Headlines

ನಾಗರಹಳ್ಳಿ ನಾಗೇಂದ್ರಸ್ವಾಮಿ ದೇವಸ್ಥಾನದಲ್ಲಿ ನಾಗರ ಪಂಚಮಿ ಹಬ್ಬದ ಸಂಭ್ರಮ

ನಾಗರಹಳ್ಳಿ ನಾಗೇಂದ್ರಸ್ವಾಮಿ ದೇವಸ್ಥಾನದಲ್ಲಿ ನಾಗರ ಪಂಚಮಿ ಹಬ್ಬ ಸಂಭ್ರಮ – ಭಕ್ತರ ದಂಡೆ, ಧಾರ್ಮಿಕ ವಿಧಿವಿಧಾನಗಳೊಂದಿಗೆ ಆಚರಣೆ

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ನಾಗರಹಳ್ಳಿಯ ಪ್ರಸಿದ್ಧ ನಾಗೇಂದ್ರಸ್ವಾಮಿ ದೇವಸ್ಥಾನದಲ್ಲಿ ಇಂದು ನಾಗರ ಪಂಚಮಿ ಹಬ್ಬವನ್ನು ಭಕ್ತಿ ಭಾವನೆ ಮತ್ತು ಶ್ರದ್ಧೆಯಿಂದ ಆಚರಿಸಲಾಯಿತು. ಮುಂಜಾನೆಯಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನಕ್ಕಾಗಿ ಉತ್ಸಾಹದಿಂದ ಆಗಮಿಸಿದ್ದರು.

ಹಬ್ಬದ ಅಂಗವಾಗಿ ದೇವಾಲಯದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಿತು. ನಾಗೇಂದ್ರಸ್ವಾಮಿಗೆ ವಿಶೇಷ ಅಭಿಷೇಕ, ಪಂಚಾಮೃತ ಸ್ನಾನ, ಹಾಲು-ಸಕ್ಕರೆಯಿಂದ ಆರಾಧನೆ, ನಾಗಬಲಿ, ಅಷ್ಟನಾಗಾರ್ಚನೆ, ಸರ್ಪಸುಕ್ತ ಪಾರಾಯಣ, ನಾಮಸಂಕೀರ್ತನೆ ಸೇರಿದಂತೆ ಶ್ರದ್ಧಾ ಪೂರ್ವಕವಾದ ಸೇವೆಗಳು ಜರುಗಿದವು. ದೇವಾಲಯ ಸುತ್ತಮುತ್ತ ಭಕ್ತರ ಶ್ರದ್ಧಾ, ನಂಬಿಕೆ ಮೆರೆಯಿತು.

ಈ ಸಂದರ್ಭದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ಚಂದ್ರಮೌಳಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಿ.ಪಿ. ರಾಮಚಂದ್ರ, ಹುಂಚಘಟಕದ ಅಧ್ಯಕ್ಷ ಗುರು ಸುಣ್ಣಕಲ್, ದೇವಸ್ಥಾನ ಸಮಿತಿಯ ವರ್ತೇಶ್ ಗೌಡ ಹುಗಡಿ ಸೇರಿದಂತೆ ಹಲವಾರು ಗಣ್ಯರು ದೇವರ ದರ್ಶನ ಪಡೆದು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ದೇವಾಲಯ ಸಮಿತಿಯ ಸದಸ್ಯರಾದ ಸತೀಶ್ ಭಟ್ರು, ವರ್ತೇಶ್ ಗೌಡ್ರು, ಕೇಶವ ನಾಗರಹಳ್ಳಿ, ಲಾಯರ್ ರಾಮಚಂದ್ರ ಮತ್ತಿತರರು ಹಾಜರಿದ್ದಾರೆ.

Exit mobile version