Headlines

ವಿವಾಹಿತ ಮಹಿಳೆ ಅನುಮಾನಾಸ್ಪದ ಸಾವು – ಅತ್ತೆ ಮಾವನ ವಿರುದ್ದ FIR ದಾಖಲು

ವಿವಾಹಿತ ಮಹಿಳೆ ಅನುಮಾನಾಸ್ಪದ ಸಾವು – ಅತ್ತೆ ಮಾವನ ವಿರುದ್ದ FIR ದಾಖಲು

ಭದ್ರಾವತಿಯಲ್ಲಿ ವಿವಾಹಿತ ಮಹಿಳೆಯೋರ್ವಳು ಅನುಮಾನಸ್ಪದವಾಗಿ ಸಾವನ್ನಪ್ಪಿದ್ದು ಅತ್ತೆ ಮತ್ತು ಮಾವನ ವಿರುದ್ಧ ದೂರು ದಾಖಲಾಗಿದೆ.

ಶಾಜಿಯಾ ಭಾನು ಎಂಬ 24 ವರ್ಷದ ವಿವಾಹಿತ ಮಹಿಳೆ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದು ಆಕೆಯ ಸಾವಿಗೆ ಅತ್ತೆ ಮತ್ತು ಮಾವನವರು ಕೆಲಸಕ್ಕೆ ಹೋಗು ಎಂದು ಪೀಡಿಸುತ್ತಿದ್ದ ಕಾರಣ ಆಕೆ ಸಾವನ್ನಪ್ಪಿರುವುದಾಗಿ ಮೃತಳ ಕುಟುಂಬ ದೂರಿನಲ್ಲಿ ಉಲ್ಲೇಖಿಸಿದೆ.

ಕಾಗೆಕೋಡಮಗ್ಗಿಯ ನಿವಾಸಿ ಶಾಜಿಯಾ ಭಾನು ತಿಪ್ಲಾಪುರ ಕ್ಯಾಂಪ್ ನ ನಿವಾಸಿ ಸಮೀರ್ ಯಾನೆ ಜಮೀರ್ ಎಂಬುವರಿಗೆ ನಾಲ್ಕು ವರ್ಷದ ಹಿಂದೆ ಮದುವೆಯಾಗಿದ್ದರು. ಇಬ್ಬರಿಗೂ ಸಣ್ಣ ಮಗುವೊಂದಿದೆ. 2023 ರಲ್ಲಿ ನಡೆದ ರಾಝಿಯಾ ಎಂಬಾತನ ಕೊಲೆ ಪ್ರಕರಣದಲ್ಲಿ ಶಾಜಿಯಾಳ ಗಂಡ ಸಮೀರ್ ಯಾನೆ ಜಮೀರ್ ಮತ್ತು ಆತನ ಸಹೋದರ ಸುಹೇಬ್ ಯಾನೆ ಶೇಬು ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಹೊರ ಬಂದಿದ್ದರು

ಇತ್ತೀಚೆಗೆ ಶಾಜಿಯಾಗೆ ಅತ್ತೆ ಗುಲಾಬ್ ಮತ್ತು ಮಾವ ನಜೀರ್ ಇಬ್ಬರೂ ನೀನು ಹೊರಗಡೆ ದುಡಿದು ನಮಗೆ ಸಾಕು ಎಂದು ಒತ್ತಡ ಹಾಕಿದ್ದಾರೆ. ಈ ಬಗ್ಗೆ ಶಾಜೀಯ ತನ್ನ ತವರು ಮನೆಗೆ ಬಂದು ಅತ್ತೆ ಮಾವಂದಿರು ಕೆಲಸ ಮಾಡಲು ಹೇಳುತ್ತಿದ್ದಾರೆ ಎಂದು ಅವಲೆತ್ತುಕೊಂಡಿದ್ದಳು. 

ಮೇ.27 ರಂದು ತಿಪ್ಲಾಪುರದ ವಾಸಿ ಸಲೀಂ ಶಾಜಿಯಾ ಭಾನು ಅವರ ಕುಟುಂಬಕ್ಕೆ ನಿಮ್ಮ ಮಗಳು ಸಾವನ್ನಪ್ಪಿದ್ದಾರೆ ಎಂದು ವಿಷಯ ಮುಟ್ಟಿಸಿದ್ದರು. ಶಾಜಿಯಾಳ ತವರು ಕುಟುಂಬ ತಿಪ್ಲಾಪುರಕ್ಕೆ ದಾವಿಸಿದಾಗ ದಿವಾನ್ ಕಾಟ್ ಮೇಲೆ ಶಾಜಿಯಾಳ ಮೃತ ದೇಹವನ್ನ ಮಲಗಿಸಲಾಗಿತ್ತು.  ಎಲ್ಲರ ಸಮ್ಮುಖದಲ್ಲಿ ಅತ್ತೆ ಗುಲಾಬ್ ಮತ್ತು ಮಾವ ನಜೀರ್ ರನ್ನ ಪ್ರಶ್ನಿಸಿದ ಶಾಜಿಯಾಳ ಕುಟುಂಬ ಆಕೆಯಸಾವಿನ ಬಗ್ಗೆ ತಿಳಿಯಲು ಮುಂದಾಗಿದೆ.

ಆಗ ಅತ್ತೆ ಗುಲಾಬ್ ಮತ್ತು ಮಾವ ಆಕೆಯ ಸಾವು ಲೋ ಬಿಪಿಯಿಂದಾಗಿದೆ ಎಂದು ಒಮ್ನೆ ಉತ್ತರಿಸಿದರೆ, ಮತ್ತೊಮ್ಮೆ ಆಜೆ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದಿದ್ದಾರೆ. ಇದೇ ವೇಳೆ ಕುಟುಂಬಕ್ಕೆ  ಶಾಜಿಯಾಳ ಕುತ್ತಿಗೆ ಭಾಗದಲ್ಲಿ ಕಲೆ ಕಂಡಿದೆ.

ಶಾಜಿಯಾಳ ಕುತ್ತಿಗೆ ಮೇಲಿನ ಕಲೆಯನ್ನ ಪ್ರಶ್ನಿಸಿದಾಗ ಇಲ್ಲ ಆಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಉತ್ತರ ನೀಡಿದ್ದಾರೆ. ಈ ಗೊಂದಲದ ಹೇಳಿಕೆಗಳು ಮೃತಳ ಸಾವಿನ ಬಗ್ಗೆ ಅನುಮಾನ ಮೂಡಿಸಿದೆ‌. ಈ ಹಿನ್ನಲೆಯಲ್ಲಿ ಅತ್ತೆ ಗುಲಾಬ್ ಮತ್ತು ಮಾವ ನಜೀರ್ ವಿರುದ್ಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಆಗಿದೆ.

Leave a Reply

Your email address will not be published. Required fields are marked *

Exit mobile version