ಎ.ಎಂ.ಕೃಷ್ಣರಾಜು ತಿಳಿಸಿದರು.

ಪಟ್ಟಣದ ರೋಟರಿಕ್ಲಬ್‌ನ ಸಭಾಂಗಣದಲ್ಲಿ  ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ನೂತನ ಪದಾಧಿಕಾರಿಗಳಿಗೆ ಡಿಸ್ಟಿçಕ್ಟ್ ಗವರ್ನರ್ರೊ.ಬಿ.ಎಂ.ಭಟ್ ಪ್ರದವಿ ಪ್ರಧಾನ ಮಾಡಲಿದ್ದಾರೆ.ಈ ಸಮಾರಂಭದಲ್ಲಿ ರೋಟರಿ ಜಿಲ್ಲಾ 3182 ರ   ಅಸಿಸ್ಟೆಂಟ್ ಗವರ್ನರ್ ವಲಯ-೧೧ .ಎಂ.ಬಿ. ಲಕ್ಷ್ಮಣಗೌಡ,ವಲಯ-೧೧ರ ಝೋನಲ್ ,ಲೆಪ್ಟಿನೆಂಟ್ರೊ.ಭರತ್‌ಕುಮಾರ್ ಕೋಡ್ಲು ಉಪಸ್ಥಿತಿಯಲ್ಲಿ ಜರುಗಲಿದೆ.

ರೋಟರಿಕ್ಲಬ್  ಹಾಲಿ ಅಧ್ಯಕ್ಷ ಎಂ.ರಾಮಚಂದ್ರ,ಕಾರ್ಯದರ್ಶಿ ರೊ.ಸಬಾಸ್ಟಿನ್ ಮ್ಯಾಥ್ಯೂಸ್ ಹಾಗೂ ೨೦೨೫-೨೬ ನೇ ಸಾಲಿನ ರೋಟರಿಕ್ಲಬ್ಅಧ್ಯಕ್ಷರೊ.ಎ.ಎಂ.ಕೃಷ್ಣರಾಜ್ ಕಾರ್ಯದರ್ಶಿ ರವೀಂದ್ರಬಲ್ಲಾಳ್ ಕೆ.ಇವರಿಗೆ ಪದವಿ ಹಸ್ತಾಂತರ ಮಾಡಲಿದ್ದಾರೆ  ಎಂದು ತಿಳಿದರು.

ಇದೇ ಸಂದರ್ಭದಲ್ಲಿ ೨೦೨೪-೨೫ ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ.ಹಾಗೂ ಪದವಿಯಲ್ಲಿ ವ್ಯಾಸಂಗ ಮಾಡಿ ಹೆಚ್ಚು ಅಂಕಗಳಿಸುವ ಮೂಲಕ ತೇರ್ಗಡೆಯಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ವಿವಿಧಕ್ಷೇತ್ರದಲ್ಲಿ ಸಾಧನೆಗೈದವರಿಗೆ ಪುರಸ್ಕಾರ ನೀಡಿಗೌರವಿಸಲಾಗುವುದುಎಂದು ತಿಳಿಸಿದರು.

ರಿಪ್ಪನ್ ಪೇಟೆ ರೋಟರಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ರೋಟರಿ ಜಿಲ್ಲಾ 31 82 ವಲಯ11ರ ಅಸಿಸ್ಟೆಂಟ್ ಗವರ್ನರ್ ಎಂ.ಬಿ ಲಕ್ಷ್ಮಣಗೌಡ ಮಾತನಾಡಿ  ಆರೋಗ್ಯ ಶಿಕ್ಷಣ ಸಮಾಜ ಸೇವೆ ಮತ್ತು ಆತಿಥ್ಯದ ಸಲುವಾಗಿ ಸ್ಥಾಪಿಸಲು ಪಟ್ಟ ಅಂತರಾಷ್ಟ್ರೀಯ ಸಂಸ್ಥೆಯಾದ ರೋಟರಿ ಸಂಸ್ಥೆ ರಿಪ್ಪನ್ ಪೇಟೆಯಲ್ಲಿ ಪ್ರಾರಂಭವಾಗಿ ಇದೀಗ 15 ವರ್ಷಗಳಾಯಿತು, ಆರೋಗ್ಯ ಶಿಕ್ಷಣ, ಕೃಷಿ, ಮತ್ತು ಪಶು ಸಂಗೋಪನೆ  ಚಟುವಟಿಕೆಗಳಿಗೆ ಸಂಬಂಧಪಟ್ಟಂತೆ ನೂರಾರು ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿದೆ. ಸಮಾಜ ಸೇವೆಯನ್ನು ಮಾಡುವ ಸದುದ್ದೇಶವನ್ನು ಹೊಂದಿರುವ ನಾಗರಿಕರಿಗೆ ರೋಟರಿ ಸಂಸ್ಥೆಯು ಅತ್ಯುತ್ತಮವಾದ ವೇದಿಕೆಯಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ,ಜೆ.ರಾಧಾಕೃಷ್ಣ, ಕಾರ್ಯದರ್ಶಿ ರವೀಂದ್ರಬಲ್ಲಾಳ್, ಎನ್.ಗಣೇಶಕಾಮತ್,ಹೆಚ್. ಎ. ರಾಧಾಕೃಷ್ಣ, ಸಬಾಸ್ಟಿನ್ ಮ್ಯಾಥ್ಯೂಸ್, ಡಾಕಪ್ಪ ಮುಡುಬ,ಶಿವಕುಮಾರಶೆಟ್ಟಿ ಇನ್ನಿತರರಿದ್ದರು.

Exit mobile version