Categories: Blog

ರಿಪ್ಪನ್ ಪೇಟೆ ರಾಮಮಂದಿರದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ರಿಪ್ಪನ್ ಪೇಟೆ ರಾಮಮಂದಿರದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ರಿಪ್ಪನ್ ಪೇಟೆ : ಪಟ್ಟಣದ ಸಾಗರ ರಸ್ತೆಯಲ್ಲಿರುವ ಶ್ರೀ ರಾಮಮಂದಿರದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಯೋಗ ಶಿಕ್ಷಕ ನಟರಾಜ್ ನೇತ್ರತ್ವದಲ್ಲಿ ಆಚರಿಸಲಾಯಿತು.

ಯೋಗ ಶಿಕ್ಷಕ ನಟರಾಜ್ ಮಾತನಾಡಿ, ಯೋಗಕ್ಕೆ ಪ್ರಾಚೀನ ಇತಿಹಾಸವಿದೆ. ದೈಹಿಕ, ಮಾನಸಿಕ ಆರೋಗ್ಯ ಮಾತ್ರವಲ್ಲದೆ ಆಧ್ಯಾತ್ಮಿಕ ಅನುಭವವನ್ನು ಯೋಗ ನೀಡುತ್ತದೆ. ಧ್ಯಾನ, ಪ್ರಾಣಾಯಾಮ ಸೇರಿದಂತೆ ಯೋಗದ ಸರಳ ಆಸನಗಳನ್ನು ಪ್ರತಿನಿತ್ಯ ಮಾಡುವುದರಿಂದ ದೇಹದಲ್ಲಿನ ಒತ್ತಡ ಕಡಿಮೆಯಾಗಿ ಮನಸ್ಸಿಗೆ ಹೆಚ್ಚು ಶಾಂತಿ, ನೆಮ್ಮದಿ ಉಂಟು ಮಾಡುತ್ತದೆ, ವ್ಯಕ್ತಿಯ ಕೋಪವನ್ನು ಕಡಿಮೆ ಮಾಡಿ ತಾಳ್ಮೆ, ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಎಂದರು.

ಪಟ್ಟಣದ ಸಾರ್ವಜನಿಕರು ಯೋಗಶಿಕ್ಷಕ ನಟರಾಜ್ ಹೇಳಿಕೊಟ್ಟ ಯೋಗಭಂಗಿಗಳು, ಆಸನಗಳನ್ನು ಮಾಡುವ ಮೂಲಕ ಯೋಗ ದಿನಾಚರಣೆಯನ್ನು ಆಚರಿಸಿದರು.

ಈ ಸಂಧರ್ಭದಲ್ಲಿ ಪ್ರಮುಖರಾದ ಆರ್ ಟಿ ಗೋಪಾಲ್ , ಸುರೇಶ್ ಸಿಂಗ್ , ಎನ್ ಸತೀಶ್ , ಸುಂದರೇಶ್ ಕೆರೆಹಳ್ಳಿ , ಆನಂದ್ ಮೆಣಸೆ ,ಪದ್ಮಾ ಸುರೇಶ್ ಹಾಗೂ ಇನ್ನಿತರರಿದ್ದರು…

ಯೋಗ ಬದುಕಿನ ದಾರಿ..

ಬದುಕನ್ನು ಹೇಗೆ ಬದುಕಬೇಕು ಎನ್ನುವ ಕುರಿತಾಗಿ ಮನುಕುಲದ ಬೇರೆ ಬೇರೆ ನಾಗರಿಕತೆಗಳು ತಮ್ಮದೇ ಆದ ಚಿಂತನೆಗಳನ್ನು ಬೆಳೆಸಿಕೊಂಡವು. ಆದರೆ ಭೌತಿಕ ಮತ್ತು ಸಾಂಸ್ಕೃತಿಕ ದಾಳಿಗಳಿಂದಾಗಿ ಬಹುತೇಕ ಮಾನವ ಸಮುದಾಯಗಳು ತಮ್ಮ ಪ್ರಾಚೀನ ಚಿಂತನೆಗಳನ್ನು ಮರೆಯುವಂತಾಯಿತು. ಭಾರತದ ಭಾಗ್ಯವೆಂದರೆ, ನಮ್ಮ ಮೇಲೆ ನಡೆದ ಎಲ್ಲ ಬಗೆಯ ದಾಳಿಗಳ ಹೊರತಾಗಿಯೂ ಈ ಮಣ್ಣಿನ ಮಹಿಮೆಯೋ ಎಂಬಂತೆ ಪ್ರಾಚೀನ ಕಾಲದ ಚಿಂತನೆಗಳು ಉಳಿದುಕೊಂಡು ಬಂದಿವೆ ಎಂಬುದು. ಅವುಗಳಲ್ಲಿ ಕೆಲವಂತೂ ನಾವು ಬದುಕಿರುವ ಈ ಕಾಲದಲ್ಲಿ ಇನ್ನಷ್ಟು ಹೊಳಪನ್ನು ಪಡೆದುಕೊಂಡು ಪ್ರವರ್ಧಮಾನಕ್ಕೆ ಬರುತ್ತಿವೆ. ಅದರಲ್ಲಿ ಯೋಗಶಾಸ್ತ್ರವೂ ಸೇರಿದೆ.

