ಭಾರಿ ಮಳೆಗೆ ಧರೆ ಕುಸಿದು ನೆಲಕ್ಕುರುಳಿದ 30 ಕ್ಕೂ ಹೆಚ್ಚು ಅಡಿಕೆ ಮರ
ತೀರ್ಥಹಳ್ಳಿ: ತಾಲೂಕಿನಲ್ಲಿ ಮಳೆಯ ಅಬ್ಬರ ಹೆಚ್ಚಾಗಿ ಮಳೆಯಿಂದ ಧರೆ ಕುಸಿದು ಅಡಿಕೆ ಮರ ಬಿದ್ದ ಘಟನೆ ತೂದೂರು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.
ತೂದೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಮೂಡ್ಲು ಎಂಬ ಗ್ರಾಮದ ಮಂಜುನಾಥ್ ಶೆಟ್ಟಿ ಎಂಬುವರ ತೋಟದ ಹಿಂಭಾಗ ಹಳ್ಳದ ನೀರು ಹರಿಯುತ್ತಿದ್ದು ಹಳ್ಳದ ನೀರಿನ ರಭಸಕ್ಕೆ ಧರೆ ಕುಸಿದು 30 ಕ್ಕೂ ಹೆಚ್ಚು ಅಡಿಕೆ ಮರ ನೆಲಕ್ಕೆ ಉರುಳಿದ್ದವು.
ವಿಷಯ ತಿಳಿಯುತ್ತಿದ್ದಂತೆ ತಾಲೂಕು ಬಿಜೆಪಿ ಅಧ್ಯಕ್ಷರಾದ ನವೀನ್ ಹೆದ್ದೂರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಶಾಸಕ ಆರಗ ಜ್ಞಾನೇಂದ್ರ ಅವರಿಗೆ ಮಾಹಿತಿ ನೀಡಿ ಇಂಜಿನಿಯರ್ ಬಳಿ ಮಾತನಾಡಿ ಹಳ್ಳದ ಬದಿಗೆ ತಡೆಗೋಡೆ ನಿರ್ಮಾಣ ಮಾಡಲು ತಿಳಿಸಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಮಳೆಗಾಲದಲ್ಲಿ ಅನಾಹುತಗಳು ಸಂಭವಿಸುತ್ತಿದ್ದು ಯಾವುದೇ ಅವಘಡ ಸಂಭವಿಸಿದ ವಿಷಯ ತಿಳಿದರು ಬಿಜೆಪಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಈ ವೇಳೆ ತೂದೂರು ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷರಾದ ಮಧುರಾಜ್ ಹೆಗಡೆ, ಮೋಹನ್ ಭಟ್, ಅಂಜೂರ ಕುಡುಮಲ್ಲಿಗೆ ಸೇರಿದಂತೆ ಹಲವರು ಇದ್ದರು.