Headlines

ಕಾಂತಾರಾ 1 ಚಿತ್ರತಂಡದ ಕಲಾವಿದ ಹೃದಯಾಘಾತದಿಂದ ಸಾವು – ಚಿತ್ರ ತಂಡಕ್ಕೆ ಕಾಡುತಿದ್ದೆಯಾ ಕಂಟಕ.!? ಒಂದಲ್ಲ, ಎರಡಲ್ಲ ಇದು ಮೂರನೇ ಸಾವು!

ಕಾಂತಾರಾ 1 ಚಿತ್ರತಂಡದ ಕಲಾವಿದ ಹೃದಯಾಘಾತದಿಂದ ಸಾವು – ಚಿತ್ರ ತಂಡಕ್ಕೆ ಕಾಡುತಿದ್ದೆಯಾ ಕಂಟಕ.!? ಒಂದಲ್ಲ, ಎರಡಲ್ಲ ಇದು ಮೂರನೇ ಸಾವು!

ತೀರ್ಥಹಳ್ಳಿ : ಕಾಂತಾರ ತಂಡಕ್ಕೆ ಶಾಕ್ ಮೇಲೆ ಶಾಕ್ ಸಿಗುತ್ತಲೇ ಇದೆ. ಪ್ರೀಕ್ವೆಲ್ ಶೂಟಿಂಗ್ ವೇಳೆ ಎಚ್ಚರಿಕೆಯಿಂದ ಇರುವಂತೆ ದೈವ ಸೂಚಿಸಿದ ಬೆನ್ನಲ್ಲೇ ಕಾಂತಾರ ತಂಡದಲ್ಲಿ ಸಾವುಗಳು ಸಂಭವಿಸುತ್ತಲೇ ಇವೆ.

ಕಾಂತರ-2 ಚಿತ್ರೀಕರಣ ತೀರ್ಥಹಳ್ಳಿ ತಾಲೂಕಿನ ಸುತ್ತ ಮುತ್ತ ನಡೆಯುತ್ತಿದ್ದು ಯಡೂರು ಹಾಗೂ ಆಗುಂಬೆ ಸಮೀಪ ಚಿತ್ರತಂಡ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಂಡಿದೆ.
ನಿನ್ನೆ ಚಿತ್ರೀಕರಣ ಮುಗಿಸಿ ರಾತ್ರಿ ಊಟ ಮಾಡಿದ್ದಯುವ ಕಲಾವಿದನಿಗೆ ಎದೆನೋವು ಕಾಣಿಸಿಕೊಂಡಿದ್ದು ತಕ್ಷಣವೇ ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿದರು ಸಹ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.

ಮೇ 6 – ಜೂನಿಯರ್ ಕಲಾವಿದ ಕಪಿಲ್, ಸೌಪರ್ಣಿಕ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಮೇ 12ಕ್ಕೆ ಕುಂದಾಪುರದಲ್ಲಿ ಮೆಹಂದಿ ಕಾರ್ಯಕ್ರಮದಲ್ಲಿ ಹೃದಯಾಘಾತದಿಂದ ರಾಕೇಶ್ ಪೂಜಾರಿ  ಸಾವನ್ನಪ್ಪಿದ್ದರು.ಈಗ ಯುವ ಕಲಾವಿದ ಕೇರಳದ ವಿಜು ವಿಕೆ ಸಾವನ್ನಪ್ಪಿದ್ದಾರೆ.  ಕಾಂತಾರ ಚಿತ್ರತಂಡದಲ್ಲಿ ಇದು 3ನೇ ಸಾವಾಗಿದ್ದು ಎಲ್ಲರಿಗೂ ಶಾಕ್ ಕೊಟ್ಟಿದೆ.

ಈ ಹಿಂದೆ ದೈವ ಶೂಟಿಂಗ್ ಟೈಮಲ್ಲಿ ಎಚ್ಚರದಿಂದ ಇರುವಂತೆ ಸೂಚಿಸಿತ್ತು. ದೈವ ಸೂಚಿಸಿದ ಬಳಿಕ ಇದೀಗ 3ನೇ ಕಲಾವಿದ ಸಾವನ್ನಪ್ಪಿದ್ದಾರೆ. ಕಾಂತಾರ ಚಿತ್ರತಂಡಕ್ಕೆ 3ನೇ ಸಾವಿನಿಂದ ಬಿಗ್ ಶಾಕ್ ಆಗಿದೆ. ಕುಂದಾಪುರದಲ್ಲಿ ಸೆಟ್‌ನಲ್ಲಿ ಒಂದು ಸಲ ಬೆಂಕಿ ಬಿದ್ದಿತ್ತು. ಇನ್ನೊಂದು ಸಲ ಕಲಾವಿದರಿದ್ದ ಟಿಟಿ ಆಕ್ಸಿಡೆಂಟ್ ಆಗಿತ್ತು. ಹೀಗೆಯೇ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಲೇ ಇದೆ.

Leave a Reply

Your email address will not be published. Required fields are marked *

Exit mobile version