ಭಾರತದ ನಾನಾ ಪರಂಪರೆಗಳಲ್ಲಿ ಪ್ರಚುರವಾಗಿದ್ದ ಚಿಂತನೆಗಳನ್ನೆಲ್ಲ ಒಟ್ಟಂದದಲ್ಲಿ ಸೇರಿಸಿ ಯೋಗಸೂತ್ರಗಳ ರೂಪದಲ್ಲಿ ಕೊಡಮಾಡಿದವರು ಪತಂಜಲಿ ಮಹರ್ಷಿಗಳು. ಸಾಮಾನ್ಯ ಶಕಪೂರ್ವದ ಮೊದಲನೆಯ ಶತಮಾನವು ಇವರ ಕಾಲವಾಗಿದ್ದಿರಬಹುದೆಂದು ಇತಿಹಾಸಕಾರರು ಗುರುತಿಸುತ್ತಾರೆ. ಅಲ್ಲಿಂದಾಚೆಗೆ ಯೋಗವು ನಮ್ಮ ಆರು ಆಸ್ತಿಕ ದರ್ಶನಗಳ ಸಾಲಿನಲ್ಲಿ ಒಂದಾಗಿ ಗುರುತಾಗುತ್ತದೆ. ಪತಂಜಲಿ ಮಹರ್ಷಿಗಳು ಪ್ರಸ್ತಾವಿಸಿದ ನೂರತೊಂಬತ್ತಾರು ಸೂತ್ರಗಳಿರುವ ಈ ಯೋಗಶಾಸ್ತ್ರದಲ್ಲಿ ಮುಖ್ಯವಾಗಿ ಎಂಟು ಅಂಗಗಳು ಇರುವುದರಿಂದ ಅದು ‘ಅಷ್ಟಾಂಗಯೋಗ’ ಎನ್ನಿಸಿಕೊಳ್ಳುತ್ತದೆ. ಎಲ್ಲ ದರ್ಶನಗಳಂತೆ ಯೋಗದರ್ಶನದ ಉದ್ದೇಶವೂ ಮೋಕ್ಷವೇ. ಇಲ್ಲಿ ಮೋಕ್ಷಕ್ಕೆ ಸಂವಾದಿಯಾಗಿ ಬರುವಂಥದು ಚಿತ್ತವೃತ್ತಿ ನಿರೋಧದ ಮೂಲಕ ಗಳಿಸಲಾಗುವ ‘ಸಮಾಧಿ’ ಎಂಬ ಸ್ಥಿತಿ. ನಮಗೆ ಇಂದು ಯೋಗ ಎಂದಾಕ್ಷಣ ಮನಸ್ಸಿಗೆ ಬರುವ ಆಸನ, ಪ್ರಾಣಾಯಾಮಗಳೆಲ್ಲ ಸಮಾಧಿಯೆಂಬ ಗುರಿಯ ಸಾಧನೆಗೆ ಒತ್ತಾಸೆಯಾಗಿ ಬರುವಂಥ ಉಪಾಂಗಗಳು.

