Headlines

ಶಬರೀಶನಗರದ ನಾಗ ದೇವಸ್ಥಾನದಲ್ಲಿ ನಾಗರ ಪಂಚಮಿ ಹಬ್ಬ ಸಂಭ್ರಮ

ಶಬರೀಶನಗರದ ನಾಗ ದೇವಸ್ಥಾನದಲ್ಲಿ ನಾಗರ ಪಂಚಮಿ ಹಬ್ಬ ಸಂಭ್ರಮ

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಪಟ್ಟಣದ ಶಬರೀಶನಗರದ ನಾಗರ ದೇವಸ್ಥಾನದಲ್ಲಿ ನಾಗರ ಪಂಚಮಿ ಹಬ್ಬವನ್ನು ಭಕ್ತಿ ಭಾವನೆ ಮತ್ತು ಶ್ರದ್ಧೆಯಿಂದ ಆಚರಿಸಲಾಯಿತು.

ಹಬ್ಬದ ಅಂಗವಾಗಿ ದೇವಾಲಯದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಿತು. ನಾಗೇಂದ್ರಸ್ವಾಮಿಗೆ ವಿಶೇಷ ಅಭಿಷೇಕ, ಪಂಚಾಮೃತ ಸ್ನಾನ, ನಾಗಬಲಿ, ಅಷ್ಟನಾಗಾರ್ಚನೆ, ಸೇರಿದಂತೆ ಶ್ರದ್ಧಾ ಪೂರ್ವಕವಾದ ಸೇವೆಗಳು ಜರುಗಿದವು.

ಈ ಸಂದರ್ಭದಲ್ಲಿ ನೂರಾರು ಭಕ್ತಾಧಿಗಳು ಶ್ರದ್ದೆಯಿಂದ ಪೂಜೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾದರು.

ಹೊಂಬುಜ ಅತಿಶಯ ಶ್ರೀಕ್ಷೇತ್ರದಲ್ಲಿ ನಾಗರ ಪಂಚಮಿ ಪರ್ವ | ನಾಗಾರಾಧನೆಯಿಂದ ಅನರ್ಘ್ಯ ಫಲಪ್ರಾಪ್ತಿ ; ಶ್ರೀಗಳು

ಪ್ರಕೃತಿಯ ಸಂರಕ್ಷಣೆಯ ಮಹತ್ವವನ್ನು ಸರ್ವತ್ರ ಸಾದರಪಡಿಸುವ ನಾಗರಪಂಚಮಿ ರಾಷ್ಟ್ರೀಯ ಪರ್ವವಾಗಿದೆ. ಪ್ರಾಚೀನ ಧರ್ಮ ಪರಂಪರೆಯಲ್ಲಿ ನಾಗಾರಾಧನೆಯ ಐತಿಹ್ಯ ಪ್ರಧಾನವಾಗಿದೆ ಎಂದು ಹೊಂಬುಜ ಅತಿಶಯ ಶ್ರೀಕ್ಷೇತ್ರದ ಶ್ರೀ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು ತಿಳಿಸಿದರು.

ಉಪಸರ್ಗಗಳನ್ನು ನಿವಾರಿಸಿ ವೈಯುಕ್ತಿಕವಾಗಿ ರಕ್ಷಣೆ ನೀಡುವ ಧರಣೇಂದ್ರ ಯಕ್ಷ ಹಾಗೂ ಯಕ್ಷಿ ಪದ್ಮಾವತಿ ದೇವಿ ಕೃಪೆ ಎಲ್ಲರಿಗೂ ಲಭಿಸಲಿ. ವಿಪುಲ ಜಲನಿಧಿಯಿಂದ ಬೆಳೆ ವಿಪುಲವಾಗಿ ಬೆಳೆದು ಆಹಾರದ್ರವ್ಯಗಳು ಯಥೇಚ್ಛವಾಗಿ ದೊರೆಯಲೆಂದು ಶ್ರೀಗಳವರು ಆಶಿಸುತ್ತಾ, ನಾಗಾರಾಧನೆಯಿಂದ ಅನರ್ಘ್ಯ ಫಲಪ್ರಾಪ್ತಿಯಾಗಲಿ ಎಂದು ಭಕ್ತರನ್ನು ಹರಸಿದರು.

ಪ್ರಾತಃಕಾಲ ಶ್ರೀ ನೇಮಿನಾಥ ಸ್ವಾಮಿ, ಶ್ರೀ 1008 ಪಾರ್ಶ್ವನಾಥ ಸ್ವಾಮಿ, ಶ್ರೀ ಆದಿನಾಥ ಸ್ವಾಮಿ ಸನ್ನಿಧಿಯಲ್ಲಿ ಆಗಮೋಕ್ತ ವಿಧಿಯಂತೆ ಪೂಜಾ ಕೈಕಂರ್ಯಗಳು ನೆರವೇರಿದವು. ಬಳಿಕ ಅಭೀಷ್ಠವರ ಪ್ರದಾಯಿನಿ ಶ್ರೀ ಪದ್ಮಾವತಿ ದೇವಿ, ಶ್ರೀ ಸರಸ್ವತಿ ದೇವಿ ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಕ್ಷೇತ್ರಪಾಲ ಸಾನಿಧ್ಯದಲ್ಲಿ ಭಕ್ತರು ಪೂಜೆ ಸಲ್ಲಿಸಿದರು.

ಶ್ರೀ ನಾಗದೇವರ ಪೂಜೆಯನ್ನು ಎಳನೀರು, ಹಾಲು ಅರಿಶಿನ, ಫಲ-ಪುಷ್ಪ ಸಮರ್ಪಣೆಯ ಪೂರ್ವ ಪರಂಪರೆಯಂತೆ ನೆರವೇರಿಸಲಾಯಿತು.

Exit mobile version