ಯುವತಿಯ ಮೊಬೈಲ್ ಕಿತ್ತುಕೊಂಡು ಮರವೇರಿದ ಮಂಗ – ನಂತರ ನಡೆದಿದ್ದೇನು..!!?
ಯುವತಿಯೊಬ್ಬರ ಮೊಬೈಲ್ನ್ನು ಕಿತ್ತುಕೊಂಡು ಹೋಗಿ ಮರವೇರಿ ಕುಳಿತು ಆಟವಾಡಿಸಿದ ಘಟನೆ ಶಿವಮೊಗ್ಗ ನಗರದ ನಂಜಪ್ಪ ಆಸ್ಪತ್ರೆಯ ಬಳಿಯಲ್ಲಿ ನಡೆದಿದೆ.
ನಂಜಪ್ಪ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಕೆಲಸ ಮಾಡುತ್ತಿರುವ ಯುವತಿ ತನ್ನ ಮೊಬೈಲ್ನ್ನು ಕಿಟಕಿಯ ಬಳಿ ಇಟ್ಟು ಕೆಲಸ ಮಾಡುತ್ತಿದ್ದರು, ಆ ವೇಳೆ ಸ್ಥಳಕ್ಕೆ ಬಂದ ಮಂಗವೊಂದು ಕಿಟಕಿಯಲ್ಲಿ ಇಟ್ಟಿದ್ದ ಮೊಬೈಲನ್ನು ತೆಗೆದುಕೊಂಡು ಆಸ್ಪತ್ರೆಯ ಎದುರಿದ್ದ ದೊಡ್ಡ ಮರದ ತುದಿಗೆ ಹೋಗಿ ಕುಳಿತಿದೆ. ಆಗ ಅಲ್ಲಿದ್ದ ಜನರು ಮಂಗನಿಗೆ ಬಾಳೆಹಣ್ಣು ನೀಡಿ ಮೊಬೈಲ್ ಪಡೆಯುವ ಪ್ರಯತ್ನವನ್ನು ಮಾಡಿದರು ಸಹ ಮಂಗ ಮೊಬೈಲ್ನ್ನು ಗಟ್ಟಿಯಾಗಿಯೇ ಹಿಡಿದು ಕುಳಿತಿತ್ತು.
ಹೀಗೆ ಸುಮಾರು 1 ಗಂಟೆಗಳ ಕಾಲ ಮರದ ಕೆಳಗೆ ಮೊಬೈಲ್ಗೆ ಕರೆ ಮಾಡಿ, ಗಲಾಟೆ ಮಾಡಿ, ಬಾಳೆಹಣ್ಣು ನೀಡಿ ಮೊಬೈಲ್ನ್ನು ಹಿಂಪಡೆಯುವ ಸಾಕಷ್ಟು ಪ್ರಯತ್ನಗಳು ನಡೆಯಿತು. ಆದರೆ ಮಂಗ ತನ್ನಷ್ಟಕ್ಕೆ ತಾನು ಮೊಬೈಲ್ ನೋಡುತ್ತಾ ಅದನ್ನು ಕಿವಿಗೆ ಇಟ್ಟುಕೊಂಡು ಸಾಕಷ್ಟು ಚೇಷ್ಟೆ ಮಾಡುತ್ತಿತ್ತು. ಅದನ್ನು ನೋಡಲು ರಸ್ತೆಯಲ್ಲಿ ಹಲವಾರು ಜನ ಸೇರಿದ್ದರು. ಇದರಿಂದ ಕೆಲಕಾಲ ರಸ್ತೆಯಲ್ಲಿ ಸಂಚಾರ ದಟ್ಟಣೆಯೂ ಸಹ ಆಯಿತು. ಅದು ಸಹ ಭಯದಿಂದ ಕೆಳಗೆ ಬರಲೇ ಇಲ್ಲ.
ಕೊನೆಗೆ ಮಂಗ ಬಾಳೆ ಹಣ್ಣನ್ನು ನೊಡಿ ಆಸ್ಪತ್ರೆಯ ಸ್ಲ್ಯಾಬ್ ಮೇಲೆ ಬಂದಿತು. ಆಗ ಯುವಕರು ಪಟಾಕಿಯನ್ನು ಹೊಡೆದರು. ಇದರಿಂದ ಭಯಗೊಂಡ ಮಂಗ ಮೊಬೈಲ್ನ್ನು ಕೈಬಿಟ್ಟು ಬಾಳೆಹಣ್ಣು ತೆಗೆದುಕೊಂಡು ಹೋಯಿತು.
ಕಾಡುಪ್ರಾಣಿ ತಪ್ಪಿಸಲು ಹೋಗಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಕಾರು – ತಪ್ಪಿದ ಭಾರಿ ಅನಾಹುತ A car crashed into…
ರಿಪ್ಪನ್‌ಪೇಟೆಯಲ್ಲಿ 59ನೇ ಗಣೇಶೋತ್ಸವಕ್ಕೆ ಭರದ ಸಿದ್ದತೆ : ಸೆ.14ರಿಂದ 11 ದಿನಗಳ ಸಾಂಸ್ಕೃತಿಕ ಸಂಭ್ರಮ Rippanpete Ganeshotsava 2026: Karnataka…
ಹೊಸನಗರದಲ್ಲಿ ಸೆ.14ರಿಂದ 28ರವರೆಗೆ 8ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ: ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿದ್ಧತೆ Hosanagara Hindu Mahasabha…
ಜಿಂಕೆ ಮಾಂಸ ಸಾಗಾಟದ ಆರೋಪ: 34 ಕೆ.ಜಿ.ಗೂ ಅಧಿಕ ಮಾಂಸ ವಶ, ಓರ್ವ ಬಂಧನ Forest mobile squad seizes…
ಸರ್ಕಾರಿ ಬಸ್ ಸಮಯ ಬದಲಾವಣೆಗೆ ಆಗ್ರಹ: ವಿದ್ಯಾರ್ಥಿಗಳು, ಉದ್ಯೋಗಿಗಳ ಪ್ರತಿಭಟನೆ Students and employees protest in Thirthahalli demanding…
ಮೆಗ್ಗಾನ್ ನೂತನ ಹೃದ್ರೋಗ ಆಸ್ಪತ್ರೆಗೆ ಸಚಿವ ಮಧು ಬಂಗಾರಪ್ಪ ದಿಢೀರ್ ಭೇಟಿ; ₹6 ಕೋಟಿ ಅನುದಾನದ ಭರವಸೆ Shivamogga Minister…