ನಾವು ಬದುಕಿರುವ ಈ ಕಾಲದಲ್ಲಿ ಮೋಕ್ಷ, ಸಮಾಧಿ, ಆತ್ಯಂತಿಕ ದುಃಖನಿವೃತ್ತಿ, ನಿರ್ವಾಣ ಎಂಬ ಕಾರಣಗಳಿಗೆ ಅಲ್ಲದೆ ಒಳ್ಳೆಯ ಬದುಕಿನ ಮಾದರಿಗಾಗಿ ನಾವು ಯೋಗವೇ ಮೊದಲಾದ ದರ್ಶನಗಳನ್ನು ಎದುರುನೋಡುತ್ತೇವೆ. ಅಂದರೆ ನಮಗೆ ಯೋಗವು ಇವತ್ತಿಗೆ ಒದಗಿಬರುತ್ತಿರುವುದು ಉತ್ತಮ ಗುಣಮಟ್ಟದ ಬದುಕಿನ ಹಾದಿಯ ಕೈದೀವಿಗೆಯಾಗಿ. ಇರುವಷ್ಟು ಬದುಕಿನ ಶಕ್ತಿಯನ್ನು ಕೆಲವೇ ಕಾಲದಲ್ಲಿ ವ್ಯಯಿಸಿ ಉಳಿದ ಬದುಕನ್ನು ನಿಸ್ಸಾರವಾಗಿ ಬದುಕುವುದಕ್ಕಿಂತ, ಪ್ರಕೃತಿಯು ಕೊಡಮಾಡಿರುವ ಶಕ್ತಿಯನ್ನು ನಿಯಮಿತವಾಗಿ ಬಳಸುತ್ತ, ಬೆಳೆಸುತ್ತ ಒಂದು ಸಹಜ, ಶುದ್ಧ, ಶಾಂತ ಬದುಕನ್ನು ಸಾಧ್ಯಮಾಡಿಕೊಳ್ಳುವುದು ಹೇಗೆ ಎನ್ನುವುದಕ್ಕೆ ಯೋಗದಲ್ಲಿ ಉತ್ತರವಿದೆ. ಯೋಗ ಎನ್ನುವುದು ಬರಿಯ ಆಸನ ಪ್ರಾಣಾಯಾಮ ಧ್ಯಾನವಷ್ಟೇ ಅಲ್ಲ; ಅದೊಂದು ದರ್ಶನ; ಎಂದರೆ ಕಾಣ್ಕೆ. ಅದೊಂದು ಬದುಕಿನ ಮಾರ್ಗ. ಸರಳವಾಗಿ ಹೇಳಬೇಕೆಂದರೆ ಬೇಕಾಬಿಟ್ಟಿ ಬದುಕಿ ಮತ್ತೆ ಬೆಳಿಗ್ಗೆ ಎದ್ದು ಯೋಗಾಸನ ಪ್ರಾಣಾಯಾಮದ ಮೂಲಕ ಎಲ್ಲವನ್ನೂ ಸರಿಮಾಡಿಕೊಳ್ಳುತ್ತೇನೆ ಎಂಬುದು ಯೋಗದ ದೃಷ್ಟಿ ಅಲ್ಲ. ಹಾಗಾಗಿ ಜಿಮ್, ವರ್ಕೌಟ್, ಫಿಟ್ನೆಸ್ ಪ್ರಾಕ್ಟೀಸ್ ಇತ್ಯಾದಿಗಳನ್ನು ನೋಡುವಂತೆ ಯೋಗವನ್ನು ನೋಡಲಾಗದು.

ಅನೂಚಾನವಾಗಿ, ಸಣ್ಣ ಪ್ರಮಾಣದಲ್ಲಿಯೇ ಆದರೂ ನಿಯಮಿತವಾಗಿ ರೂಢಿಸಿಕೊಂಡು ಬಂದಿರುವ ಆಸನ–ಪ್ರಾಣಾಯಾಮಗಳು ತಪಸ್ಸಿನಂತೆಯೇ ಸರಿ. ಅವಕ್ಕೆ ಬದುಕಿಗೊಂದು ಶ್ರುತಿಹಿಡಿದು ಲಯ ತಪ್ಪದಂತೆ ಮುನ್ನಡೆಸುವ ಶಕ್ತಿ ಇದೆ. ಒಂದೇ ಮಾತಿನಲ್ಲಿ ಹೇಳುವುದಾದರೆ ನಿಯಮಿತತೆ ಮತ್ತು ಸಂಯಮ ಇವೆರಡು ಯೋಗಜೀವನದ ಆದ್ಯ ತತ್ತ್ವಗಳು.

ಯೋಗವೆಂದರೆ ಆಸನ–ಪ್ರಾಣಾಯಾಮಗಳಷ್ಟೇ ಅಲ್ಲದೆ, ಅಥವಾ ಎಂಟು ಅಂಗಗಳಿರುವ ಯೋಗಶಾಸ್ತ್ರವಷ್ಟೇ ಅಲ್ಲದೆ ಅದು ಭಾರತವು ಸಾಕ್ಷಾತ್ಕರಿಸಿಕೊಂಡಿರುವ ಒಂದು ಜೀವನದೃಷ್ಟಿಯಾಗಿದೆ. ಯೋಗವೆನ್ನುವ ಪದವನ್ನು ನಾನಾ ಶಾಸ್ತ್ರಗಳು ಬಳಸಿಕೊಂಡಿವೆ. ಹೆಚ್ಚೇಕೆ, ಭಗವಾನ್ ಶ್ರೀಕೃಷ್ಣನ ಗೀತೋಪದೇಶವೆಲ್ಲವೂ ಯೋಗಮಯವೇ. ಗೀತೆಯೇ ಹೇಳುವಂತೆ ನಾವು ಕೈಗೆತ್ತಿಕೊಂಡ ಕಾರ್ಯವನ್ನು ಅತ್ಯಂತ ಕುಶಲವಾಗಿ ನಿರ್ವಹಿಸುವುದು ಯೋಗದ ಒಂದು ನಿರ್ವಚನ. ಭಗವಾನ್ ಶ್ರೀಕೃಷ್ಣನು ಸ್ವಯಂ ಯೋಗೀಶ್ವರನೂ ಹೌದು.

