Headlines

ಬಿಎಸ್ಎನ್ಎಲ್ ಟವರ್‌ನಲ್ಲಿದ್ದ ₹2.8 ಲಕ್ಷ ಮೌಲ್ಯದ ಬ್ಯಾಟರಿ ಕಳವು

ಬಿಎಸ್ಎನ್ಎಲ್ ಟವರ್‌ನಲ್ಲಿದ್ದ ₹2.8 ಲಕ್ಷ ಮೌಲ್ಯದ ಬ್ಯಾಟರಿ ಕಳವು

ತೀರ್ಥಹಳ್ಳಿ, ಜುಲೈ 30: ತೀರ್ಥಹಳ್ಳಿ ತಾಲೂಕಿನ ಬಸವಾನಿ ಗ್ರಾಮದಲ್ಲಿರುವ ಬಿಎಸ್‌ಎನ್‌ಎಲ್ ಮೊಬೈಲ್ ಟವರ್‌ನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಬ್ಯಾಟರಿಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.

ಜುಲೈ 25 ರಂದು ಸಂಜೆ ಟವರ್‌ನ್ನು ಪರಿಶೀಲಿಸಲು ಬಂದ ಸಂದೀಪ್ ಮಳ್ಳಿಗಾರ ಅವರಿಗೆ ಬ್ಯಾಟರಿಗಳು ಕಳವಾಗಿರುವುದು ಗೊತ್ತಾಯಿತು. ಈ ಬಗ್ಗೆ ಅವರು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಒಟ್ಟು ₹2.8 ಲಕ್ಷ ಮೌಲ್ಯದ 2 ವೋಲ್ಟ್ ಸಾಮರ್ಥ್ಯದ 24 ಬ್ಯಾಟರಿಗಳು ಕಳವು ಆಗಿವೆ.

ತೀರ್ಥಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Exit mobile version