ಜೂನ್ 21ರಂದು ಪ್ರತಿವರ್ಷ ಹಮ್ಮಿಕೊಳ್ಳಲಾಗುವ ಅಂತಾರಾಷ್ಟ್ರೀಯ ಯೋಗದಿನದಂದು ಯೋಗದ ಕುರಿತು ಆಸನಕ್ಕಿಂತ ಹೊರತಾದ ಅನುಸಂಧಾನ ನಮಗೆಲ್ಲ ಸಾಧ್ಯವಾದರೆ ಅದು ಯೋಗದಿನಾಚರಣೆಯ ಸಾರ್ಥಕತೆಯೇ ಹೌದು.

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ಕಾಡುಪ್ರಾಣಿ ತಪ್ಪಿಸಲು ಹೋಗಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಕಾರು – ತಪ್ಪಿದ ಭಾರಿ ಅನಾಹುತ

ಕಾಡುಪ್ರಾಣಿ ತಪ್ಪಿಸಲು ಹೋಗಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಕಾರು – ತಪ್ಪಿದ ಭಾರಿ ಅನಾಹುತ A car crashed into…

17 hours ago

ರಿಪ್ಪನ್‌ಪೇಟೆಯಲ್ಲಿ 59ನೇ ಗಣೇಶೋತ್ಸವಕ್ಕೆ ಭರದ ಸಿದ್ದತೆ : ಸೆ.14ರಿಂದ 11 ದಿನಗಳ ಸಾಂಸ್ಕೃತಿಕ ಸಂಭ್ರಮ

ರಿಪ್ಪನ್‌ಪೇಟೆಯಲ್ಲಿ 59ನೇ ಗಣೇಶೋತ್ಸವಕ್ಕೆ ಭರದ ಸಿದ್ದತೆ : ಸೆ.14ರಿಂದ 11 ದಿನಗಳ ಸಾಂಸ್ಕೃತಿಕ ಸಂಭ್ರಮ Rippanpete Ganeshotsava 2026: Karnataka…

18 hours ago

ಹೊಸನಗರದಲ್ಲಿ ಸೆ.14ರಿಂದ 28ರವರೆಗೆ 8ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ: ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿದ್ಧತೆ

ಹೊಸನಗರದಲ್ಲಿ ಸೆ.14ರಿಂದ 28ರವರೆಗೆ 8ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ: ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿದ್ಧತೆ Hosanagara Hindu Mahasabha…

18 hours ago

ಜಿಂಕೆ ಮಾಂಸ ಸಾಗಾಟದ ಆರೋಪ: 34 ಕೆ.ಜಿ.ಗೂ ಅಧಿಕ ಮಾಂಸ ವಶ, ಓರ್ವ ಬಂಧನ

ಜಿಂಕೆ ಮಾಂಸ ಸಾಗಾಟದ ಆರೋಪ: 34 ಕೆ.ಜಿ.ಗೂ ಅಧಿಕ ಮಾಂಸ ವಶ, ಓರ್ವ ಬಂಧನ Forest mobile squad seizes…

2 days ago

ಸರ್ಕಾರಿ ಬಸ್ ಸಮಯ ಬದಲಾವಣೆಗೆ ಆಗ್ರಹ: ವಿದ್ಯಾರ್ಥಿಗಳು, ಉದ್ಯೋಗಿಗಳ ಪ್ರತಿಭಟನೆ

ಸರ್ಕಾರಿ ಬಸ್ ಸಮಯ ಬದಲಾವಣೆಗೆ ಆಗ್ರಹ: ವಿದ್ಯಾರ್ಥಿಗಳು, ಉದ್ಯೋಗಿಗಳ ಪ್ರತಿಭಟನೆ Students and employees protest in Thirthahalli demanding…

2 days ago

ಮೆಗ್ಗಾನ್ ನೂತನ ಹೃದ್ರೋಗ ಆಸ್ಪತ್ರೆಗೆ ಸಚಿವ ಮಧು ಬಂಗಾರಪ್ಪ ದಿಢೀರ್ ಭೇಟಿ; ₹6 ಕೋಟಿ ಅನುದಾನದ ಭರವಸೆ

ಮೆಗ್ಗಾನ್ ನೂತನ ಹೃದ್ರೋಗ ಆಸ್ಪತ್ರೆಗೆ ಸಚಿವ ಮಧು ಬಂಗಾರಪ್ಪ ದಿಢೀರ್ ಭೇಟಿ; ₹6 ಕೋಟಿ ಅನುದಾನದ ಭರವಸೆ Shivamogga Minister…

2 days ago